ವಿಜಯಪುರ: ಸಿಎಂ(Chief Minister) ಕಂಡು ಹಸುವೊಂದು(Cow) ಗಲಿಬಿಲಿಗೊಂಡ(Melee) ಕಾರಣ ಕೆಲಕ್ಷಣ ಆತಂಕದ ವಾತಾವರಣ(Tense Situation) ಉಂಟಾದ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ(Kodaganur) ಗ್ರಾಮದಲ್ಲಿ ನಡೆದಿದೆ.
ಬೂದಿಹಾಳ- ಪೀರಾಪುರ ಏತ ನೀರಾವರಿ ಯೋಜನೆಯ ಹಂತ- 1 ಪೈಪ್ ವಿತರಣಾ ಜಾಲದ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೊಡಗಾನೂರಿಗೆ ಆಗಮಿಸಿದ್ದರು. ಈ ಯೋಜನೆಗೆ ಚಾಲನೆ ನೀಡುವುದಕ್ಕೂ ಮುಂಚೆ ಮುಖ್ಯಮಂತ್ರಿಗಳು ಗೋ ಮಾತೆಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಂಟನೂರು ಗ್ರಾಮದ ರೈತರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಜೋಡೆತ್ತು ಹಾಗೂ ಒಂದು ಆಕಳನ್ನು ಕಾಣಿಕೆಯಾಗಿ ನೀಡಿದರು.
ಮುಖ್ಯಮಂತ್ರಿಗಳು ಎತ್ತಿನ ಮೈಮೇಲೆ ಕೈಯಾಡಿಸಿ ಮುತ್ತಿಕ್ಕಿ ಭಕ್ತಿ ತೋರಿದರು. ಬಳಿಕ ಸಿಎಂ ಹಸು ಮಟ್ಟಲು ಹೋದಾಗ ಆ ಆಕಳು ಗಲಿಬಿಲಿಗೊಂಡಿತು. ಆಗ ಅದರ ಬಳಿಯಿದ್ದ ರೈತ ಹಸುವನ್ನು ಸಮಾಧಾನಪಡಿಸಿದರು. ಈ ಸಂದರ್ಭದಲ್ಲಿ ಕೆಲಕಾಲ ಆತಂಕದ ವಾತಾವರಣ ಉಂಟಾಗಿತ್ತು. ಸಿಎಂ ಜೊತೆಯಲ್ಲಿದ್ದ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಮುಖ್ಯಮಂತ್ರಿಗಳ ಬಳಿಗೆ ಬಂದು ಕಾರ್ಯಕ್ರಮದ ವೇದಿಕೆಯ ಕಡೆಗೆ ಕರೆದುಕೊಂಡು ಹೋದರು.
ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾರ್ಯಕ್ರಮದ ವೇದಿಕೆಗೆ ತೆರಳಿ ಪಾಲ್ಗೋಂಡರು.