ವಿಜಯಪುರ: ವಿಜಯಪುರ ಜಿಲ್ಲೆಗೆ(Vijayapura District) ಆದಷ್ಟು ಬೇಗ ಸಚಿವ ಸ್ಥಾನ(Ministership) ಸಿಗುತ್ತದೆ. ಬಿಜೆಪಿ ಕಾರ್ಯಕಾರಿಣಿ(BJP Executive Committee Meeting) ಮುಗಿದ ಮೇಲೆ ಏ. 20ರ ನಂತರ ಸಚಿವ ಸ್ಥಾನ ಸಿಗಬಹುದು ಎಂದು ವಿಜಯಪುರ ಜಿಲ್ಲಾ ಉಸ್ತುವಾರಿ(District Incharge Miniater) ಸಚಿವ ಉಮೇಶ ಕತ್ತಿ(Umesh Katti) ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಈ ಮೂಲಕ ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸುಳಿವು ನೀಡಿದ್ದಾರೆ. ಸಚಿವರು ತಿಳಿಸಿದರು.
ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ
ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆ. 18 ಕ್ಷೇತ್ರಗಳನ್ನು ಒಳಗೊಂಡಿರುವ ಜಿಲ್ಲೆಯಾಗಿದೆ. ಇದನ್ನು ನಾವು ಮಾಡಿದ್ದಲ್ಲ. ಬ್ರಿಟೀಷರು ಮಾಡಿದ್ದು. ಬೆಳಗಾವಿ, ಚಿಕ್ಕೋಡಿ, ಬೈಲಹೊಂಗಲಗಳಲ್ಲಿ ಎಸಿ ಕಚೇರಿ ಮಾಡಿ ಮೂರು ವಿಭಾಗಗಳಾಗಿ ವಿಂಗಡನೆ ಮಾಡಿತ್ತು. ಮೊದಲು ಚಿಕ್ಕೋಡಿ ಜಿಲ್ಲೆಯಾಗಲಿ. ಆಮೇಲೆ ಯಾರಾರಿಗೆ ಏನೇನು ಬೇಕೋ ತಂತಮ್ಮ ಓಣಿಗಳಿಗೆಲ್ಲ ಡಿಸಿ ಆಫೀಸು, ಜಿಲ್ಲೆಗಳನ್ನು ಮಾಡಿಕೊಂಡು ಹೋಗಲಿ. ಅಥಣಿ, ತೆಲಸಂಗ ಬೇಕಿದ್ದರೂ ಜಿಲ್ಲೆ ಮಾಡಿಕೊಳ್ಳಲಿ. ಆದರೆ, ಮೊದಲು ಚಿಕ್ಕೋಡಿ ಜಿಲ್ಲೆಯಾಗಲಿ ಎಂದು ಅವರು ಹೇಳಿದರು ಈ ಮೂಲಕ ಜಾರಕಿಹೊಳಿ ಕುಟುಂಬಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ನಾನು ಅತಿಥಿ ಜಿಲ್ಲಾ ಉಸ್ತುವಾರಿ ಸಚಿವನಲ್ಲ
ಜಯಂತಿ ಧ್ವಜಾರೋಹಣ ಕಾರ್ಯಕ್ರಮಕ್ಕೆ ಮಾತ್ರ ಹಾಜರಾಗುತ್ತೀದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ನಾನು ಅತಿಥಿ ಜಿಲ್ಲಾ ಉಸ್ತುವಾರಿ ಸಚಿವನಲ್ಲ. ಕೆಡಿಪಿ ಸಭೆ ಮಾಡಿದ್ದೇನೆ. ಏ. 25 ರಂದು ಮತ್ತೆ ವಿಜಯಪುರಕ್ಕೆ ಬರುತ್ತೇನೆ. ಜಿಲ್ಲಾಧಿಕಾರಿ, ಜಿ. ಪಂ. ಸಿಇಓ ಜೊತೆ ಮಾತನಾಡಿದ್ದೇನೆ. ಜವಾಬ್ದಾರಿಯುತವಾಗಿ ಜಿಲ್ಲಾ ಉಸ್ತುವಾರಿಕೆಯನ್ನ ಮಾಡುತ್ತಿದ್ದೇನೆ ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪುರ, ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಜಿ. ಪಂ. ಸಿಇಓ ರಾಹು ಶಿಂಧೆ, ಎಸ್ಪಿ ಎಚ್. ಡಿ. ಆನಂದ ಕುಮಾರ, ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ಮುಂತಾದವರು ಉಪಸ್ಥಿತರಿದ್ದರು.