ವಿಜಯಪುರ: ಹುಬ್ಬಳ್ಳಿಯಲ್ಲಿ(Hubballi) ನಡೆದ ಹಿಂಸಾಚಾರದಲ್ಲಿ(Violence) ವಿದೇಶಿ ಶಕ್ತಿಗಳ(External Elements) ಕೈವಾಡವಿದೆ(Hand) ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(BJP MLA Basanagouda Patil Yatnal) ಗಂಭೀರ ಆರೋಪ ಮಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಗಲಾಟೆ ಮಾಡುವವರಿಗೆ ವಿದೇಶಗಳಿಂದ ಹಣ ಬರುತ್ತದೆ. ಭಟ್ಕಳಕ್ಕೆ ಹೋದರೆ ಹೊರ ಬರಲಾಗಲ್ಲ. ಆ ರೀತಿಯ ವಾತಾವರಣವಿದೆ ಎಂದು ಹೇಳಿದರು.
ಕಲಬುರಗಿ ಮತ್ತು ವಿಜಯಪುರದಲ್ಲಿ ಒಂದೊಂದು ಏರಿಯಾದಲ್ಲಿ ಒಳ ಹೋಗಲು ಆಗುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಆರೋಪಿಸಿದರು.
ಪೊಲೀಸ್ ಇಲಾಖೆ ವರ್ಗಾವಣೆ ಸಮಸ್ಯೆಯಲ್ಲಿ ಸಿಲುಕಿದೆ. ಡಿಸಿ ಮತ್ತು ಎಸ್ಪಿ ಹಣ ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಯತ್ನಾಳ ತಮ್ಮದೇ ಸರಕಾರದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಇಂಥ ವ್ಯವಸ್ಥೆಯನ್ನು ಯಾವನೋ ಒಬ್ಬ ಪುಣ್ಯಾತ್ಮ ಮಾಡಿಬಿಟ್ಟಿದ್ದಾನೆ. ಒಬ್ಬ ಮುಖ್ಯಮಂತ್ರಿಯ ಮಗಾ ಇದನ್ನು ಆರಂಭಿಸಿದ್ದಾನೆ. ರಾಜ್ಯದಲ್ಲಿ ಯಾವನೋ ಒಬ್ಬನ ಮಗಾ ಇದನ್ನಾ ಸ್ಟಾರ್ಟ್ ಮಾಡಿದ್ದಾನೆ ಎಂದು ಯತ್ನಾಳ ಆರೋಪಿಸಿದರು.
ಎಸ್ಪಿ ಮತ್ತು ಡಿಸಿಗೂ ಹಣ ತೆಗೆದುಕೊಂಡು ವರ್ಗಾವಣೆ ಮಾಡಿದರೆ ಅವರ ದಕ್ಷತೆ ಪ್ರಾಮಾಣಿಕತೆ ಹಾಳಾಗುತ್ತದೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡದೇ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಓರ್ವ ಡಿಸಿ ಮತ್ತು ಎಸ್ಪಿಗೆ ರೂ. ಹತ್ತು ಕೋ. ಹಣ ಕೊಡು ಎಂದರೆ ಎಲ್ಲಿಂದ ಕೊಡುತ್ತಾರೆ ಎಂದು ಪ್ರಶ್ನಿಸಿದ ಅವರು, ಹಣ ನೀಡಲು ಅವರು ಕೂಡ ಭ್ರಷ್ಟಾಚಾರ ಮಾಡಬೇಕಾಗುತ್ತದೆ ಎಂದ ಹೇಳಿದರು.
ಮಾಜಿ ಮುಖ್ಯಮಂತ್ರಿಯ ಮಗ ಆರಂಭಿಸಿರ ಭ್ರಷ್ಟಾಚಾರದಿಂದ ಪಕ್ಷದ ವರ್ಚಸ್ಸು ಕೂಡ ಹಾಳಾಗುತ್ತಿದೆ. ಎಂದು ಯತ್ನಾಳ ಆರೋಪಿಸಿದರು.