ಕರ್ನಾಟಕಕ್ಕೆ ಬೇಕಾಗಿದ್ದಾರೆ ಒಬ್ಬ ಒಳ್ಳೆಯ ಗೃಹ ಮಂತ್ರಿ ಎಂದು ಟಿವಿ, ಪೇಪರ್ ನಲ್ಲಿ ಹಾಕಿ ಎಂದ ಶಾಸಕ ಯತ್ನಾಳ

ವಿಜಯಪುರ: ಕರ್ನಾಟಕಕ್ಕೆ(Karnataka) ಓರ್ವ ಸ್ಟ್ರಾಂಗ್ ಹೋಂ‌ ಮಿನಿಸ್ಟರ್(Strong Home Minister) ಬೇಕಾಗಿದ್ದಾರೆ.  ಒಬ್ಬ ಒಳ್ಳೆಯ ಗೃಹಮಂತ್ರಿ ಬೇಕಾಗಿದ್ದಾರೆ(Required) ಎಂದು ಟಿವಿ ಮತ್ತು ಪೇಪರಿನಲ್ಲಿ ಹಾಕಿ ಎಂದು ವಿಜಯಪುರ ನಗರ ಬಿಜೆಪಿ ಶಾಸಕ(BJP MLA) ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಸ್ವಪಕ್ಷದ ಗೃಹ ಮಂತ್ರಿ ವಿರುದ್ಧವೇ ಹರಿಹಾಯ್ದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಗೃಹ ಸಚಿವರು ಗಂಭೀರವಾಗಿರಬೇಕು.  ಈ ಘಟನೆಗಳ ಹಿಂದೆ ಕೇವಲ ಕಾಂಗ್ರೆಸ್ ನವರ ಕೈವಾಡವಿದೆ ಎಂದು ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.  ಗೃಹ ಸಚಿವರಾಗಿ ನೀವು ಏನು ಮಾಡಿದ್ದೀರಿ? ಏನು ಮಾಡಲಿದ್ದೀರಿ ಎಂಬುದನ್ನು ತಿಳಿಸಿ ಎಂದು ಆಗ್ರಹಿಸಿದರು.

ಹುಬ್ಬಳ್ಳಿ ಗಲಭೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಪ್ರದೇಶದಲ್ಲಿ ರಾಮ ನವಮಿ ಆಚರಣೆ ಶಾಂತಿಯುತವಾಗಿ ನಡೆದಿದೆ.  ಇದು ಅಲ್ಲಿರುವ ಬಿಗಿಯಾದ ಕಾನೂನು ಮತ್ತು ಸುವ್ಯವಸ್ಥೆಗೆ ಸಾಕ್ಷಿಯಾಗಿದೆ.  ರಾಜ್ಯದಲ್ಲಿ ಹುಬ್ಬಳ್ಳಿಯಂಥ ಘಟನೆಯನ್ನು ತಡೆಯಲು ಮನೆ ಮನೆಯ ಸರ್ಚ್ ಆಪರೇಷನ್ ಆಗಬೇಕು.  ಗಲಭೆಯಲ್ಲಿ ಕೆಲವೊಂದು ಶಕ್ತಿಗಳು ಕೆಲಸ ಮಾಡುತ್ತಿವೆ.  ಇನ್ನು ಮುಂದೆ ಯಾವುದೇ ಮೆರವಣಿಗೆ ಆರಂಭವಾಗುವ ಮೊದಲು ಆ ಮಾರ್ಗದ ಮನೆ ಮತ್ತು ಅಂಗಡಿಗಳಲ್ಲಿ ತಪಾಸಣೆ ನಡೆಸಬೇಕು.  ಯಾರ ಮನೆಯಲ್ಲಿ ತಲ್ವಾರ್ ಇವೆ? ಜಂಬೆ ಇವೆ? ಎಂಬುದರ ಕುರಿತು ಸರ್ಚ್ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಕೋಮು ಸೂಕ್ಷ್ಮ ಪ್ರದೇಶಗಳಾದ ಹುಬ್ಬಳ್ಳಿ- ಧಾರವಾಡ, ವಿಜಯಪುರ, ಕಲಬುರಗಿ, ರಾಯಚೂರು ಬಳ್ಳಾರಿ ಗಳಲ್ಲಿ ಕೋಮು ಶಕ್ತಿಗಳಿವೆ.  ಐಬಿ ಯಲ್ಲೂ ಇಂಥ ಸೂಕ್ಷ್ಮ ವಿಚಾರಗಳ ಮಾಹಿತಿ ಇರುತ್ತದೆ.  ಉತ್ತರ ಪ್ರದೇಶದಲ್ಲಿ ರಾಮನವಮಿ‌ ಕಾರ್ಯಕ್ರಮಗಳಲ್ಲಿ ಒಂದೂ‌ ಅಹಿತಕರ ಘಟನೆಗಳು ಆಗಲಿಲ್ಲ.  ಅಲ್ಲಿ ಕರ್ನಾಟಕಕ್ಕಿಂತಲೂ ಹೆಚ್ಚು ಜನ ಆ ಸಮುದಾಯದವರಿದ್ದಾರೆ.  ಕರ್ನಾಟಕದಲ್ಲಿಯೂ ಸರ್ಚ್ ಆಪರೇಷನ್ ಆಗಬೇಕು.  ಯಾರ. ಮನೆಯಲ್ಲಿ ತಲ್ವಾರ್ ಗಳಿವೆ? ಜಂಬೆ ಗಳಿವೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಯತ್ನಾಳ ಆಗ್ರಹಿಸಿದರು.

ಗೃಹ ಸಚಿವ ವಿರುದ್ಧ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದ ಅವರು, ಗೃಹ ಸಚಿವ ಪರಿಶೀಲನೆ ಮಾಡುತ್ತೇ ಎಂಬುದನ್ನು ಕೈ ಬಿಡಬೇಕು ಎಂದು ಯತ್ನಾಳ ಆಗ್ರಹಿಸಿದರು.

ಇನ್ನು ಮೇಲೆ ಬರಿ ಕಥೆ ಹೇಳುವ ಕೆಲಸವಾಗಬಾರದು.  ಓನ್ಲಿ ಆ್ಯಕ್ಷನ್ ಆಗಬೇಕು.  ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.  ನೀವೇನು ಮಾಡ್ತೀರಾ ಎಂದು ಜನತೆ ಕೇಳುತ್ತಿದ್ದಾರೆ.  ಅದಕ್ಕಾಗಿ ಬರೀ ಆ್ಯಕ್ಷನ್ ಆಗಬೇಕು.  ಕಾಂಗ್ರೆಸ್ ನವರು ಮಾಡಿದ್ದಾರೆ ಎಂದು ಹೇಳುವ ಬದಲು ಅಂಥವರನ್ನು ಜೈಲ್ ಒಳಗೆ ಹಾಕಿ‌ ಎಂದು ಯತ್ನಾಳ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸವಾಲು ಹಾಕಿದರು.

ಬೆಂಗಳೂರಿನ ಡಿ. ಜೆ. ಮತ್ತು ಕೆ. ಜೆ. ಹಳ್ಳಿ ಪ್ರಕರಣದಲ್ಲಿ ಕಾಂಗ್ರೆಸ್   ಶಾಸಕ ಶಾಸಕ ಜಮೀರ ಅಹ್ಮದ್ ಖಾನ್ ವಿರುದ್ಧ ಆ್ಯಕ್ಷನ್ ಆಗಬೇಕಿತ್ತು.  ಆದರೆ, ನಮ್ಮವರಲ್ಲಿಯೇ ಒಳ ಹೊಂದಾಣಿಕೆ ಇದೆ.  ಜಮೀರ ಅಹ್ಮದ ಖಾನ ಜೊತೆ ಯಾರೆಲ್ಲ ನಗುತ್ತಾ ಫೋಟೋ ತೆಗೆಸಿಕೊಂಡಿದ್ದಾರೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗವಾಗಿವೆ.  ಇದನ್ನೆಲ್ಲ ಬಿಡಬೇಕು.  ಇವರ ವರ್ತನೆಯಿಂದ ಮುಗ್ಧ ಹಿಂದುಗಳು ಸಾಯುತ್ತಿದ್ದಾರೆ.  ಕರ್ನಾಟಕ ಹಿತದೃಷ್ಟಿಯಿಂದ ಆ್ಯಕ್ಷನ್ ಆಗಬೇಕು ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗೂಳಪ್ಪ ಶೆಟಗಾರ, ಪ್ರೇಮಾನಂದ ಬಿರಾದಾರ, ಸಂತೋಷ ತಳಕೇರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌