Lift Irrigation Scheme: ಸಿಎಂ ಚಾಲನೆ ನೀಡಲಿರುವ ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ವಿಶೇಷತೆ ಏನು ಗೊತ್ತಾ?

ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommayi) ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕು ವ್ಯಾಪ್ತಿಯ 38 ಹಳ್ಳಿಗಳಿಗೆ ನೀರಾವರಿ ಕಲ್ಪಿಸಲು(38 Villages Irrigation Project) ಉದ್ದೇಶಿಸಿರುವ ಬಹು ನಿರೀಕ್ಷಿತ ಪೀರಾಪುರ- ಬೂದಿಹಾಳ(Peerapur Budihal) ಏತ ನೀರಾವರಿ ನೀರಾವರಿ(Lift Irrigation Scheme) ಯೋಜನೆಯ ಮೊದಲ ಹಂತದ ಪೈಪ್ ವಿತರಣಾ ಜಾಲದ(Pipe Distribution Work) ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಕೊಡಗಾನೂರ ಬಳಿ ಕಾರ್ಯಕ್ರಮಕ್ಕೆ ಸಿದ್ಧವಾಗಿರುವ ವೇದಿಕೆ

ಈ ಕಾರ್ಯಕ್ರಮಕ್ಕಾಗಿ ಕೊಡಗಾನೂರ ಬಳಿ ವಿಶಾಲ ಪೆಂಡಾಲ್ ಹಾಕಲಾಗಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.  ಮುಖ್ಯಮಂತ್ರಿ ಜೊತೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಎ. ಎಸ್. ಪಾಟೀಲ ನಡಹಳ್ಳಿ  ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಪಾಲ್ಗೋಳ್ಳಲಿದ್ದಾರೆ.

ಈ ಯೋಜನೆ ಆರಂಭವಾದರೆ ಮಸಕನಾಳ, ಭೀಳೆಬಾವಿ, ಮೈಲೇಶ್ವರ, ಬಿ.ಸಾಲವಾಡಗಿ, ಮಟಕದನಹಳ್ಳಿ, ನವದಗಿ, ಬೇಲೂರ, ಗುಂಡಕನಾಳ, ಕೊಡಗಾನೂರ, ಲಕ್ಕುಂಡಿ, ಶೆಳ್ಳಗಿ, ಕಾರಗನೂರ, ಗೊಟಕಂಡಕಿ, ಗಡಿ ಸೋಮನಾಳ, ಬಂಟನೂರ, ಪೀರಾಪುರ, ಹೂವಿನಹಳ್ಳಿ, ಅಸ್ಕಿ, ನೀರಲಗಿ, ಬೇಕಿನಾಳ, ಬನಹಟ್ಟಿ, ಜಲಪುರ, ಬೀಂಜಲಬಾವಿ, ಕಲಕೇರಿ, ಬೂದಿಹಾಳ, ಹಾಳಗುಂಡಕನಾಳ, ರಾಂಪುರ, ತುರುಕನಗೇರಿ, ವನಕ್ಯಾಳ ಸೇರಿ ಒಟ್ಟು 16 ಲಕ್ಷ 47 ಸಾವಿರದ 686 ಹೇಕ್ಟೇರ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ.

ಯೋಜನೆಯ ಮಾಹಿತಿ

ಯಾದಗಿರಿ ಜಿಲ್ಲೆಯ ನಾರಾಯಣ ಜಲಾಶಯದ ಎಡಭಾಗದಲ್ಲಿರುವ ಹಿನ್ನಿರನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ಗ್ರಾಮದ ಹತ್ತಿರ ನೀರನ್ನು ಎತ್ತಿ ಸಿಂದಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಅಂದರೆ ಈಗಿನ ದೇವರ ಹಿಪ್ಪರಗಿ ಮತ್ತು ತಾಳಿಕೋಟಿ ತಾಲೂಕಿನ ವ್ಯಾಪ್ತಿಯಲ್ಲಿ ನೀರಾವರಿ ಸೌಲಭ್ಯ ದೊರೆಯಲಿದೆ.  ದೇವರ ಹಿಪ್ಪರಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 38 ಗ್ರಾಮಗಳ ನೀರಾವರಿ ವಂಚಿತ 20,243 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಯೋಜನೆ ಇದಾಗಿದೆ.

ಕೇಂದ್ರ ಸರಕಾರದಿಂದ ಅನುಮೋದನೆ

ಈ ಯೋಜನೆಯಲ್ಲಿ ನೀರಾವರಿಗೆ ಒಳಪಡುವ ಸಂಪೂರ್ಣ 20043 ಹೇಕ್ಟೆರ್ ಕ್ಷೇತ್ರವನ್ನು 5 ರಿಂದ 30 ಹೆಕ್ಟೇರ್ ಬ್ಲಾಕಗಳಾಗಿ ವಿಂಗಡಿಸಲಾಗಿದ್ದು, ನೀರನ್ಮು ವಿತರಣಾ ಜಾಲದ ಪೈಪಲೈನ್ ಮೂಲಕ ಸ್ಕಾಡಾ ನಿಯಂತ್ರಣದೊಂದಿಗೆ ಪ್ರತಿ ಬ್ಲಾಕಿಗೆ ಒದಗಿಸಲು ವಿನ್ಯಾಶ ಮಾಡಲಾಗಿದೆ.  ಈ ಯೋಜನೆಗೆ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯದಿಂದ ಅವಶ್ಯಕ ಪರಿಸರ ತಿರುವಳಿಗೆ ಅನುಮೋದನೆಯನ್ನು ಪಡೆಯಲಾಗಿದೆ.

ನಕ್ಷೆ ವಿನ್ಯಾಸಗಳಿಗೆ ಅನುಮೋದನೆ

ಗುತ್ತಿಗೆದಾರರು ಯೋಜನೆಯ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.  ಸಂಪೂರ್ಣ ಯೋಜನೆಯ ವಿನ್ಯಾಸ ಮತ್ತು ನಕ್ಷೆಗಳನ್ನು ತಯಾರಿಸುವ ಕಾರ್ಯ ಪೂರ್ಣವಾಗಿದೆ.  ಈ ನಕ್ಷೆ ಮತ್ತು ವಿನ್ಯಾಸಗಳಿಗೆ ಕೂಡ ಅನುಮೋದನೆ ಪಡೆಯಲಾಗಿದೆ. ಅಲ್ಲದೇ, ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಿ ಉದ್ದೇಶಿತ ನೀರಾವರಿ ಕ್ಷೇತ್ರಕ್ಕೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ.

ಕಾಮಗಾರಿ ಬಹುತೇಕ ಪೂರ್ಣ

ಈ ಯೋಜನೆಯ ಮೊದಲ ಹಂತದಲ್ಲಿ ರೂ. 523.03 ಕೋ. ವೆಚ್ಚದಲ್ಲಿ ಜಾಕವೆಲ್, ಪಂಪಹೌಸ್, ರೈಸಿಂಗ್ ಮೇನ್ ಹಾಗೂ ಎರಡು ಸ್ಥಳಗಳಲ್ಲಿ ಡೆಲಿವರಿ ಚೇಂಬರ್ ನಿರ್ಮಾಣದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಚಾಲನೆಗೆ ಸಿದ್ಧಗೊಂಡಿದೆ.

18 ತಿಂಗಳವರೆಗೆ ಕಾಲವಕಾಶ

ಈ ಯೋಜನೆಯ ಎರಡನೇ ಕಾಮಗಾರಿಗೆ ಸಂಬಂಧಿಸಿದಂತೆ ಸ್ವಯಂಚಾಲಿತ ವಾಲ್ವ, ಪೈಪಲೈನ್, ಎಲೆಕ್ಟ್ರೋ ಮೆಕ್ಯಾನಿಕಲ್ ಕಾಮಗಾರಿ, ಸ್ಕಾಡಾ ಅಟೋಮೇಶನ್ ಇತ್ಯಾದಿ ಕಾಮಗಾರಿಗೆ ರೂ. 796.11 ಕೋ.   ಗುತ್ತಿಗೆಯನ್ನು ನೀಡಲಾಗಿದೆ.  ಈ ಕಾಮಗಾರಿಯನ್ನು ಪೂರ್ಣಗೊಳಿಸಲು 18 ತಿಂಗಳು ಅಂದರೆ, 2023ರ ಜನವರಿ ಅಂತ್ಯದವರೆಗೆ ಕಾಲವಕಾಶ ನೀಡಲಾಗಿದೆ.

Leave a Reply

ಹೊಸ ಪೋಸ್ಟ್‌