ವಿಜಯಪುರ ನೂತನ ಡಿಸಿ ಕಾರು ಅಪಘಾತ ಪ್ರಕರಣ- ಜಿಲ್ಲಾಧಿಕಾರಿ ವಿಜಯಮಹಾಂತೇಶ ಬಿ. ದಾನಮ್ಮನವರ ಆರೋಗ್ಯದಿಂದಿದ್ದಾರೆ-ಧಾರವಾಡ ಡಿಸಿ

ಧಾರವಾಡ: ವಿಜಯಪುರ(Vijayapura) ಜಿಲ್ಲಾಧಿಕಾರಿ(DC) ವಿಜಯಮಹಾಂತೇಶ ಬಿ. ದಾನಮ್ಮನವರ(Vijayamahantesh B Danammanavar) ಕಾರು ಅಪಘಾತ(Car Accident) ಪ್ರಕರಣಕ್ಕೆ(Case) ಸಂಬಂಧಿಸಿದಂತೆ ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಧಾರವಾಡ ಎಸ್ ಡಿ ಎಂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಮಹಾಂತೇಶ ಬಿ. ದಾನಮ್ಮನವರ ಅವರನ್ನು ಭೇಟಿ ಮಾಡಿದ ಧಾರವಾಡ ಡಿಸಿ, ವಿಜಯಪುರ ನೂತನ ಜಿಲ್ಲಾಧಿಕಾರಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.  ಆವರು ಆರೋಗ್ಯದಿಂದ ಇದ್ದಾರೆ.  ಧಾರವಾಡ ಎಸ್ ಡಿ ಎಂ ಆಸ್ಪತ್ರೆಯ ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ:

https://basavanadu.com/2022/04/19/dharawad-vijayapura-new-dc-travelling-car-overturned-escaped-miracally/

 

 

ಧಾರವಾಡ ಜಿಲ್ಲೆಯ ಯರಿಕೊಪ್ಪ ಬಳಿ ನಸುಕಿನ ಜಾವ 4 ಗಂಟೆ ಸುಮಾರಿಗೆ ಅಪಘಾತಕ್ಕೀಡಾಗಿರುವ ಕಾರು

ವಿಜಯಮಹಾಂತೇಶ ಬಿ. ಧಾನಮ್ಮನವರು ನೂತನ ಜಿಲ್ಲಾಧಿಕಾರಿಯಾಗಿ ಕರ್ತವ್ಯಕ್ಕೆ ಹಾಜರಾಗಲು ಕುಟುಂಬ ಸಮೇತ ವಿಜಯಪುರಕ್ಕೆ ಆಗಮಿಸುತ್ತಿದ್ದರು.  ಆದರೆ, ನಸುಕಿನ ಜಾವ 4 ಗಂಟೆಯ ಸುಮಾರಿಗೆ ಧಾರವಾಡ ಜಿಲ್ಲೆಯ ಯರಿಕೊಪ್ಪ ಬಳಿ ಕಾರು ಪಲ್ಟಿಯಾಗಿತ್ತು.  ಈ ಹಿನ್ನೆಲೆಯಲ್ಲಿ ಕಾರಿನಲ್ಲಿ ಸಂಚರಿಸುತ್ತಿದ್ದ ಎಲ್ಲರನ್ನೂ ಧಾರವಾಡ ಎಸ್ ಡಿ ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.  ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

 

Leave a Reply

ಹೊಸ ಪೋಸ್ಟ್‌