ವಿಜಯಪುರ: ನಾವು ಸಂಸ್ಕಾರಯುತ ಜೀವನ(Valuable Life) ನಡೆಸಿ ಧರ್ಮದ(Religious) ಹಾದಿಯಲ್ಲಿ(Way) ನಡೆದಾಗ ಮಾತ್ರ ಬದುಕು ಸುಂದರವಾಗಿರುತ್ತದೆ(Life Is Beautiful) ಎಂದು ಕೆಪಿಸಿಸಿ ಮುಖಂಡ ಸಂಗಮೇಶ ಬಬಲೇಶ್ವರ(KPCC Leader Sangamesh Babaleshwar) ಹೇಳಿದರು.
ವಿಜಯಪುರ ನಗರದ ಸಂಗಮೇಶ್ವರ ಕಾಲನಿಯಲ್ಲಿ ಸಂಗಮೇಶ್ವರ ಯಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ಮಾನವೀಯತೆ ಎಲ್ಲಕ್ಕಿಂತ ದೊಡ್ಡ ಧರ್ಮ. ಅದಕ್ಕಾಗಿ ನಾವು ಬಸವಾದಿ ಶರಣರ ಆಶಯದಂತೆ ದಯೆ, ಕರುಣೆ, ಪ್ರೀತಿ ಭಾತೃತ್ವದ ನೆರಳಲ್ಲಿ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕು. ಮಕ್ಕಳಿಗೆ ಬಾಲ್ಯದಲ್ಲಿಯೇ ಧಾರ್ಮಿಕ ಸಂಸ್ಕಾರವನ್ನು ನೀಡಬೇಕು. ಇಂಥ ಯಾತ್ರಾ ಮಹೋತ್ಸವದಲ್ಲಿ ಪೂಜ್ಯರನ್ನು ಕರೆಸಿ ಧರ್ಮ ಸಭೆಗಳನ್ನು ನಡೆಸಿ ಮಕ್ಕಳಲ್ಲಿ ಸಂಸ್ಕಾರದ ಬೀಜ ಬಿತ್ತುವ ಕೆಲಸ ಮಾಡುತ್ತಿರುವುದು ಅಭಿನಂದನಾರ್ಹವಾದ ಕೆಲಸವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಶಂಭುಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಶ್ರೀ ಜಗದೀಶ್ವರಯ್ಯ ಹಿರೇಮಠ, ಕಾಶಿನಾಥ ಬಗಾದಿ, ಮುರಗೋಡ, ರಾಮಣ್ಣಾ ಅಂಕಲಗಿ, ಸಂಗಪ್ಪ ಪೂಜಾರಿ, ನಿವೃತ್ತ ಶಿಕ್ಷಣಾಧಿಕಾರಿ ಕೌಲಿಗೆ, ಸಂಗಪ್ಪ ಯಾದವಾಡ, ಗವಿಸಿದ್ಧ ಅವಟಿ, ಆನಂದ ಕೋಳೂರ, ಸಿದ್ದರಾಮಯ್ಯ ಹಿರೇಮಠ, ಅಂಗಡಿ, ರಾಜು ಚೌದರಿ, ಪವನ ಲಿಂಗದಳ್ಳಿ, ರವಿಕಿರಣ ಕೆಂಗನಾಳ ಮುಂತಾದವರು ಉಪಸ್ಥಿತರಿದ್ದರು.
ಸಾವಿತ್ರಿ ಅಂಗಡಿ ಪ್ರಾರ್ಥಿಸಿದರು. ಶಿಕ್ಷಕ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.