ವಿಜಯಪುರ: ಸಕ್ಕರೆ ಕಾರ್ಖಾನೆಗಳು(Sugar Factories) 2021-22ನೇ ಆರ್ಥಿಕ ವರ್ಷದಲ್ಲಿ(Financial Year) ಕಬ್ಬು ಪೂರೈಸಿರುವ(Sugarcane Supplied) ಎಲ್ಲಾ ರೈತರಿಗೆ(All Farmers) ಏಪ್ರೀಲ್ 30ರೊಳಗೆ ಕಡ್ಡಾಯವಾಗಿ ಹಣ ಪಾವತಿ(Clear Pending Bills) ಮಾಡಬೇಕು. ಇಲ್ಲದಿದ್ದರೆ, ಅಂಥ ಕಾರ್ಖಾನೆಗಳ ವಿರುದ್ಧ ಕ್ರಮಕ್ಕಾಗಿ ಕಬ್ಬು ಆಯುಕ್ತರಿಗೆ ವರದಿ ಸಲ್ಲಿಸಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ(Deputy Commissioner Dr. Vijayamahantesh B. Danammanavar) ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಮತ್ತು ಅರಣ್ಯ ಇಲಾಖೆ ಸಚಿವರು ಏ. 14ರಂದು ಜಿಲ್ಲೆಗೆ ಆಗಮಿಸಿದ್ದಾಗ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ರೈತರಿಗೆ ಹಣ ಪಾವತಿಸುವ ಸಂಬಂಧ ಪ್ರಗತಿಯನ್ನು ವಿಚಾರಿಸಿದ್ದರು. ಕಬ್ಬು ಪೂರೈಕೆ ಮಾಡಿರು ಎಲ್ಲ ರೈತರಿಗೆ ಏ. 30 ರೊಳಗಾಗಿ ಕಬ್ಬಿನ ಹಣವನ್ನು ಪಾವತಿ ಮಾಡುವಂತೆ ಸೂಚಿನೆ ನೀಡಿದ್ದರು. ಅದರಂತೆ ಮಾ. 18ರ ವರೆಗೆ ಶೇ.74 ಹಣ ಪಾವತಿ ಮಾಡಿರುವ ವಿಚಾರವನ್ನು ಸಚಿವರ ಗಮನಕ್ಕೆ ತರಲಾಗಿತ್ತು. ಬಾಕಿ ಹಣವನ್ನು ಏ. 30 ರೊಳಗೆ ಪಾವತಿಸುವಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸೂಚಿಸಲಾಗುವುದು ಎಂದು ಸಚಿವರಿಗೆ ತಿಳಿಸಲಾಗಿತ್ತು.
ಈ ಹಿಂದಿನ ಸಭೆಯಲ್ಲಿಯೇ 2021-22ನೇ ವರ್ಷದ ಹಂಗಾಮಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಹಣವನ್ನು ಕೂಡಲೇ ಸಂದಾಯ ಮಾಡುವಂತೆ ನಿರ್ದೇಶನ ನೀಡಲಾಗಿದ್ದು, ಅದರಂತೆ ಸಚಿವರೂ ಕೂಡ ಈ ಕುರಿತು ವಿಶೇಷ ಆಸಕ್ತಿ ವಹಿಸಿ ಹಣ ಪಾವತಿಗಾಗಿ ಕ್ರಮಕ್ಕಾಗಿ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 2021-22ನೇ ವರ್ಷದಲ್ಲಿ ಕಬ್ಬು ಪೂರೈಕೆ ಮಾಡಿದ ಎಲ್ಲಾ ರೈತರಿಗೆ ಏ. 30 ರೊಳಗೆ ಕಡ್ಡಾಯವಾಗಿ ಹಣ ಪಾವತಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸೂಚನೆ ನೀಡಿದ್ದಾರೆ.