Villages Reunion: ಹೊನಗನಹಳ್ಳಿ, ಸವನಳ್ಳಿ ಗ್ರಾಮಗಳನ್ನು ವಿಜಯಪುರ ತಾಲೂಕಿಗೆ ಮರುಸೇರ್ಪಡೆ ಮಾಡಿ ಸರಕಾರದಿಂದ ಅಂತಿಮ ಆದೇಶ- ಎಂ. ಬಿ. ಪಾಟೀಲ

ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ-ಸವನಳ್ಳಿ(Honaganahalli Savanalli) ಗ್ರಾಮಗಳನ್ನು(Villages) ವಿಜಯಪುರ ತಾಲೂಕಿಗೆ ಮರುಸೇರ್ಪಡೆ(Reunion) ಮಾಡಿ ರಾಜ್ಯ ಸರಕಾರ ಅಂತಿಮ ಆದೇಶ ಹೊರಡಿಸಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಬಬಲೇಶ್ವರ ಕಾಂಗ್ರೆಸ್ ಶಾಸಕ ಎಂ. ಬಿ. ಪಾಟೀಲ(MLA M B Patil) ತಿಳಿಸಿದ್ದಾರೆ.

ಬೆಂಗಳೂರಿನಿಂದ ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ನೂತನ ತಾಲೂಕು ರಚನೆಯಾದ ನಂತರ ವಿಜಯಪುರ ತಾಲೂಕಿನಲ್ಲಿದ್ದ ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳನ್ನು ಬಬಲೇಶ್ವರ ತಾಲೂಕಿಗೆ ಸೇರ್ಪಡೆ ಮಾಡಿ ಸರಕಾರ ಆದೇಶ ಹೊರಡಿಸಿತ್ತು.  ಆದರೆ, ಗ್ರಾಮಸ್ಥರು ಬಬಲೇಶ್ವರಕ್ಕೆ ಹೋಗಲು ಸುತ್ತು ಬಳಸಿ ಸಂಚರಿಸಬೇಕಾಗುತ್ತದೆ.  ಇದರಿಂದ ಅನಗತ್ಯವಾಗಿ ಕಿರಿಕಿರಿಯಾಗುತ್ತಿದೆ.  ಆದ್ದರಿಂದ ವಿಜಯಪುರ ತಾಲೂಕಿನಲ್ಲಿಯೇ ಮುಂದುವರೆಸುವಂತೆಯೇ ಆ ಗ್ರಾಮಸ್ಥರು ತಮ್ಮಲ್ಲಿ ಸತತವಾಗಿ ಮನವಿ ಮಾಡಿದ್ದರು.

ಸರಕಾರದ ಹೊರಡಿಸಿರುವ ಆದೇಶದ ಪ್ರತಿ

ಈ ಕುರಿತು ಸರಕಾರಕ್ಕೆ ಪತ್ರ ಬರೆದು ಕೋರಲಾಗಿತ್ತು,  ಅದರಂತೆ ಸರಕಾರ ಈ ಗ್ರಾಮಗಳನ್ನು ವಿಜಯಪುರ ತಾಲೂಕಿಗೆ ಮರುಸೇರ್ಪಡೆ ಮಾಡಿ ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಿತ್ತು.  ಈಗ ಯಾವುದೇ ಆಕ್ಷೇಪಣೆಗಳು ಇಲ್ಲದ ಹಿನ್ನೆಲೆಯಲ್ಲಿ ಸರಕಾರ ಹೊನಗನಹಳ್ಳಿ ಮತ್ತು ಸವನಹಳ್ಳಿ ಗ್ರಾಮಗಳನ್ನು ಬಬಲೇಶ್ವರ ತಾಲೂಕಿನಿಂದ ಬೇರ್ಪಡಿಸಿ, ವಿಜಯಪುರ ತಾಲೂಕಿಗೆ ಮರುಸೇರ್ಪಡೆ ಮಾಡಿ ಈಗ ಅಂತಿಮ ಆದೇಶ ಹೊರಡಿಸಿದೆ ಎಂದು ಎಂ. ಬಿ. ಪಾಟೀಲ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌