ಗುಮ್ಮಟ ನಗರಿಯಲ್ಲಿ ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ ಶಾಸಕ ಯತ್ನಾಳ, ಡಿಸಿ, ಎಸ್ಪಿ, ಜಿ. ಪಂ. ಸಿಇಓ ಭಾಗಿ

ವಿಜಯಪುರ: ಗುಮ್ಮಟ ನಗರಿ(Gummata Nagari) ವಿಜಯಪುರದಲ್ಲಿ(Vijayapura) ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ(Dr. B. R. Ambedkar) ಜಯಂತಿಯನ್ನು(Jayanti) ಸಡಗರ ಮತ್ತು ಸಂಭ್ರಮದಿಂದ(Celbration) ಆಚರಿಸಲಾಗುತ್ತಿದೆ. 

ವಿಜಯಪುರ ನಗರದ ಜಲನಗರದಲ್ಲಿ ಡಾ. ಬಿ. ಆರ್. ಅಂಬೇಡ್ಕರ ಜಯಂತಿಯನ್ನು ಆಚರಿಸಲಾಯಿತು

ವಿಜಯಪುರ ನಗರದ ಜಲನಗರದ ಬುದ್ಧ ವಿವಾಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ಎಸ್ಪಿ ಎಚ್. ಡಿ. ಆನಂದ ಕುಮಾರ, ಜಿ. ಪಂ. ಸಿಇಓ ರಾಹುಲ ಶಿಂಧೆ, ದಲಿತ ಸಂಘಟನೆಗಳ ಮುಖಂಡರು ಮತ್ತು ಇತರರು ಪಾಲ್ಗೋಂಡರು.  ಅಲ್ಲದೇ, ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ನಂತರ ನಡೆದ ಅಂಬೇಡ್ಕರ ಭಾವಚಿತ್ರ ಭವ್ಯ ಮೆರವಣಿಗೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಚಾಲನೆ ನೀಡಿದರು.  ಬುದ್ಧ ವಿಹಾರದಿಂದ ಅಂಬೇಡ್ಕರ ಕ್ರೀಡಾಂಗಣದವರೆಗೂ ಈ ಮೆರವಣಿಗೆ ನಡೆಯಿತು.  ಈ ಸಂದರ್ಭದಲ್ಲಿ ವಿಜಯಪುರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜು ಆಲಗೂರ ಈ ಸಂದರ್ಭದಲ್ಲಿ ವಿಜಯಪುರ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರು, ದಲಿತ ಸಂಘಟನೆಗಳ ಮುಖಂಡರು, ಸಮಾಜ ಬಾಂಧವರು, ನಾಗರಿಕರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡಿದ್ದರು.

 

ಬಳಿಕ ವಿಜಯಪುರ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಿದ ಶಾಸಕ ಯತ್ನಾಳ ಅವರು, ಅಲ್ಲಿರುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

 

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಜಿ. ಪಂ. ಮಾಜಿ ಸದಸ್ಯ ದಾನಪ್ಪ ಕಟ್ಟಿಮನಿ, ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಬಿರಾದರ, ಎಂ. ಎಸ್. ಕರಡಿ, ಪರಶುರಾಮ ರಜಪೂತ, ಮುಖಂಡರಾದ ಗುರು ಗಚ್ಚಿನಮಠ, ದಾದಾಸಾಹೇಬ್ ಬಾಗಾಯತ, ಮಡಿವಾಳ ಯಾಳವಾರ, ಸಂತೋಷ ತಳಕೇರಿ ಸೇರಿದಂತೆ ದಲಿತ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರು, ಸಮಾಜದ ಬಾಂಧವರು, ನಾಗರಿಕರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌