ವಿಜಯಪುರ: ಕಳೆದ 25 ವರ್ಷಗಳಿಂದ(Since 25 Years) ನಾನು ರಾಜ್ಯ ರಾಜಕೀಯದಿಂದ(State Politics) ಹೊರಗಿದ್ದೇನೆ. ನಾನು ಎಂ ಎಲ್ ಎ ಆಗಿದ್ದರೆ ಗೋವಿಂದ ಕಾರಜೋಳ(Govind Karjol) ಅವರಿಗೆ ತೊಂದರೆಯಾಗುತ್ತಿತ್ತು. ಅವರು ನನ್ನ ಸಮಾಜದ ಮನುಷ್ಯ. ಅವರೂ ನನ್ನ ಜೊತೆ ನನ್ನ ಎತ್ತರಕ್ಕೆ ಬೆಳೆಯಲಿ(His Political Growth) ಎಂಬ ಕಾರಣಕ್ಕೆ ತ್ಯಾಗ ಮಾಡಿ ರಾಜ್ಯ ರಾಜಕಾರಣ ಬಿಟ್ಟು ದೂರ ಇದ್ದೇನೆ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸಮಾಜದ ಒಬ್ಬ ವ್ಯಕ್ತಿ ನನ್ನ ಎತ್ತರಕ್ಕೆ ಬೆಳೆಯಲಿ ಎಂಬ ಅಪೇಕ್ಷೆಯಿಂದ ನಾನು ಕಳೆದ 25 ವರ್ಷಗಳಿಂದ ಬೆಂಗಳೂರು ಕಡೆ ತಲೆ ಹಾಕಿಲ್ಲ. ಈ ಬಾರಿ ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ಇಬ್ಬರೂ ಕೂಡಿ ಮಾತನಾಡುತ್ತೇವೆ. ಅವರು ರಾಜ್ಯದಲ್ಲಿ ಮಂತ್ರಿಯಾಗಿದ್ದರೆ ನಾನು ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ಇಬ್ಬರೂ ಒಂದೇ ಸಮಾಜದವರಿದ್ದೇವೆ. ಅವರು ನಿಲ್ಲುವುದಾದರೆ ಅವರು ನಿಲ್ಲಲಿ. ಅವರ ಮಗ ನಿಲ್ಲುವುದಾದರೆ ನಿಲ್ಲಲಿ. ನಾನು ಬೇಡ ಎನ್ನುವುದಿಲ್ಲ. ನಾನು ನಿಲ್ಲದಿದ್ದರೆ ಯಾರಾದರೂ ನಿಲ್ಲಲಿ. ನಾನಂತೂ ನನ್ನ ಮಗನನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ. ನಾನು ಬಹಳ ಸ್ಪಷ್ಟನಿದ್ದೇನೆ. ನನ್ನ ಪಕ್ಷದವರಿಗೂ ಅದನ್ನು ಹೇಳುತ್ತೇನೆ. ಕರ್ನಾಟಕ ರಾಜಕಾರಣಕ್ಕೆ ಹೋಗಿ ಎಂದರೆ ಅಲ್ಲಿಗೆ ಹೋಗುತ್ತೇನೆ. ದಿಲ್ಲಿಯಲ್ಲಿ ಇರು ಎಂದರೆ ಅಲ್ಲಿ ಇರುತ್ತೇನೆ. ಎರಡೂ ಬೇಡ ಎಂದರೆ ತೋಟದಲ್ಲಿ ಇರುತ್ತೇನೆ ಎಂದು ಹೇಳಿದರು.
45 ವರ್ಷ ನಾನು ಜನರ ಚಿಂತನೆ ಮಾಡಿದ್ದೇನೆ. ನಾನು ಬೇರೆಯವರಂತೆ ಅವರಿಗೆ ಅಂಜುವಿದಿಲ್ಲ ಇವರಿಗೆ ಅಂಜುವುದಿಲ್ಲ ಎಂದು ಹೇಳುವುದಿಲ್ಲ. ನಾನು ಅಂಜುವುದು ದೇವರಿಗೆ ಮತ್ತು ಮತದಾರರಿಗೆ ಮಾತ್ರ. ನಾಗಠಾಣದಿಂದ ಸ್ಪರ್ಧಿಸುವ ಬಗ್ಗೆ ನಾನು ಆಕಾಂಕ್ಷಿಯಲ್ಲ. ಪಕ್ಷದವರು ನಿರ್ಧಾರ ಮಾಡುತ್ತಾರೆ. ನಮ್ಮ ಕೈಯ್ಯಲ್ಲಿ ಏನೂ ಇಲ್ಲ. ಅವರು ಸ್ಪರ್ಧಿಸಿ ಎಂದೆ ಸ್ಪರ್ಧಿಸುತ್ತೇನೆ. ಭಾವಿಗೆ ಜಿಗಿಯಿರಿ ಎಂದರೆ ಜಿಗಿಯುತ್ತೇನೆ. ಅದಕ್ಕೇಕೆ ಯೋಚನೆ ಮಾಡಬೇಕು? ಪಕ್ಷ ಹೋಗು ಎಂದು ಹೇಳಿದರೆ ಹೋಗದಿದ್ದರೆ ಮರ್ಯಾದೆ ಇರುತ್ತಾ? ಎಂದು ಅವರು ಪ್ರಶ್ನಿಸಿದರು.
ಸ್ಟೋರ್ ಕೀಪರ್ ನನ್ನು ರಾಜಕೀಯವಾಗಿ ಬೆಳೆಸಿದ್ದೇನೆ
ಸಚಿವ ಗೋವಿಂದ ಕಾರಜೋಳ ಮತ್ತು ನಾನು ಬೇರೆ ಬೇರೆ ಎಂದು ಯಾರೂ ಭಾವಿಸಬಾರದು. ನಮ್ಮಲ್ಲಿ ಏನೇನೂ ವ್ಯತ್ಯಾಸವಿಲ್ಲ. ಅವರು ಬೆಳೆಯಲಿ ಎಂಬ ಕಾರಣಕ್ಕೆ ನಾನು ಕರ್ನಾಟಕದ ಕಡೆ ತಲೆ ಹಾಕಿ ನಿಂತಿಲ್ಲ. ಒಬ್ಬ ಸ್ಟೋರ್ ಕೀಪರ್ ನನ್ನು ರಾಜೀನಾಮೆ ಕೊಡಿಸಿ ರಾಜೀನಾಮೆ ಕೊಡಿಸಿ ಜೊತೆಗಿಟ್ಟುಕೊಂಡಿದ್ದೇನೆ. ಯಾರಾದರೂ ತಮ್ಮದೇ ಜಾತಿಯವನನ್ನು ಜೊತೆಯಲ್ಲಿ ಇಟ್ಟುಕೊಳ್ಳುತ್ತಾರಾ? ತ್ಯಾಗ ಮಾಡುತ್ತಾರಾ? ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆದರೆ ನನ್ನನ್ನು ಮುಗಿಸುತ್ತಾರೆ ಎಂಬ ಭಾವನೆ ಬಹುತೇಕ ರಾಜಕಾರಣಿಗಳಲ್ಲಿದೆ. ನನ್ನ ಜೊತೆ ಬೆಳೆಯಲಿ ಎಂದು ಯಾರೂ ಯೋಚಿಸುವುದಿಲ್ಲ ಸಂಸದರು ಹೇಳಿದರು.
ಆದರೆ, ನಾನು ಒಬ್ಬ ಸ್ಟೋರ್ ಕೀಪರ್(ಗೋವಿಂದ ಕಾರಜೋಳ) ನನ್ನು ಕರೆದುಕೊಂಡು ಬಂದು ಮುಧೋಳದಿಂದ ಕಣಕ್ಕಿಳಿಸಿದೆ. ಆಗ, ಅಲ್ಲಿನ ರೆಡ್ಡಿ ಸಮಾಜದ ಗೌಡರು ನೀನೇ ಮುಧೋಳದಿಂದ ನಿಲ್ಲುವಂತೆ ನನಗೆ ಹೊಡೆಯಲು ಬಂದಿದ್ದರು. ಆಗ ನಾನು ಕೈಮುಗಿಯುತ್ತೇನೆ. ಕಾರಜೋಳ ಅವರಿಗೆ ನಿಲ್ಲಿಸುತ್ತೇನೆ ಎಂದು ಹೇಳಿ ಬೆನ್ನತ್ತಿ ಟಿಕೆಟ್ ಕೊಡಿಸಿದ್ದೇನೆ. 1998ರಲ್ಲಿ ರಾಮಕೃಷ್ಣ ಹೆಗಡೆ ಅವರು ಪಾರ್ಲಿಮೆಂಟ್ ಗೆ ಹೋಗು ಎಂದು ಹೇಳಿದ ನಂತರ ನಾನು ಅಂದಿನಿಂದ ಈವರೆಗೆ ಬೆಂಗಳೂರಿಗೆ ಹೋಗಿಲ್ಲ. ಎಲ್ ಎಚ್ ನೋಡಿಲ್ಲ. ವಿಧಾನಸೌಧ ನೋಡಿಲ್ಲ. ಸಂಪರ್ಕ ಪೂರ್ಣ ಕಳೆದುಕೊಂಡು ಬಿಟ್ಟಿದ್ದೇನೆ. ಕಾರಜೋಳ ಸಾಹೇಬರು ನನ್ನ ಎತ್ತರಕ್ಕೆ ಬೆಳೆಯಲಿ ಎಂಬ ಕಾರಣಕ್ಕೆ ಹೀಗೆ ಮಾಡಿದ್ದೇನೆ. ಆದರೆ, ವಿನಾಕಾರಣ ಕಾರಜೋಳ ಮತ್ತು ನನ್ನ ಮಧ್ಯೆ ತಂದಿಡುವ ಕೆಲಸ ಮಾಡುವುದು ಬೇಡ ಎಂದು ಕಿವಿಮಾತು ಅವರು ಹೇಳಿದರು.
ಯಾರ ಮನಸ್ಸಿನಲ್ಲಿಯೂ ಕಾರಜೋಳ ಮತ್ತು ನಾನು ಬೇರೆ ಬೇರೆ ಎಂಬುದು ಬರಬಾರದು ಎಂಬುದು ನನ್ನ ವಿನಂತಿ. ಕಾರಜೋಳ ಬೆಳೆಯಲಿ ಎಂಬ ಕಾರಣಕ್ಕೆ ನಾನು ಕರ್ನಾಟಕದ ಕಡೆ ತಲೆಹಾಕಿಲ್ಲ ಎಂದು ಅವರು ಸ್ಪಷ್ಟಪಡಿಸದಿರು.
ದಲಿತ ಸಿಎಂ ಆಗಬೇಕು
ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎಂಬುದು ನನ್ನ ಒತ್ತಾಯವಿದೆ. ಯಾವುದೇ ಪಕ್ಷದಿಂದ ಆಗಲಿ. ದಲಿತರೊಬ್ಬರು ಸಿಎಂ ಆಗಲಿ. ಬೊಮ್ಮಾಯಿ ಬೇಡ ಎಂದು ನೀವು ಹೇಳಬಹುದು. ನಾನಲ್ಲ. ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ನನ್ನ ಜೀವನದಲ್ಲಿ ಇವಾವುದಕ್ಕೂ ನಾನು ಆಸೆ ಮಾಡಿಲ್ಲ. ನಾನು ಎತ್ತರಕ್ಕೆ ಹೋಗಬೇಕು ಎಂದು ನಾನು ಕನಸು ಕಾಣಲ್ಲ. ಪ್ರಧಾನಿಯಾಗಬೇಕು ಎಂದು ಕನಸು ಕಾಣುತ್ತೇನೆ. ಅದು ಸಾಧ್ಯನಾ ಎಂದು ಪ್ರಶ್ನಿಸಿದರು.
ಈ ರಾಜ್ಯದಲ್ಲಿ ಜನಸಂಖ್ಯೆಯಲ್ಲಿ ಕೇವಲ 2 ರಿಂದ 3 ಪ್ರತಿಷತ ಇರುವ ಸಮುದಾಯದವರು ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಶೇ. 23ರಷ್ಟು ಇರುವ ದಲಿತ ಸಮುದಾಯದವರು ಾಯಕೆ ಸಿಎಂ ಆಗಬಾರದು ಎಂದು ರಮೇಶ ಜಿಗಜಿಣಗಿ ಅವರು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.