Yogotsava: ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಯೋಗೋತ್ಸವ ಕಾರ್ಯಕ್ರಮ- ಯೋಗ ಜೀವನದ ಅವಿಭಾಜ್ಯ ಅಂಗವಾಗಲಿ ಎಂದ ಪ್ರಮುಖರು

ವಿಜಯಪುರ: ಪ್ರತಿನಿತ್ಯ(Everyday) ಯೋಗ(Yoga) ರೂಢಿ(Practice) ಮಾಡಿಕೊಂಡು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು(Physical And Mental Health) ಸೃದೃಢವಾಗಿಟ್ಟುಕೊಳ್ಳಬೇಕು ಎಂದು ವಿಜಯಪುರ ಎಸ್ಪಿ ಎಚ್. ಡಿ. ಆನಂದ ಕುಮಾರ(Vijayapura SP H D Anand Kumar) ಹೇಳಿದ್ದಾರೆ.

ವಿಜಯಪುರ ನಗರದ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಭಾರತ ಸರಕಾರ ಆಯುಷ್ಯ ಮಂತ್ರಾಲಯ, ಮುರಾರ್ಜಿ ದೇಸಾಯಿ ರಾಷ್ರ್ಟೀಯ ಯೋಗ ವಿದ್ಯಾಲಯ, ನವ ದೆಹಲಿ, ಬಿ. ಎಲ್. ಡಿ. ಇ. ಡೀಮ್ಡ್ ವಿಶ್ವವಿದ್ಯಾಲಯ, ವಿಜಯಪುರ ಮತ್ತು ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ತಪೋವನ ಟ್ರಸ್ಟ, ಹುಲ್ಯಾಳ ಇವರ ಸಂಯೂಕ್ತಾಶ್ರಯದಲ್ಲಿ ನಡೆದ ಯೋಗೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ವಿಜಯಪುರದ ಐತಿಹಾಸಿಕ ಗೋಳಗುಮ್ಮಟ ಅವರಣದಲ್ಲಿ ಯೋಗೋತ್ಸವ ಕಾರ್ಯಕ್ರಮ ಉದ್ಘಾಟನೆ ನಡೆಯಿತು

ಇಂದಿನ ಯಾಂತ್ರಿಕ ಜೀವನದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ ಅಗತ್ಯವಾಗಿದೆ.  ಆದರೆ, ಯಾರೂ ಅದರತ್ತ ಯೋಚಿಸುತ್ತಿಲ್ಲ.  ದೈಹಿಕ ಸದೃಢತೆಯ ಜೊತೆಗೆ ಮಾನಸಿಕ ಏಕಾಗೃತೆಯೂ ಮುಖ್ಯವಾಗಿದೆ.  ಭಾರತೀಯರು ಅಭಿವೃದ್ಧಿ ಪಡಿಸಿರುವ ಯೋಗ ಈಗ ವಿಶ್ವವ್ಯಾಪಿಯಾಗಿದೆ.  ಯೋಗ ವಿಶ್ವದ ಆರೋಗ್ಯ ಕ್ಷೇತ್ರಕ್ಕೆ ಭಾರತೀಯರು ನೀಡಿರುವ ದೊಡ್ಡ ಕೊಡುಗೆಯಾಗಿದೆ.  ಆದರೂ, ಬಹುತೇಕರು ಇದರತ್ತ ಗಮನ ಹರಿಸಿಲ್ಲ.  ನಾವು ಯೋಗ ಮಾಡುತ್ತ ಬೇರೆಯವರೂ ಯೋಗ ಮಾಡುವಂತೆ ಪ್ರೇರೆಪಿಸಬೇಕು.  ಭಾರತೀಯರಾದ ನಾವು ಯೋಗದ ಮಹತ್ವ ಅರಿತುಕೊಂಡು ಮುನ್ನಡೆಯಬೇಕು.  ಜನರ ಉತ್ತಮ ಆರೋಗ್ಯ ಆ ದೇಶದ  ದೇಶದ ಅಭಿವೃದ್ಧಿಯ ಸೂಚ್ಯಂಕವನ್ನು ಹೆಚ್ಚಿಸುತ್ತದೆ.  ನಾನೂ ಕೂಡ ಇನ್ನು ಮುಂದೆ ಪ್ರತಿನಿತ್ಯ ಯೋಗ ಮಾಡುವೆ ಎಂದು ಎಚ್. ಡಿ. ಆನಂದ ಕುಮಾರ ಹೇಳಿದರು.

ಹುಲ್ಯಾಳದ ವೇದಾಂತ ಕೇಸರಿ ಶ್ರೀ ಮಲ್ಲಿಕಾರ್ಜುನ ಗುರುದೇವ ತಪೋವನ ಸಂಸ್ಥೆಯ ಶ್ರೀ ಹರ್ಷಾನಂದ ಸ್ವಾಮಿಜೀ ಮಾತನಾಡಿ, ಯೋಗದಿಂದ ಸಾಕಷ್ಟು ಲಾಭ ಇವೆ ಎಂಬುದು ಎಲ್ಲರಿಗೂ ಗೊತ್ತಿದೆ.  ಆದರೆ, ಅದನ್ನು ನಿರ್ಲಕ್ಷ್ಯಿಸುವವರ ಸಂಖ್ಯೆ ಹೆಚ್ಚು.  ಯೋಗದಿಂದ ಸದೃಢ ಆರೋಗ್ಯ ಸಾಧ್ಯವಿದ್ದರೂ ನಾವು ಅದನ್ನು ಮಾಡುವುದಿಲ್ಲ.  ನಾವು ಭಾರತೀಯರು ಹೆಚ್ಚು ಆಲಸ್ಯರಾಗಿದ್ದೇವೆ.  ಬಿಪಿ ಮತ್ತು ಶುಗರ್ ಬಂದಾಗ ಮಾತ್ರ ಯೋಗ ಪ್ರಾರಂಭಿಸುತ್ತೇವೆ.  ಅದಕ್ಕೂ ಮುಂಚೆ ನಾವು ಅದರ ಬಗ್ಗೆ ಯೋಚಿಸುವುದಿಲ್ಲ.  ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.  ಸೌಂದರ್ಯ ವೃದ್ಧಿಸುತ್ತದೆ.  ಯೋಗ ಶರೀರ ಮತ್ತು ಮನಸ್ಸನ್ನು ಜೋಡಿಸುತ್ತದೆ.  ಶರೀರದ ಸೂಪ್ತರೂಪ ಮನಸ್ಸು.  ಮನಸ್ಸಿನ ಸ್ಥೂಲ ರೂಪ ಶರೀರವಾಗಿದೆ.  ಇದರ ಜೋಡಣೆಯಿಂದ ಮಾತ್ರ ಸದೃಢ ಆರೋಗ್ಯ ಸಾಧ್ಯ,  ಮನಸ್ಸು ಮತ್ತು ಶರೀರ ಒಟ್ಟಿಗೆ ಸೇರಿದಾಗ ಮಾತ್ರ ಕೆಲಸಗಳು ಯಶಸ್ವಿಯಾಗುತ್ತವೆ ಎಂದು ಹೇಳಿದರು.

 

ಜೀವಾತ್ಮ ಮತ್ತು ಪರಮಾತ್ಮ ಒಂದಾಗುವುದೇ ಯೋಗ.  ಭಾರತದ ಋಷಿ ಮುನಿಗಳು ವಿಶ್ವಕ್ಕೆ ನೀಡುವ ಅತಿದೊಡ್ಡ ಕೊಡುಗೆ ಯೋಗ.  ವ್ಯಾಯಾಮಗಳನ್ನು ಜೀವನಪೂರ್ತಿ ಮಾಡಲಾಗುವುದಿಲ್ಲ.  ಆದರೆ ಜೀವನದ ಕೊನೆಯ ಉಸಿರು ಇರುವವರೆಗೂ ಯೋಗವನ್ನು ಮಾಡಬಹುದಾಗಿದೆ.  ಐದು ಬಗೆಯ ಯೋಗದ ವಿಧಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು.  ಈ ನಿಟ್ಟಿನಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ವೈದ್ಯಕೀಯ ಕಾಲೇಜು ಉತ್ತಮ ಕೆಲಸ ಮಾಡುತ್ತಿದೆ.  ಜೂನ 21 ರಂದು ಅಂತಾರಾಷ್ಟ್ರೀಯ ಯೋಗ ದಿನದಂದು ವಿಜಯಪುರದಲ್ಲಿ ಒಂದು ಲಕ್ಷ ಜನರನ್ನು ಒಂದೆಡೆ ಸೇರಿಸಿ ಸಾಮೂಹಿಕ ಯೋಗ ಮಾಡಲಾಗುವುದು.  ಈ ಕಾರ್ಯಕ್ರಮಕ್ಕೆ ಬಿ ಎಲ್ ಡಿ ಇ ಸಂಸ್ಥೆ ಸಹಕಾರ ನೀಡಲಿದೆ ಎಂದು ಹೇಳಿದರು.

ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ,  ಯೋಗೋತ್ಸವ ಕಾರ್ಯಕ್ರಮ ಆರೋಗ್ಯ ವರ್ಧನೆಗೆ ಅನುಕೂಲವಾಗಿದೆ.  ನಾವು ಕೂಡ ಪ್ರತಿನಿತ್ಯದ ಕನಿಷ್ಠ ಅರ್ಧಗಂಟೆಯಾದರೂ ಯೋಗಾಭ್ಯಾಸ ಮಾಡಬೇಕು.  ಯೋಗದಿಂದ ನಾವಷ್ಟೇ ಅಲ್ಲ ಸಮಾಜದ ಸ್ವಾಸ್ಥ್ಯವನ್ನೂ ಸುಧಾರಿಸಬಹುದಾಗಿದೆ.  ಜೂನ್ 21ರಂದು ಸ್ವಾಮೀಜಿಗಳು ಆಯೋಜಿಸಿರುವ ಒಂದು ಲಕ್ಷ ಜನರಿಂದ ಸಾಮೂಹಿಕ ಯೋಗ ಕಾರ್ಯಕ್ರಮಕ್ಕೆ ಬಿ ಎಲ್ ಡಿ ಇ ವಿಶ್ವವಿದ್ಯಾಲಯವೂ ಕೈಜೊಡಿಸಲಿದೆ ಎಂದು ಹೇಳಿದರು.

ಯೋಗವನ್ನು ಮತ್ತಷ್ಟು ಉತ್ತೇಜಿಸಲು ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಲಾಲಯ ಮುಂಬಂರುವ ದಿನಗಳಲ್ಲಿ ಪಠ್ಯಕ್ರಮದಲ್ಲಿ ಯೋಗಾಭ್ಯಾಸವನ್ನು ಸೇರಿಸಲಾಗುವುದು.  ಅಲ್ಲದೆ ಈ ವಿಷಯದಲ್ಲಿ ಕೋರ್ಸುಗಳನ್ನು ಕೂಡ ತೆರೆಯಲು ಚಿಂತಿಸುತ್ತೇವೆ.  ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ.  ಸಾವಿರಾರು ವರ್ಷಗಳ ಹಿಂದಿನಿಂದ ಋಷಿಮುನಿಗಳು ಯೋಗವನ್ನು ಮಾಡುತ್ತ ಬಂದಿದ್ದಾರೆ.  ಈ ಮೂಲಕ ವಿಶ್ವಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.  ಇದನ್ನು ನಮ್ಮ ಪ್ರಧಾನಿಗಳು ವಿಶ್ವವ್ಯಾಪಿ ಮಾಡಲು ಶ್ರಮಪಟ್ಟಿದ್ದಾರೆ.  ಯೋಗ ಸೇರಿದಂತೆ ಸಮಾಜಕ್ಕೆ ಲಾಭವಾಗುವ ಎಲ್ಲ ಯೋಜನೆಗಳಿಗೆ ವಿಶ್ವವಿದ್ಯಾಲಯ ಕೈಜೋಡಿಸಲು ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಅವರು ಹೇಳಿದರು.

ಬೆ. 6.30 ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಆರಂಭವಾದ ಈ ಯೋಗೋತ್ಸವ ಕಾರ್ಯಕ್ರಮದಲ್ಲಿ ಬಿ ಎಲ್ ಡಿ ಇ ವೈದ್ಯಕೀಯ ವಿದ್ಯಾಲಯದ ಶರೀರ ಕ್ರಿಯಾ ವಿಭಾಗ ಮತ್ತು  ಯೋಗ ಕೇಂದ್ರ ಸಂಯೋಜಕಿ ಡಾ. ಜ್ಯೋತಿ ಖೋದ್ನಾಪುರ, ಯೋಗ ಶಿಕ್ಷಕ ಎಂ. ಪಿ. ದೊಡ್ಡಮನಿ ಅವರ ನೇತೃತ್ತ್ವದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ, ಯೊಗಾಭ್ಯಾಸ ಹಾಗೂ ಯೋಗ ಪ್ರದರ್ಶನ ನಡೆಯಿತು.  ಈ ಕಾರ್ಯಾಕ್ರಮದಲ್ಲಿ ಸುಮಾರು 300 ವಿದ್ಯಾರ್ಥಿಗಳು ಪಾಲ್ಗೋಂಡರು.

ಸಹ ಪ್ರಾಧ್ಯಾಪಕಿ ಡಾ. ಶ್ರೀಲಕ್ಷ್ಮಿ ಬಗಲಿ ಮತ್ತು ಕಾರ್ಯಕ್ರಮ ಆಯೋಜಕರನ್ನು ಸ್ವಾಮೀಜಿ ಈ ಸಂದರ್ಭದಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ, ಬಿ ಎಲ್ ಡಿ ಇ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಲಕ್ಕಣ್ಣನವರ, ಬಿ ಎಲ್ ಡಿ ಇ ಶರೀರ ಕ್ರಿಯಾಶಾಸ್ತ್ರ ವಿಭಾಗ ಹಾಗೂ ಯೊಗ ವಿಜ್ಞಾನ ವಿಭಾಗ ಮುಖ್ಯಸ್ಥೆ ಡಾ. ಸುಮಂಗಲಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.  ಪ್ರಾಧ್ಯಾಪಕಿ ಡಾ. ಲತಾ ಮುಳ್ಳೂರ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌