ಶಿಕ್ಷಕರ ಪಾತ್ರ ವೈದ್ಯರಿಗಿಂತ ಮಿಗಿಲಾಗಿದೆ- ಡಾ. ಆರ್. ಎಸ್. ಮುಧೋಳ

ವಿಜಯಪುರ: ಶಿಕ್ಷಕರ(Teachers) ಪಾತ್ರ(Role) ವೈದ್ಯರಿಗಿಂತಲೂ(Doctors) ಮಿಗಿಲಾಗಿದೆ ಎಂದು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ(Dermed University) ಉಪಕುಲಪತಿ(Vice Chancellor) ಡಾ. ಆರ್. ಎಸ್. ಮುಧೋಳ((Dr. R. D. Mudhol) ಹೇಳಿದ್ದಾರೆ.

ನಗರದ ಬಿ ಎಲ್ ಡಿ ಇ ಸಂಸ್ಥೆಯ ಜ್ಞಾನಯೋಗಿ ಶ್ರೀ ಸಿದ್ಖೇಶ್ವರ ಸ್ವಾಮೀಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಡಾ. ಆರ್. ಎಸ್. ಮುಧೋಳ ಜೆಎಸ್ಎಸ್ ಶಿಕ್ಷಣ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದರು

ಶಿಕ್ಷಕ ಮಗುವಿನ ವ್ಯಕ್ತಿತ್ವ ನಿರ್ಮಿಸುವ ಶಿಲ್ಪಿಯಾಗಿದ್ದಾರೆ. ಶಿಕ್ಷಕರ ಸೇವೆಯನ್ನು ಸಮಾಜ ಗೌರವಿಸುತ್ತದೆ, ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ, ಶಿಕ್ಷಕರ ಪಾತ್ರ ವೈದ್ಯರ ಪಾತ್ರಕ್ಕಿಂತ ಹಿರಿಯದಾಗಿದೆ ಎಂದು ಅವರು ಹೇಳಿದರು.

ಆಡಳಿತಾಧಿಕಾರಿ ಪ್ರೊ. ಆಯ್. ಎಸ್. ಕಾಳಪ್ಪನವರ ಮಾತನಾಡಿ, ಸಮಾಜದಲ್ಲಿ ವೈದ್ಯ ಮತ್ತು ಶಿಕ್ಷಕ ಎರಡು ಹುದ್ದೆಗಳಿಗೆ ಗೌರವಯುತ ಸ್ಥಾನವಿದೆ. ವೈದ್ಯನು ಜೀವ ಉಳಿಸಿದರೆ ಶಿಕ್ಷಕ ಮಗುವಿನ ಜೀವನ ಶೈಲಿಯನ್ನು ನಿರ್ಮಿಸುತ್ತಾನೆ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಆಡಳಿತಾಧಿಕಾರಿ ಡಾ. ಕೆ. ಜಿ. ಪೂಜಾರಿ ಮಾತನಾಡಿ, ‘ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಕ್ರಿಯೆ ಮತ್ತು ಕರ್ಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಬಿ. ವೈ. ಖಾಸನೀಸ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಸ್. ಪಿ. ಶೇಗುಣಸಿ ಕಾರ್ಯಕ್ರಮ ನಿರೂಪಿಸಿದರು, ಪ್ರೊ. ಸುನಿಲಗೌಡ ಪಾಟೀಲ ವಂದಿಸಿದರು. ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌