ವಿಜಯಪುರ ಡಿಸಿ ವರ್ಗಾವಣೆ- ವಿಜಯಮಹಾಂತೇಶ ಬಿ. ದಾನಮ್ಮನವರು ನೂತನ ಜಿಲ್ಲಾಧಿಕಾರಿ
ವಿಜಯಪುರ: ವಿಜಯಪುರ(Vijayapura) ಜಿಲ್ಲಾಧಿಕಾರಿ(Deputy Commissioner) ಪಿ. ಸುನೀಲ ಕುಮಾರ(P Sunil Kumar) ಅವರನ್ನು ವರ್ಗಾವಣೆ(Transfer) ಮಾಡಿ ಸರಕಾರ ಆದೇಶ(Government Ordered) ಹೊರಡಿಸಿದೆ. 2013ನೇ ಬ್ಯಾಚಿನ ಐಎಎಸ್ ಅಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ ಅವರನ್ನು ವಿಜಯಪುರದ ನೂತನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ. ಪಿ. ಸುನೀಲ ಕುಮಾರ ಕಳೆದ 2020ರ ಆಗಷ್ಟ್ ನಲ್ಲಿ ಕೊರೊನಾ ಉತ್ತುಂಗದಲ್ಲಿದ್ದಾಗ ವಿಜಯಪುರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಪಿ. ಸುನೀಲ ಕುಮಾರ ತಮ್ಮ ಮಾತಿಗಿಂತಲೂ ಕೃತಿಯ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದರು. […]
ಮತ್ತೆ ಜೆಡಿಎಸ್ ತೊರೆಯಲು ನಿರ್ಧರಿಸಿದ ಮಾಜಿ ಎಂ ಎಲ್ ಸಿ ಬಿ. ಜಿ. ಪಾಟೀಲ ಹಲಸಂಗಿ- ಯಾವ ಪಕ್ಷ ಸೇರಬಹುದು ಗೊತ್ತಾ?
ವಿಜಯಪುರ: ಜನತಾ(Janata) ಪರಿವಾರದ(Pariwar) ಹಿರಿಯ ಮುಖಂಡ(Senior Leader) ಮಾಜಿ ಎಂಎಲ್‌ಸಿ(Former MLC) ಬಿ. ಜಿ. ಪಾಟೀಲ ಹಲಸಂಗಿ(B. G. Patil Halasangi) ಮತ್ತೋಮ್ಮೆ ಜೆಡಿಎಸ್ ತೊರೆಯಲು ನಿರ್ಧರಿಸಿದ್ದಾರೆ. ಬಸವ ನಾಡಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಏ. 23ರ ನಂತರ ಬಿ. ಜಿ. ಪಾಟೀಲ ಹಲಸಂಗಿ ತಮ್ಮ ಮುಂದಿನ ನಿರ್ಧಾರ ಪ್ರಕಟಿಸಲಿದ್ದಾರೆ. ಏ. 23ರ ವರೆಗೆ ವಿಜಯಪುರ ಜಿಲ್ಲೆಯ ನಾನಾ ಕಡೆಗಳಲ್ಲಿ ಜೆಡಿಎಸ್ ಕೈಗೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ಅವರು ಜೆಡಿಎಸ್ […]
ಕರ್ನಾಟಕಕ್ಕೆ ಬೇಕಾಗಿದ್ದಾರೆ ಒಬ್ಬ ಒಳ್ಳೆಯ ಗೃಹ ಮಂತ್ರಿ ಎಂದು ಟಿವಿ, ಪೇಪರ್ ನಲ್ಲಿ ಹಾಕಿ ಎಂದ ಶಾಸಕ ಯತ್ನಾಳ
ವಿಜಯಪುರ: ಕರ್ನಾಟಕಕ್ಕೆ(Karnataka) ಓರ್ವ ಸ್ಟ್ರಾಂಗ್ ಹೋಂ ಮಿನಿಸ್ಟರ್(Strong Home Minister) ಬೇಕಾಗಿದ್ದಾರೆ. ಒಬ್ಬ ಒಳ್ಳೆಯ ಗೃಹಮಂತ್ರಿ ಬೇಕಾಗಿದ್ದಾರೆ(Required) ಎಂದು ಟಿವಿ ಮತ್ತು ಪೇಪರಿನಲ್ಲಿ ಹಾಕಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ(BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಸ್ವಪಕ್ಷದ ಗೃಹ ಮಂತ್ರಿ ವಿರುದ್ಧವೇ ಹರಿಹಾಯ್ದಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗೃಹ ಸಚಿವರು ಗಂಭೀರವಾಗಿರಬೇಕು. ಈ ಘಟನೆಗಳ ಹಿಂದೆ ಕೇವಲ ಕಾಂಗ್ರೆಸ್ ನವರ ಕೈವಾಡವಿದೆ ಎಂದು ಹೇಳಿಕೆ […]
ಧರ್ಮದ ಕುರಿತು ಸಂಘ ಪರಿವಾರ, ಬಿಜೆಪಿಯವರು ನೀಡುವ ಪ್ರಚೋದನೆಗೆ ಒಳಗಾಗಬಾರದು ಎಂದು ಅಲ್ಪಸಂಖ್ಯಾತರಿಗೆ ಕರೆ ನೀಡಿದ ಎಸ್. ಎಂ. ಪಾಟೀಲ ಗಣಿಹಾರ
ವಿಜಯಪುರ: ಧರ್ಮದ ವಿಚಾರದಲ್ಲಿ(Religion Issue) ಸಂಘ ಪರಿವಾರ(Sangha Pariwar) ಮತ್ತು ಬಿಜೆಪಿಯವರು ನೀಡುವ ಪ್ರಚೋದನೆಗೆ(Provocation) ಒಳಗಾಗಬಾರದು ಎಂದು ಕೆಪಿಸಿಸಿ ವಕ್ತಾರ ಮತ್ತು ಅಲ್ಪಸಂಖ್ಯಾತರ ಮುಖಂಡ ಎಸ್. ಎಂ. ಪಾಟೀಲ ಗಣಿಹಾರ(S M Patil Ganihar) ಮುಸ್ಲಿನರಿಗೆ ಮನವಿ ಮಾಡಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯ ಮುಗಿಯುವವರೆಗೆ ಸಂಘ ಪರಿವಾರ ಮತ್ತು ಬಿಜೆಪಿ ಮುಸ್ಲಿಮರನ್ನು ಪ್ರಚೋದಿಸಲಿವೆ. ಈ ಹಿನ್ನೆಲೆಯಲ್ಲಿ ಯಾರೂ ಪ್ರಚೋದನೆಗೆ ಒಳಗಾಗಬಾರದು. ಸಂವಿಧಾನದ ಮೇಲೆ ವಿಶ್ವಾಸವಿಟ್ಟು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. […]