CM Yatnal: ಬೊಮ್ಮಾಯಿ ಮತ್ತೆ ಸಿಎಂ ಆದರೆ ನನ್ನದೇನೂ ತಕರಾರಿಲ್ಲ- ಜನರನ್ನು ದರಿದ್ರ ಮಾಡುವ ಯೋಜನೆಗಳ ಬೊಮ್ಮಾಯಿ ಕೈ ಬಿಡಲಿ- ಯತ್ನಾಳ

ವಿಜಯಪುರ: ಬಸವರಾಜ ಬೊಮ್ಮಾಯಿ(Basavaraj Bommayi) ಅವರು ಮತ್ತೆ(Again) ಮುಖ್ಯಮಂತ್ರಿಯಾದರೆ(Chief Minister) ನಮ್ಮದ್ಯಾರದೂ ತಕರಾರಿಲ್ಲ(We Have No Objection) ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Vijayapura City BJP MLA Basavagouda Patil Yatnal) ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಪೀರಾಪುರ- ಬೂದಿಹಾಳ ಏತ ನೀರಾವರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿಮಗೆ ಮುಖ್ಯಮಂತ್ರಿಯಾಗುವ ಒಳ್ಳೆಯ ಅವಕಾಶ ಸಿಕ್ಕಿದೆ.  ಈಗಾಗಲೇ ಮುದ್ದೇಬಿಹಾಳ ಶಾಸಕ ಎ. ಎಸ್. ಪಾಟೀಲ ನಡಹಳ್ಳಿ ಅವರು ಮುಂದಿನ ಬಾರಿಯೂ ನೀವೇ ಮುಖ್ಯಮಂತ್ರಿಯಾಗಿರಿ ಎಂದು ಹೇಳಿದ್ದಾರೆ.  ಇದಕ್ಕೆ ಯಾರದೂ ತಕರಾರಿಲ್ಲ.  ನಮ್ಮದೇನಾದರೂ ತಕರಾರು ಇದೆ ಎಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿಸಿದರು.

ಆಗ ವೇದಿಕೆಯಲ್ಲಿದ್ದ ಸಿಎಂ ಬಸವರಾಜ ಬೊಮ್ಮಾಯಿ ಯತ್ನಾಳ ಅವರಿಗೆ ಕೈ ಮುಗಿದರು.  ಮತ್ತೆ ಮಾತು ಮುಂದುವರೆಸಿದ ಯತ್ನಾಳ, ನಾವ್ಯಾರು ತಕರಾರು ಮಾಡುವ ಮಕ್ಕಳೇ ಅಲ್ಲ.  ನಾನು ಏನೂ ಆಗುವುದಿಲ್ಲ ಎಂದ ಮೇಲೆ ಯಾಕೆ ಸುಮ್ಮ ಸುಮ್ಮನೆ ತಲೆ ಕೆಡಿಸಿಕೊಳ್ಳಬೇಕು? ಅದಕ್ಕೆ ನಾನು ಹೇಳುವುದಿಷ್ಟೇ.  ನಿಯತ್ತಿನಿಂದ ನಮ್ಮ ಜನರ ಸೇವೆ ನಾವು ಮಾಡೋಣ.  ಬರೀ ತಿಂದು ತಿಂದು ನಮ್ಮ ಮಕ್ಕಳು, ಮರಿಮೊಮ್ಮಕ್ಕಳು, ನಮಗೆ ಎಂಥ ಮಕ್ಕಳು ಹುಟ್ಟುತ್ತವೆ ಗೊತ್ತಿಲ್ಲ.  ನಾಳೆ ಒಂದು ಅಂಗವಿಕಲ ಹುಟ್ಟುತ್ತವೋ? ಹುಚ್ಚ ಹುಟ್ಟುತ್ತವೋ? ಇಷ್ಟೇಲ್ಲ ಆಸ್ತಿ ಮಾಡುವುದು ಯಾರಿಗಾಗಿ? ರೈತರ ಹೆಸರಿನಲ್ಲಿ ತಿನ್ನುವುದು ಬೇಡ.  ನನ್ನ ಜೀವವು ರೈತರಿಗಾಗಿದೆ.  ರೈತರಿಗಾಗಿ ಜೀವ ಕೊಡುತ್ತೇವೆ ಎಂದು ಹೇಳುತ್ತಾರೆ.  ಪ್ರಾಣ ಕೊಡಬೇಡಿ ಮಾರಾಯ್ರೆ.  ರೊಕ್ಕ ತಿನ್ನುವುದನ್ನು ಬಂದ್ ಮಾಡಿ.  ಪ್ರಾಣ ಕೊಡೋದು ಬೇಡ.  ನಿನ್ನ ಪ್ರಾಣ ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಚ್ಚಿ ನೆಕ್ಕುವುದಿದೆಯಾ ಎಂದು ರೈತರ ಪರ ಎಂದು ಹೇಳುವ ತಮ್ಮದೇ ಪಕ್ಷದ ನಾಯಕರ ಹೆಸರು ಹೇಳದೆ ಹಾಸ್ಯದ ಧಾಟಿಯಲ್ಲಿಯೇ ವಾಗ್ದಾಳಿ ನಡೆಸಿದರು.

ವಿಜಯಪುರ ನಗರ ಬಿಜೆಬಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಷಣ ಮಾಡುತ್ತಿರುವುದ

ಜನಪ್ರೀಯ ಕಾರ್ಯಕ್ರಮಗಳನ್ನು ಬಂದ್ ಮಾಡಿ ಜನರಿಗೆ ನೀರು ಕೊಡಿ

ಇದೇ ವೇಳೆ ವೇದಿಕೆಯಲ್ಲಿಯೇ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ ಅವರು, ಜನಪ್ರೀಯ ಕೆಲವೊಂದು ಕಾರ್ಯಕ್ರಮ ಬಂದ್ ಮಾಡಿ.  ನಮ್ಮ ಜನರಿಗೆ ಬೇಕಾಗಿದ್ದು ನೀರು.  ಒಂದು ಕುಡಿಯಲು ಮತ್ತೊಂದು ನೀರಾವರಿ.  ಇವೆರಡು ಆದರೆ ಸಾಕು.  ನೀವೇನೂ ತಾಳಿಭಾಗ್ಯ ಕೊಡುವುದು ಬೇಕಾಗಿಲ್ಲ.  ಅನ್ನಭಾಗ್ಯ ಕೊಡುವ ಯೋಜನೆ ಬೇಕಾಗಿಲ್ಲ.  ಇವೆಲ್ಲ ದರಿದ್ರ ಮಾಡುವ ಯೋಜನೆಗಳು.  ರೈತರಿಗೆ ನಿಜವಾದ ಉಪಕಾರ ಮಾಡಬೇಕಿದ್ದರೆ ಸಮಗ್ರ ನೀರಾವರಿ ಮಾಡಿ.  ನೀವು ಧೈರ್ಯ ಮಾಡಿ.  ಇನ್ನೋಂದು ವರ್ಷವಿದೆ.  ಏನಾಗುವುದಿದೆ? ಕೆಲವೊಂದು ಸ್ಕೀಂ ತೆಗೆದು ಹಾಕಿ.  ಅಲ್ಪಸಂಖ್ಯಾತರಿಗೆ ರೂ. 2000 ಕೋ. ಯಾಕೆ ಕೊಡ್ತೀರಾ? ಅವರು ಹಿಂದೂಸ್ಥಾನದಲ್ಲಿಯೇ ಇದ್ದಾರೆ.  ಅವರೇನೂ ಪಾಕಿಸ್ತಾನದಲ್ಲಿಲ್ಲ.  ಸುಮ್ಮನೇ ರೂ. 2000 ದಿಂದ ರೂ. 3000 ಕೋ. ಯಾಕೆ ಕೊಡ್ತೀರಾ? ಒಂದೇ ನಾಡಿನವರು ನಾವೆಲ್ಲ ಎಂದು ಹೇಳಿ ಪ್ರತ್ಯೇಕವಾಗಿ ಯಾಕೆ ಹಣ ಮೀಸಲಿಡ್ತೀರಾ? ಎಂದು ಯತ್ನಾಳ ಪ್ರಶ್ನಿಸಿದರು.

ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಂಭಾವಿತರು.  ಸೋಮನಗೌಡರ ಮೇಲೆ ಬೊಮ್ಮಾಯಿ ಸಾಹೇಬರಿಗೆ ಬಹಳ ಪ್ರೀತಿ ಇದೆ.  ಲವ್ ಇದೆ.  ಗಪ್ ಚುಪ್ ಕೊಡ್ತಾರೆ.  ನನಗೂ ಕೊಡ್ತಾರ.  ಗಪ್ ಚುಪ್ ಕೊಡ್ತಾರ.  ಯಾರಿಗೂ ಹೇಳಬ್ಯಾಡ್ರಿ ಗೌಡ್ರ ಎಂದು ಹೇಳ್ತಾರೆ.  ಮತ್ತೆ ಕೊಡ್ತಾರೆ.  ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ನೆಮ್ಮದಿಯ ಜೀವನ ಮಾಡುತ್ತಿದ್ದೇನೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

Leave a Reply

ಹೊಸ ಪೋಸ್ಟ್‌