ವಿಜಯಪುರ: 2020-21ರ ವರ್ಷದ(Year) ಪೆಟ್ರೋಲಿಯಂ ಕನ್ಸರ್‌ವೇಶನ್ ರಿಸರ್ಚ್ ಅಸೋಶಿಯೇಶನ್(Petroleum Corporation Efficiency Award) ಕೇಂದ್ರ ಸರಕಾರದಿಂದ(Union Government) ನೀಡಿರುವ ರಾಜ್ಯಮಟ್ಟದ ಉತ್ತಮ ಇಂಧನ ಸಂರಕ್ಷಣಾ(ಕೆಎಂಪಿಎಲ್) ಪುರಸ್ಕಾರಕ್ಕೆ(Award) ಕಕರಸಾ ನಿಗಮ ವಿಜಯಪುರ ವಿಭಾಗದ ವಿಜಯಪುರ-3(Vijayapura 3rd Division) ನೇ ಘಟಕ ಆಯ್ಕೆಯಾಗಿದೆ.
ಏ.21 ರಂದು ಬೆಂಗಳೂರಿನ ಶಾಂತಿನಗರದ ಘಟಕ-2ರಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರಾರಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ವಿಜಯಪುರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಸಿ. ಎಸ್. ಫುಲೇಕರ, ತಾಂತ್ರಿಕ ಶಿಲ್ಪಿ (ಪ್ರ) ಎಂ. ಎಚ್. ಮಧಬಾವಿ, ಘಟಕ ವ್ಯವಸ್ಥಾಪಕ ಎ. ಎ. ಭೋವಿ, ಪಾರುಪತ್ತೇಗಾರ ಶಂಕರ ಪವಾರ ಅವರಿಗೆ ರೂ. 75 ಸಾವಿರ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ವಿಭಾಗಕ್ಕೆ ಈ ಪ್ರಶಸ್ತಿ ಲಭಿಸಲು ಕಾರಣಾರಾದ ವಿಜಯಪುರ ವಿಭಾಗದ ಎಲ್ಲಾ ಅಧಿಕಾರಿ ವರ್ಗ, ವಿಜಯಪುರ 3ನೇ ಘಟಕದ ಪಾರು ಪತ್ತೆಗಾರರು, ತಾಂತ್ರಿಕ ಸಿಬ್ಬಂದಿ ವರ್ಗ, ಸಂಚಾರಿ ಸಿಬ್ಬಂದಿ ವರ್ಗ, ಆಡಳಿತ ಸಿಬ್ಬಂದಿ ವರ್ಗ, ಚಾಲಕ ಬೋಧಕರು ಹಾಗೂ ವಿಭಾಗದ ಎಲ್ಲ ಚಾಲಕರಿಗೆ ಕಕರಸಾಸಂ ವತಿಯಿಂದ ಅಭಿನಂದನೆ ಸಲ್ಲಿಸಲಾಗಿದೆ.
ಈ ಹಿಂದೆ ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಕೂಡ ಇಂಧನ ನಿರ್ವಹಣೆ ಮಾರ್ಗದಂಡಗಳ ಬಗ್ಗೆ ನಾನಾ ವಿಚಾರಗಳ ಕುರಿತು ಮೇಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.