ಸುಕ್ಷೇತ್ರ ಲಚ್ಯಾಣದಲ್ಲಿ ಗಮನ ಸೆಳೆದ ಶ್ರೀ ಸಿದ್ಧಲಿಂಗ ಮಹಾರಾಜರ ರಥೋತ್ಸವ ಕಾರ್ಯಕ್ರಮ

ವಿಜಯಪುರ: ಎಲ್ಲಿ(Everywhere) ನೋಡಿದರೂ ಜನವೋ(Devotees) ಜನ.  ಒಬ್ಬರ ಹಿಂದೊಬ್ಬರಂತೆ(One By One) ಹೀಗೆ ಒತ್ತಿಕೊಂಡು ಮುನ್ನುಗ್ಗುತ್ತಿರುವ ದೃಶ್ಯ(Scene) ಮೈ ನವಿರೇಳಿಸುತ್ತಿತ್ತು(Amazing).  ಎಲ್ಲರೂ ದೇವನಾಮಸ್ಮರಣೆ ಮಾಡುತ್ತ ಹೀಗೆ ಒಬ್ಬರ ಹಿಂದೊಬ್ಬರು ಮುನ್ನುಗ್ಗುತ್ತಿದ್ದ ದೃಶ್ಯ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸುಕ್ಷೇತ್ರ ಲಚ್ಯಾಣದಲ್ಲಿ.

ಸುಕ್ಷೇತ್ರ ಲಚ್ಯಾಣದಲ್ಲಿ ನಡೆದ ರಥೋತ್ಸವ

ಲಚ್ಯಾಣ ಗ್ರಾಮದ ಶ್ರೀ ಸಿದ್ಧಲಿಂಗ ಮಹಾರಾಜರ ಗುರು ಲಿಂಗೈಕ್ಯ ಶ್ರೀ ಶಂಕರಲಿಂಗೇಶ್ವರ ಮಹಾಶಿವಯೋಗಗಿಳ ಮಹಾರಥೋತ್ಸವ ಮೂಲಾ ನಕ್ಷತ್ರದ ಮುಹೂರ್ತದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು.  ಲಚ್ಯಾಣ ಗ್ರಾಮದ  ಸುಭಾಸಗೌಡ ಪಾಟೀಲ ಅವರ ಮನೆಯಿಂದ ಕಳಶ, ಈರಪ್ಪ ಬಿರಾದಾರ ಅವರ ಮನೆಯಿಂದ ಹಗ್ಗ, ಜಗದೇವಪ್ಪಗೌಡ ಪಾಟೀಲ ಅವರ ಮನೆಯಿಂದ ಛತ್ರಿಯನ್ನು ವಾದ್ಯ ಮೇಳದೊಂದಿಗೆ ತಂದು ರಥಕ್ಕೆ ಅಳವಡಿಸಿ ಬಳಿಕ ಬಂಥನಾಳದ ಪೂಜ್ಯ ಶ್ರೀ ಡಾ. ವೃಷಭಲಿಂಗ ಮಹಾಶಿವಯೋಗಿಗಳ ಸಾನಿಧ್ಯದಲ್ಲಿ ಸಾಧು ಸಂತರು ರಥಕ್ಕೆ ವಿಶೇಷ ಪೂಜೆ ಸಲ್ಲಿಸುವ ಉತ್ಸವಕ್ಕೆ ಚಾಲನೆ ನೀಡಿದರು.

ನಂತರ ರಥದ ಮೇಲಿನ ಸಾಧು ಸಂತರು ಕೈಯಲ್ಲಿನ ಶಲ್ಯ ಬೀಸಿ ಶರಣೋ ಶಂಕರ ಸಿದ್ಧಲಿಂಗ ಮಹಾಜಕಿ ಜೈ  ಎಂದು ಜೈಕಾರ ಹಾಕುತ್ತಿದ್ದಂತೆ ನೆರೆದ ಸಹಸ್ರಾರು ಭಕ್ತರು ರಥಕ್ಕೆ ಅಳವಡಿಸಿದ ಹಗ್ಗ ಹಿಡಿದು ಎಳೆಯಲು ಆರಂಭಿಸುತ್ತಿದ್ದಂತೆ ಬ್ರಹತ್ ಆಕಾರದ ಕಲ್ಲಿನ ಚಕ್ರ ಅಳವಡಿಸಿದ ತಿರುಗುತ್ತಿದ್ದಂತೆ ರಥವು ಸರಾಗವಾಗಿ ಚಲಿಸಲು ಆರಂಭಿಸಿತು.

ಈ ಸಂದರ್ಭದಲ್ಲಿ ನೆರೆದ ಸಹಸ್ರಾರು ಭಕ್ತರು ರಥಕ್ಕೆ ಉತ್ತತ್ತಿ, ಖಾರಿಕ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರೆ, ಮತ್ತೆ ಹಲವು ಭಕ್ತರು ಕರೋನಾ ಹಿನ್ನಲೆ ಕಳೆದ ಎರಡು ವರುಷ ಕಳೆದುಕೊಂಡಿದ್ದ ರಥ ಎಳೆಯುವ ಭಾಗ್ಯವನ್ನು ಈ ಬಾರಿ ಎಳೆದು ಸಂಭ್ರಮಿಸಿದರು.

ಬಳಿಕ ರಥವು ನೋಡ ನೋಡುತ್ತಿದ್ದಂತೆ ಕೂಗಳತೆಯ ದೂರದ  ಬಸವಣ್ಣನ ಪಾದಗಟ್ಟೆ ತಲುಪಿ ಮರಳಿ ಮೂಲ ಸ್ಥಳ ತಲುಪುತ್ತಿದ್ದಂತೆ ಭಕ್ರರ ಸಂಭ್ರಮ ಮುಗಿಲು ಮುಟ್ಟಿತು. ನಂತರ ರಥವು ಮೂಲ ಸ್ಥಳ ತಲುಪಿದ ಬಳಿಕ ಭಕ್ತರು ನಿಟ್ಟುಸಿರು ಬಿಟ್ಟು ಸಂಸಪಟ್ಟರು.

ಈ ಜಾತ್ರೆಯ ಅಂಗವಾಗಿ ನಡೆದ ಸರ್ವ ಧರ್ಮಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 22 ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಈ ವಿವಾಹ ಕಾರ್ಯಕ್ರಮದಲ್ಲಿ ಹಿಂದು ಮತ್ತು ಮುಸ್ಲಿಂ ಧರ್ಮದ ಜೋಡಿಗಳು ಒಟ್ಟಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಗಮನಾರ್ಹವಾಗಿತ್ತು.

ಸುಕ್ಷೇತ್ರ ಲಚ್ಯಾಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ದಂಪತಿಗೆ ಶ್ರೀಗಳು ಆಶೀರ್ವದಿಸಿದರು

ಕಾರ್ಯಕ್ರಮದ ಸಾನಿಧ್ಯ ವಹಿಸಿದ ಹಳಿಂಗಳಿಯ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಇಲ್ಲಿನ ಸರಳ ವಿವಾಹ ಕಾರ್ಯಕ್ರಮದಲ್ಲಿ ವಿವಾಹ ಆದವರು ಪುಣ್ಯವಂತರು.  ಇಂL ಕಾರ್ಯಕ್ರಮ ಆಯೋಜಿಸಿದ ಬಂಥನಾಳ ಪೂಜ್ಯರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ಬಂಥನಾಳದ ಪೂಜ್ಯ ಡಾ. ವೃಷಭಲಿಂಗ ಮಹಾಶಿವಯೋಗಿಗಳು ಮಾತನಾಡಿ,  ಸತಿ ಪತಿಗಳು ಪರಸ್ಪರ ಅರ್ಥೈಸಿಕೊಂಡು ಬಾಳಬೇಕು. ಸತಿಯ ಬಗ್ಗೆ ಪತಿ , ಪತಿಯ ಬಗ್ಗೆ ಸತಿ ಸಂಶಯ ಪಡಬಾರದು.ಅಂದಾಗ ಮಾತ್ರ ದಾಂಪತ್ಯ ಜೀವನದಲ್ಲಿ ಸ್ವರ್ಗ ಕಾಣಬಹುದು ಎಂದು ಹೇಳಿದರು.

ಬಳಿಕ ವಧು ವರರಿಗೆ ಅಕ್ಷತೆ ಹಾಗೂ ಈ ಒಂದು ದಿನದ ಕಾರ್ಯಕ್ರಮದ ಅನ್ನ ಪ್ರಸಾದ ಸೇವೆ ಗೈದ ಗುತ್ತಿಗೆದಾರ ಬಾಬುಗೌಡ ಬಿರಾದಾರ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಗಾಯಕ ಮುರಳೀಧರ ಬಜಂತ್ರಿ ಹಾಗೂ ಅಹಿರಸಂಗದ ತಬಲಾ ಕಲಾವಿದ ಮಹಾದೇವ ಹೂಗಾರ ಅವರು ಭಕ್ತಿ  ಸಂಗೀತ ಸೇವೆ ಸಲ್ಲಿಸಿದರು.

Leave a Reply

ಹೊಸ ಪೋಸ್ಟ್‌