ಬಸವ ನಾಡಿನಾದ್ಯಂತ ರಾಮಭಕ್ತ ಹನುಮ ಜಯಂತಿಯ ಸಡಗರ, ಸಂಭ್ರಮ

ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲಾದ್ಯಂತ(Vijayapura District) ರಾಮಭಕ್ತ ಹನುಮ ಜಯಂತಿ(Ramabhakta Hanuma Jayanti) ಸಂಭ್ರಮ, ಸಡಗರ(Celebration) ಮನೆ ಮಾಡಿದೆ. ವಿಜಯಪುರ ಜಿಲ್ಲೆಯ ಪ್ರತಿಯೊಂದು ಗ್ರಾಮದಲ್ಲಿರುವ ಮಾರುತಿ ಮಂದಿರಗಳಲ್ಲಿ(Maruti Temples) ಆಂಜನೇಯ ಹನುಮ ಜಯಂತಿ ಆಚರಣೆ ಭರದಿಂದ ಸಾಗಿದೆ.

ವಿಜಯಪುರ ನಗರದ ಆದರ್ಶ ನಗರದಲ್ಲಿರುವ ಮಾರುತಿ ದೇವಸ್ಥಾಮ

ವಿಜಯಪುರ ನಗರದಲ್ಲಿ ಅತಿ ಎತ್ತರವಾದ ಹನುಮಾನ್ ಮೂರ್ತಿ ಹೊಂದಿರುವ ಆದರ್ಶ ನಗರದಲ್ಲಿ ಕೂಡ ನಸುಕಿನ‌ಜಾವದಿಂದಲೇ ನಾನಾ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆದರ್ಶ ನಗರದ ನಿವಾಸಿಗಳು ಮತ್ತು ಬೇರೆ ಬೇರೆ ಕಡೆಗಳಿಂದ ಬಂದಿರುವ ಹನುಮನ ಭಕ್ತರು ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ದೇವಸ್ಥಾನದಲ್ಲಿರುವ ಸುಮಾರು 16 ಅಡಿ ಎತ್ತರದ ರಥವನ್ನು ಎಳೆದ ಭಕ್ತರು ದೇವಸ್ಥಾನದ ಸುತ್ತು ಹಾಕುವ ಮೂಲಕ ಜನರಿಗೆ ಒಳ್ಳೆಯದಾಗಲೆಂದು ಪ್ರಾರ್ಥಿಸಿದರು‌. ಇದೇ ಸಂದರ್ಭದಲ್ಲಿ ಪಲ್ಲಕ್ಕಿಯಲ್ಲಿ ಹನುಮನ ಮೂರ್ತಿಯನ್ನು ಇಟ್ಟು ಮೆರವಣಿಗೆ ನಡೆಸಲಾಯಿತು.

ಅಲ್ಲದೆ, ದೇವಸ್ಥಾನಕ್ಕೆ ಬಂದ ಭಕ್ತಾದಿಗಳಿಗೆ ಅಲ್ಪೋಪಹಾರ ಮತ್ತು ಕೋಸಂಬರಿ ಹಾಗೂ ಪಾನಕದ ವ್ಯವಸ್ಥೆ ಮಾಡಲಾಗಿತ್ತು.

ಆದರ್ಶ ನಗರ ಮಾರುತಿ ಮಂದಿರ ಯಲಗೂರಿನಂತೆ ಜಾಗೃತ ದೇವಸ್ಥಾನವಾಗಿದೆ. ಇಲ್ಲಿನ‌ ಹನಿಮಂತ ದೇವರ ಆಶೀರ್ವಾದದಿಂದ ನನ್ನ‌ ಧರ್ಮಪತ್ನಿ ಜಿ. ಪಂ. ಸದಸ್ಯೆಯಾಗಿ ಆಯ್ಕೆಯಾಗಿದ್ದರು. ವ್ಯವಹಾರದಲ್ಲಿಯೂ ನಮ್ಮ ಕುಟುಂಬ ಅಭಿವೃದ್ಧಿ ಹೊಂದಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಜಿ. ಆರ್. ಅಂಗಡಿ ಬಸವ ನಾಡು ವೆಬ್ ಗೆ ಮಾಹಿತಿ ನೀಡಿದರು.

ಮಹಾನಗರ ಪಾಲಿಕೆ ಸದಸ್ಯನಾಗಿ ಸತತ‌ ಎರಡು ಬಾರಿ ಆಯ್ಕೆಯಾಗಿದ್ದೇನೆ. ಆಯ್ಕೆಯಾದ ಮೇಲೆ ದೇವಸ್ಥಾನದ ಅಭಿವೃದ್ಧಿಗೆ ಸಾಕಷ್ಉ ಕೆಲಸ ಮಾಡಿದ್ದೇನೆ. ಇದಕ್ಕೆಯ ಆದರ್ಶ ನಗರ ಹನುಮಾನ ದೇವರ ಆಶೀರ್ವಾದವೇ ಕಾರಣ ಎಂದು ವಿಜಯಪುರ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಂ. ಸ ಮನನ ಎಂ. ಎಸ್. ಕರಡಿ ತಿಳಿಸಿದರು.

ಸತತ 28 ವರ್ಷಗಳಿಂದ ಆದರ್ಶ ನಗರ ದೇವಸ್ಥಾನದಲ್ಲಿ ಹನುಮ ಜಯಂತಿ ಆಚರಿಸಲಾಗುತ್ತಿದೆ. ಕಳೆದ ಎರಡು ವರ್ಷ ಕೊರೊನಾದಿಂದಾಗಿ ಹನುಮ ಜಯಂತಿ ಸಾಂಕೇತಿಕವಾಗಿತ್ತು. ಈ ಬಾರಿ ಮತ್ತೆ ಸಂಭ್ರಮದಿಂದ ಹನುಮ‌ ಜಯಂತಿ ಆಚರಣೆ ನಡೆಯುತ್ತಿದೆ ಎಂದು ಬ್ಯಾಂಕ್ ಅಧಿಕಾರಿ ಧರ್ಮರಾಯ ಮಮದಾಪುರ ವಸವ ನಾಡು ವೆಬ್ ಗೆ ತಿಳಿಸಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಜಿ. ಡಿ. ಅಂಗಡಿ, ಡಿ. ಆರ್. ಮಮದಾಪೂರ, ಎಸ್.ಐ. ಪಟ್ಟಣಶೆಟ್ಟಿ, ನಾಗಣ್ಣ ಗುಂಜುಟಗಿ, ಅಶೋಕ ನಡವಿನಮನಿ, ಎಸ್. ಎಸ್. ಹರನಾಳ, ಎ. ಎಂ. ಹಡಪದ, ಎಸ್. ಪಿ. ಚೌಧರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌