ವಿಜಯಪುರ: ಕಂಬಿ ಐದೇಶಿ (Kambi Aideshi) ಅಂಗವಾಗಿ ವಿಜಯಪುರ ನಗರದ(Vijayapura City) ಜೋರಾಪೂರ ಪೇಠ(Jorapura Peth) ಮಲ್ಲಯ್ಯನ(Mallayyana Oni) ಓಣಿಯಲ್ಲಿರುವ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಐದು ದಿನಗಳ ಕಾಲ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ(Cultural) ಕಾರ್ಯಕ್ರಮಗಳು ನಡೆಯಲಿವೆ.
ಏ. 21ರಂದು ಗುರುವಾರ ಬೆಳಗ್ಗೆ ಪಲ್ಲಕ್ಕಿ ನಂದಿಕೋಲ ಹಾಗೂ ಮುತ್ತೈದೆಯರು ಕೂಡಿಕೊಂಡು ವಾದ್ಯ ಮೇಳದೊಂದಿಗೆ ಗಂಗನಹಳ್ಳಿ ಅವರ ತೋಟದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬೆ. 8 ಗಂಟೆಯಿಂದ ಮ. 2 ಗಂಟೆಯವರೆಗೆ ಶ್ರೀ ಮಲ್ಲಿಕಾರ್ಜುನಸ್ವಾಮಿ ಮಹಾಪ್ರಸಾದ ನಡೆಯಲಿದೆ. ಸಂ. 6 ಗಂಟೆಗೆ ಅಡಕಿ ಗಲ್ಲಿಯಿಂದ ಶ್ರೀ ಮಲ್ಲಿಕಾರ್ಜುನ ಗುಡಿಯವರೆಗೆ ಮೆರವಣಿಗೆ ನಡೆಯಲಿದ್ದು ಕಂಬಿ, ಪಲ್ಲಕ್ಕಿಗಳನ್ನು ಭಕ್ತರು ಹೊತ್ತುಕೊಂಡು ಬಂದು ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲಿದ್ದಾರೆ.
ಈ ಐದು ದಿನಗಳ ಕಾಲ ಪ್ರತಿದಿನ ಬೆ. 5ಕ್ಕೆ ರುದ್ರಾಭಿಷೇಕ ನಡೆಯಲಿದೆ.
ಏ. 25ರಂದು ಸೋಮವಾರ ಮಲ್ಲಯ್ಯನ ಐದೆಶಿ ಕಾರ್ಯಕ್ರಮ ನಡೆಯಲಿದೆ. ಇದರ ರಂಗವಾಗಿ ಪ್ರತಿದಿನ 8.30ರಿಂದ 9.30ರ ವರೆಗೆ ಕಂಬಿ ಹಾಡು, ಮಂಗಳಾರತಿ, ಮದಲಸಾ ಕಾರ್ಯಕ್ರಮಗಳು ನಡೆಯಲಿವೆ.
ಏ. 26ರಂದು ಮಂಗಳವಾರ ಬೆ. 10 ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮೊದಲಸಾ ನಡೆಯಲಿದೆ ಎಂದು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಹಾಗೂ ಶ್ರೀ ಮಲ್ಲಿಕಾರ್ಜುನ ಪಾದಯಾತ್ರೆ ಕಮಿಟಿ ಮುಖಂಡರಾದ ರವೀಂದ್ರ ಸಿದ್ದಯ್ಯ ಕರ್ಪೂರಮಠ, ಶರಣಬಸಪ್ಪ ಚನ್ನಿಗಾವಿಶೆಟ್ರು ಮತ್ತು ಶರಣಯ್ಯ ಮಠಪತಿ, ಮಹಾಂತೇಶ ಗುಲಗಂಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.