ನಿಂಬಾಳ ಕೆ. ಡಿ. ಗ್ರಾಮದಲ್ಲಿ ಒತ್ತುವರಿಯಾದ ರಸ್ತೆ, ದಾರಿ ಸಮಸ್ಯೆ ಸರಿಪಡಿಸಲು ಕ್ರಮ- ಡಿಸಿ ಪಿ. ಸುನೀಲ ಕುಮಾರ.

ವಿಜಯಪುರ:  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಿಂಬಾಳ ಕೆ. ಡಿ.(Nimbal K D) ಗ್ರಾಮದಲ್ಲಿ (Village) ಒತ್ತುವರಿಗಿರುವ ರಸ್ತೆ ಮತ್ತು ದಾರಿಗಳ ಸಮಸ್ಯೆಗಳನ್ನು(Roads Enchroachments and Problems) ಸರಿಪಡಿಸಲಾಗುವದು.  ರಸ್ತೆಗಳ ಕೊರತೆಗಳನ್ನು ಗ್ರಾಮ ಮಟ್ಟದಲ್ಲಿ ಬಗೆಹರಿಸುವದು ಸೂಕ್ತವಾಗಿದ್ದು, ಕುಡಿಯುವ ನೀರಿನ ಸಮಸ್ಯೆ(Drinking Water Problem) ನಿವಾರಣೆಗೆ ಪಂಚಾಯಿತಿ ವತಿಯಿಂದ ಟ್ಯಾಂಕರ ಮೂಲಕ ನೀರು ಪೂರೈಸಲಾಗುವದು.  ಬರ ಪೀಡಿತ ಎಂದು ಘೋಷಣೆಯಾದ ಮೇಲೆ ಜಿಲ್ಲಾಡಳಿತದಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೂ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ(Deputy Commissioner P Sunil Kumar) ಹೇಳಿದರು.

ನಾನಾ ಯೋಜನೆಗಳ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಪ್ರಮಾಣ ಪತ್ರ ವಿತರಿಸಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಿಂಬಾಳ ಕೆ. ಡಿ. ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಂಚಾಯಿತಿಗಳಲ್ಲಿ ಈ ಬಾರಿ ತೆರಿಗೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ.  15ನೇ ಹಣಕಾಸಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವದು.  ನೀರಿನ ಸಮಸ್ಯೆ ಗಂಭೀರವಾಗಿದ್ದರೆ ಜಿಲ್ಲಾಡಳಿತದಿಂದ ಸರಕಾರದ ಗಮನಕ್ಕೆ ತರಲಾಗುವುದು.  ಗ್ರಾಮದಲ್ಲಿ ಪ್ರತಿಯೊಬ್ಬರು ಆಯುಷ್ಮಾನ್  ಕಾರ್ಡ್ ಮಾಡಿಸಬೇಕು ಮತ್ತು ವೈದ್ಯಕೀಯ ಸೌಲಭ್ಯ ಪಡೆಯಬೇಕು ಎಂದು ಅವರು ಹೇಳಿದರು.

ಗ್ರಾಮ ಒನ್ ಕೇಂದ್ರದಲ್ಲಿ ಪೆನ್ಷನ್, ಪಹಣಿ ಸೇರಿದಂತೆ ಹಲವಾರು ಪ್ರಮಾಣ ಪತ್ರಗಳನ್ನು ನೀಡಲಾಗುತ್ತಿದ್ದು, ಗ್ರಾಮಸ್ಥರು ಇದರ ಲಾಭ ಪಡೆಯಬೇಕಾಗಿದೆ.  ಕೃಷಿ ಚಟುವಟಿಕೆ ಸಾವಯವ ಕೃಷಿ, ಮತ್ತು ಹೈನುಗಾರಿಕೆ ಹಲವಾರು ಯೋಜನೆಗಳಿದ್ದು ರೈತರು ಮಾಹಿತಿಗಳನ್ನು ಸಂಬಂಧಿಸಿದ  ಇಲಾಖೆಯಿಂದ ಪಡೆಯಬಹುದಾಗಿದೆ ಎಂದು ಪಿ. ಸುನೀಲ ಕುಮಾರ ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಬಿರಾದಾರ ಮಾತನಾಡಿ,  ಗ್ರಾಮದ ಕೆರೆಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು.  ರಸ್ತೆಯ ಡಾಂಬರಿಕರಣ  ಮಾಡಬೇಕು.   ಗ್ರಾಮದಿಂದ ರೈತ ಸಂಪರ್ಕ ಕೇಂದ್ರ ದೂರವಿದೆ.  ರಸಗೊಬ್ಬರಗಳನ್ನು ತರಲು ರೈತರಿಗೆ ನೆರವಾಗಬೇಕು.  ಗ್ರಂಥಾಲಯ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲಿಸಿದರು.

ಬಳಿಕ  ಜಿಲ್ಲಾಧಿಕಾರಿಗಳು ಗ್ರಾಮದ ಅಂಗನವಾಡಿ ಕೇಂದ್ರ ಮತ್ತು ಪಶು ಚಿಕಿತ್ಸಾಲಯ ವೈದ್ಯ ಕೀಯ ಕೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು ಸುಕನ್ಯ ಸಮೃದ್ಧಿ ಯೋಜನೆಯ ಪಾಸ್ ಬುಕ್, ಪಡಿತರ ಚೀಟಿ ಆಯುಷ್ಮಾನ್ ಭಾರತ ಆರೋಗ್ಯ ಪ್ರಮಾಣ ಪತ್ರ, ಇಂದಿರಾ ಗಾಂಧಿ ವೃದ್ದಾಪ್ಯ ಪ್ರಮಾಣ ಪತ್ರಗಳನ್ನು ಫಲನುಭವಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಕೃಷಿ ಉತ್ಪನ್ನ ಸೆಕೆನ್ಡರಿ ಅಗ್ರಿಕಲ್ಚರ್ ಸೇರಿದಂತೆ ಕೃಷಿ ಚಟುವಟಿಕೆಗಳು ಮತ್ತು ರಸಗೊಬ್ಬರಗಳ ಕುರಿತು ಮಾಹಿತಿ ನೀಡಿದರು.  ರೇಷ್ಮೆ ಇಲಾಖೆ , ಪಶು ಸಂಗೋಪನೆ, ಸೇರಿದಂತೆ ನಾನಾ ಇಲಾಖೆಗ;ಳ ಮುಖ್ಯಸ್ಥರು ರೈತರಿಗೆ ಸರಕಾರದಿಂದ ರೂಪಿಸಲಾಗಿರುವ ಯೋಜನೆಗಳ ಕುರಿತ ಮಾಹಿತಿ ನೀಡಿದರು.

ಕೆರೆಯನ್ನು ವೀಕ್ಷಿಸಿದ ಡಿಸಿ, ಕೆರೆಯ ನೀರು ಇಲ್ಲಿನ ಅನ್ನದಾತರ ಒಂದು ಬಹುದೊಡ್ಡ  ಸಮಸ್ಯೆಯಾಗಿದ್ದು, ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿ  ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

 

ನಾನಾ  ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಸಲ್ಲಿಕೆಯಾಗಿರುವ  ಅರ್ಜಿಗಳ ಮಾಹಿತಿ ಪಡೆದರು.  ಒಟ್ಟು 103 ನಾನಾ ಅರ್ಜಿಗಳು ಹಾಗೂ ಈ ದಿನ 83  ಅರ್ಜಿಗಳನ್ನು  ಜಿಲ್ಲಾಧಿಕಾರಿಗಳು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಹುಲ ಶಿಂದೆ, ಇಂಡಿ ಉಪವಿಭಾಗಾಧಿಕಾರಿ ರಾಮಚಂದ ಗಡಾದೆ,  ತಹಸೀಲ್ದಾರ ಸಿ. ಎಸ್. ಕುಲಕರ್ಣಿ,  ಗ್ರಾಮ ಪಂಚಾಯಿತತಿ ಅಧ್ಯಕ್ಷ ಶಿವಾನಂದ ಬಿರಾದಾರ ಮತ್ತು ಜಿಲ್ಲೆಯ ನಾನಾ  ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌