ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲಾ(Vijayapura District) ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommayi) ಅವರಿಗೆ ಅನ್ನದಾತರು ಜೋಡೆತ್ತ ಮತ್ತು ಹಸುವನ್ನು(Two Oxen And Cow) ಕಾಣಿಕೆಯಾಗಿ ನೀಡಿದ್ದಾರೆ.
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಬಳಿ ಬೂದಿಹಾಳ- ಪೀರಾಪೂರ ಏತ ನೀರಾವರಿ ಯೋಜನೆ ಮೊದಲ ಹಂತದ ಉದ್ಘಾಟನೆ ಹಾಗೂ ಎರಡನೇ ಹಂತದ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಸಿಎಂ ಬೊಮ್ಮಾಯಿ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ, ಶಾಸಕ ಸೋಮನಗೌಡ ಪಾಟೀಲ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಂತರ ವೇದಿಕೆಗೆ ಆಗಮಿಸುವುದಕ್ಕೂ ಮುಂಚೆ ಸಿಎಂ ಗೋಮಾತೆಗೆ ಪೂಜೆ ನೆರವೇರಿಸಿದರು. ಈ ಪೂಜೆಯ ವೇಳೆ ಸಿಎಂ ಬೊಮ್ಮಾಯಿ ಅವರಿಗೆ ರೈತರು ಜೋಡೆತ್ತು ಹಾಗೂ ಹಸುವನ್ನು ಕಾಣಿಕೆ ನೀಡಿದರು. ತಾಳಿಕೋಟೆ ತಾಲೂಕಿನ ಬಂಟನೂರ ಗ್ರಾಮದ ರೈತರಿಂದ ಜೋಡೆತ್ತು ಹಾಗೂ ಹಸು ಕಾಣಿಕೆ
ಪಡೆದ ಬಳಿಕ ಸಿಎಂ ವೇದಿಕೆಗೆ ತೆರಳಿದರು.
ಇದಕ್ಕೂ ಮುಂಚೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು, ಕೊರೊನಾ ನಾಲ್ಕನೇ ಅಲೆಯ ಕುರಿತು ಗಾಭರಿಯಾಗುವ ಅವಶ್ಯಕತೆ ಇಲ್ಲ. ಆಸ್ಪತ್ರೆಗೆ ಸೇರುವವರ ಪ್ರಮಾಣ ಜಾಸ್ತಿ ಇಲ್ಲ. ಆದರೂ ಎಲ್ಲರೂ ಕಡ್ಡಾಯವಾಗಿ ಜಾಗೃತಿ ವಹಿಸಬೇಕು. ಕೊರೊನಾ ನಡಾವಳಿಗಳನ್ನು ಮತ್ತೊಮ್ಮೆ ರೂಪಿಸಬೇಕಿದೆ. ಎಲ್ಲರೂ ಮಾಸ್ಕ್ ಹಾಕಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಎಲ್ಲರೂ ನಿಯಮ ಪಾಲಿಸಿದರೆ ಒಳ್ಳೆಯದು ಎಂದು ಸಲಹೆ ನೀಡಿದರು.
ಇದನ್ನು ಓದಿ:
Lift Irrigation Scheme: ಸಿಎಂ ಚಾಲನೆ ನೀಡಲಿರುವ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ವಿಶೇಷತೆ ಏನು ಗೊತ್ತಾ?
ಅಂತಾರಾಜ್ಯ ಗಡಿಗಳಲ್ಲಿ ಮುಂಜಾಗ್ರತೆ ವಹಿಸುವ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು ಬುಧವಾರ ಪ್ರಧಾನಿಗಳ ಸಭೆ ಇದೆ. ಈ ಸಭೆಯ ಬಳಿಕ ನಿರ್ಣಯ ಮಾಡುತ್ತೇವೆ. ಏರ್ ಪೋರ್ಟ್, ರಾಜ್ಯದ ಗಡಿಗಳಲ್ಲಿ ಮುಂಜಾಗೃತೆ ವಹಿಸಲಾಗುವುದು. ಮಹಾರಾಷ್ಟ್ರ ಹಾಗೂ ಕೇರಳ ಗಡಿಯಲ್ಲಿ ಮುಂಜಾಗೃತೆಗೆ ಸಭೆ ನಡೆಸಿ ಬಳಿಕ ತೀರ್ಮಾನ ಮಾಡಲಾಗುವುದು. ಪರಿಸ್ಥಿತಿ ಅವಲೋಕಿಸಿ ಮುಂದಿನ ತೀರ್ಮಾನ ಮಾಡಲಾಗುತ್ತದೆ ಎಂದು ಸಿಎಂ ಹೇಳಿದರು.
ಸಂಪುಟ ವಿಸ್ತರಣೆ ವಿಚಾರ
ಸಂಪುಟ ವಿಸ್ತರಣೆ ಆಥವಾ ಪುನಾರಚಣೆ ವಿಚಾರಕ್ಕೆ ನೀವೇ ಡೇಟ್ ಪಿಕ್ಸ್ ಮಾಡಿ ಎಂದು ಸಿಎಂ ಮಾದ್ಯಮದವರಿಗೆ ಹೇಳಿದರು.
ಸಚಿವ ಸಂಪುಟ ವಿಸ್ತರಣೆ ತಡವಾಗುತ್ತಿದೆ ಎಂದು ಪ್ರಶ್ನೆ ಕೇಳಿದ್ದಕ್ಕೆ ಉತ್ತರಿಸಿದ ಸಿಎಂ
ನೀವೇ ಡೇಟ್ ಫಿಕ್ಸ್ ಮಾಡಿ ಎಂದು ಹಾಸ್ಯದ ದಾಟಿಯಲ್ಲಿ ಹೇಳಿದರು.
ಈ ವಿಚಾರವಾಗಿ ಹೈಕಮಾಂಡ ಇನ್ನು ನನಗೆ ಕರೆದಿಲ್ಲ. ಹೈಕಮಾಂಡ ಕರೆದ ಮೇಲೆ ಏನು ನಿರ್ಣಯ ಆಗುತ್ತದೆ ನೋಡಬೇಕಾಗುತ್ತದೆ. ನಿರ್ಣಯ ಆದ ಮೇಲೆ ಮಾಧ್ಯಮಗಳ ಮುಂದೆ ಹೇಳುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.