ವಿಜಯಪುರ: ವಿಜಯಪುರ(Vijayapura) ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ(Working Journalists Association) ನೂತನ ಪದಾಧಿಕಾರಿಗಳಿಗೆ(New Office Bearers) ನಿಕಟಪೂರ್ವ ಪದಾಧಿಕಾರಿಗಳಿಂದ ಆಧಿಕಾರ ಹಸ್ತಾಂತರ ಕಾರ್ಯಕ್ರಮ(Power Exchange Programme) ಪತ್ರಿಕಾ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಚ್ಚೆಂದ್ರ ಲಂಬು, ಪ್ರಧಾನ ಕಾರ್ಯದರ್ಶಿ ವಿನಾಯಕ ಸೊಂಡೂರ ಮತ್ತು ರಾಜ್ಯ ಕಾರ್ಯಕಾರಿಣಿ ಸದಸ್ಯ ದೇವೇಂದ್ರ ಚವ್ಹಾಣ ಅವರು ನೂತನ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ ವಡವಡಗಿ, ಉಪಾಧ್ಯಕ್ಷ ಫಿರೋಜ ರೋಜಿಂದಾರ, ರಾಹುಲ ಆಪ್ಟೆ ಅವರಿಗೆ ಠರಾವು ಪುಸ್ತಕ, ಪಾಸಬುಕ್ ಮತ್ತೀತರ ದಾಖಲಾತಿಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಸಚ್ಚೆಂದ್ರ ಲಂಬು, ತಮ್ಮ ಅವಧಿಯಲ್ಲಿ ಸಂಘಕ್ಕಾಗಿ ಮಾಡಿದ ಅಭಿವೃದ್ಧಿ ಕೆಲಸಗಳ ಕುರಿತು ಮಾಹಿತಿ ನೀಡಿದರು. ಅಲ್ಲದೇ, ಮುಂಬರುವ ದಿನಗಳಲ್ಲಿ ನೂತನ ಪದಾಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ರಾಜ್ಯ ಕಾರ್ಯಕಾರಿ ಸಮಿತಿ ನಿಕಟಪೂರ್ವ ಸದಸ್ಯ ದೇವೇಂದ್ರ ಹೆಳವರ ಮಾತನಾಡಿ, ತಮ್ಮ ಮೂರು ವರ್ಷದ ಅಧಿಕಾರಾವಧಿಯಲ್ಲಿ ಉತ್ತಮ ಸೇವೆ ನೀಡುವುದರ ಜೊತೆಗೆ ಸಂಘಕ್ಕೆ ಹೆಸರು ಬರುವ ಕೆಲಸ ಮಾಡಿದ್ದೇವೆ. ನೂತನ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ ನೇತೃತ್ವದ ಆಡಳಿತ ಮಂಡಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಹಿರಿಯ ಪತ್ರಕರ್ತ ಪುರುಷೋತ್ತಮ ಕುಲಕರ್ಣಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಗುಂಪು ಮಾಡಿಕೊಂಡಿದ್ದೇವು. ಈಗ ಚುನಾವಣೆ ಮುಗಿದು ಹೋಗಿದೆ. ನಾವೀಗ ಪತ್ರಕರ್ತರಷ್ಟೇ. ಹೀಗಾಗಿ ಸಂಘದ ಚಟುವಟಿಕೆಗಳಿಗೆ ಪ್ರತಿಯೊಬ್ಬ ಸದಸ್ಯರು ಸಹಕಾರ ನೀಡಬೇಕು ಎಂದು ಹೇಳಿದರು.
ಹಿರಿಯ ಪತ್ರಕರ್ತ ಮಹೇಶ ವಿ, ಶಟಗಾರ ಮಾತನಾಡಿ, ಪತ್ರಕರ್ತರ ಸಂಘ ಹಾಗೂ ಅದರ ಚಟುವಟಿಕೆಗಳು ನಮ್ಮ ಮನೆಯ ಕೆಲಸಗಳಿದ್ದಂತೆ. ಕುಟುಂಬ ಸದಸ್ಯರಾಗಿ ಪ್ರತಿಯೊಬ್ಬರು ಸಂಘದ ಪ್ರತಿ ಚಟುವಟಿಕೆಗಳಿಗೆ ಕೈ ಜೋಡಿಸಬೇಕು ಎಂದು ಹೇಳಿದರು.
ಅಧಿಕಾರ ಸ್ವೀಕರಿಸಿದ ನೂತನ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಎಲ್ಲರ ಆಶೀರ್ವಾದದ ಬಲದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಸಂಘದ ಪ್ರತಿ ಚಟುವಟಿಗಳಿಗೆ ಎಲ್ಲರ ಸಹಕಾರ ಅಗತ್ಯ. ಪದಾಕಾರಿಗಳಿಗಿರುವ ಹೊಣೆಗಾರಿಕೆ ಸಂಘದ ಸದಸ್ಯರಿಗೂ ಇದೆ. ಹೀಗಾಗಿ ಪ್ರತಿಯೊಬ್ಬರೂ ಸಂಘದ ಪ್ರತಿ ಚಟುವಟಿಕೆ ಹಾಗೂ ಸಮಾರಂಭಗಳಲ್ಲಿ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ಹೇಳಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಡಿ. ಬಿ. ವಡವಡಗಿ ಮಾತನಾಡಿ, ಸಂಘದ ಚಟುವಟಿಕೆಗಳಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು.
ಹಿರಿಯ ಪತ್ರಕರ್ತ ಅಶೋಕ ಯಡಳ್ಳಿ ಮಾತನಾಡಿ, ಸಂಘದ ಚಟುವಟಿಕೆಗಳಲ್ಲಿ ಎಲ್ಲರೂ ಸಕ್ರೀಯರಾಗಿ ಪಾಲ್ಗೋಳ್ಳಬೇಕು ಎಂದು ಹೇಳಿದರು.
ಮಾಜಿ ಜಿಲ್ಲಾಧಕ್ಷ ಶರಣು ಮಸಳಿ ಮಾತನಾಡಿ, ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಚುನಾವಣಾಧಿಕಾರಿಯಾಗಿದ್ದ ಟಿ. ಕೆ. ಮಲಗೊಂಡ ಮಾತನಾಡಿ, ಸಂಘದ ಸದಸ್ಯರು ಸಣ್ಣ, ಪುಟ್ಟ ಸಂಗತಿಗಳ ಬಗ್ಗೆ ತಲೆಕೆಡಿಸಿಕೊಳ್ಳದೇ, ನೂತನ ಪದಾಕಾರಿಗಳ ಸಂಕಲ್ಪಗಳ ಸಾಕಾರಕ್ಕೆ ಸಹಕಾರ ನೀಡಬೇಕು. ಈಗಿನ ಚಟುವಟಿಕೆಗಳನ್ನು ನೋಡಿದರೆ ಆ ದಿನಗಳು ಶೀಘ್ರದಲ್ಲಿ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಆಡಳಿತ ಮಂಡಳಿಗೆ ಅಕಾರ ಹಸ್ತಾಂತ ಕಾರ್ಯಕ್ರಮದ ಅ‘್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜೊತೆಗೆ ಸಂಘಕ್ಕೆ ಆದಾಯ ಬರುವಂಥ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲು ನೂತನ ಪದಾಕಾರಿಗಳಿಗೆ ಸಲಹೆ ಮಾಡಿದರು.
ಪತ್ರಕರ್ತರಾದ ಕೆ. ಕೆ. ಕುಲಕರ್ಣಿ ಮತ್ತು ನಿಂಬಣ್ಣ ಕಾಂಬಳೆ ಮಾತನಾಡಿದರು. ಪ್ರಕಾಶ ಬೆಣ್ಣೂರ ವೇದಿಕೆಯಲ್ಲಿದ್ದರು. ನೂತನ ಉಪಾಧ್ಯಕ್ಷ ಇಂದುಶೇಖರ ಮಣೂರ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ ತೇರದಾಳ, ಬಸವರಾಜ ಉಳ್ಳಾಗಡ್ಡಿಘಿ, ಅವಿನಾಶ ಬಿದರಿ, ವಿನೋದ ಸಾರವಾಡ, ನಾಗಪ್ಪ ನಾಗೂರ, ಗುರುರಾಜ್ ಲೋಕೂರೆ, ಆಸೀಪ್ ಬಾಗವಾನ, ಶಶಿಕಾಂತ ಮೇಡೆಗಾರ, ಸುನೀಲ ಗೋಡೆನವರು, ಪತ್ರಕರ್ತರಾದ ಸೀತಾರಾಮ ಕುಲಕರ್ಣಿ, ಗುರುರಾಜ ಗದ್ದನಕೇರಿ, ರಾಹುಲ್ ಮಾನಕರ, ನವೀದ್ ಅಂಜುಮ್ ಮಮದಾಪುರ, ಶರಣು ಮರನೂರ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.