Sutturu Seer: ವಿಜಯಪುರ ಜಿಲ್ಲೆಯ ಶರಣರು ಸಾಧಕರನ್ನ ಕೊಂಡಾಡಿದ ಸುತ್ತೂರು ಶ್ರೀಗಳು

ವಿಜಯಪುರ: ಅತ್ಯಂತ ಶ್ರೇಷ್ಠ(Great) ಗುಣಗಳನ್ನು ಏಕವ್ಯಕ್ತಿಯಲ್ಲಿ ಒಟ್ಟಿಗೆ ಕಾಣುವುದಾದರೆ ಅದು ವಿಜಯಪುರ(Vijayapura) ಜ್ಞಾನಯೋಗಾಶ್ರಮದ(Jnanayogashrama) ಪೂಜ್ಯ ಸಿದ್ದೇಶ್ವರ ಶ್ರೀಗಳಲ್ಲಿ(Shree Siddheshwar Swamiji) ಕಾಣುತ್ತೇವೆ ಎಂದು ಸುತ್ತೂರು ಶ್ರೀ ಕ್ಷೇತ್ರದ ಪೂಜ್ಯಶ್ರೀ ಡಾ.‌ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಗಳು(Sutturu Shree Deshikendra Swamiji) ಹೇಳಿದರು.

ವಿಜಯಪುರದಲ್ಲಿ ಸತ್ಸಂಗ ಪ್ರವಚನ ನೀಡಿದ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ವಿಜಯಪುರ ನಗರದಲ್ಲಿ ಡಾ. ಮಹಾಂತೇಶ ಬಿರಾದಾರ ನಿವಾಸದಲ್ಲಿ ನಡೆದ ಸತ್ಸಂಗದಲ್ಲಿ ಆಶೀರ್ವಚನ ನೀಡಿದ ಅವರು, ಆಧ್ಯಾತ್ಮಿಕ ಲೋಕದಲ್ಲಿ ಪೂಜ್ಯ ಸಿದ್ದೇಶ್ವರ ಶ್ರೀಗಳು ವಿಜಯಪುರದ ಹೆಸರನ್ನು ಜಗತ್ತಿನಲ್ಲಿ ಬೆಳಗುವಂತೆ ಮಾಡಿದ್ದಾರೆ. ಅವರು ಕೇವಲ ಜ್ಞಾನಕ್ಕಾಗಿ ಪ್ರಸಿದ್ಧಿ ಪಡೆದಿಲ್ಲ. ವೈರಾಗ್ಯದ ಬದುಕಿಗಾಗಿಯೂ ಅವರು ಮಾದರಿಯಾಗಿದ್ದಾರೆ. ‌ಅತ್ಯಂತ ಶ್ರೇಷ್ಠ ಗುಣಗಳನ್ನು ಏಕವ್ಯಕ್ತಿಯಲ್ಲಿ ಒಟ್ಟಿಗೆ ಕಾಣುವುದಾದರೆ ಅದು ಸಿದ್ದೇಶ್ವರ ಶ್ರೀಗಳಲ್ಲಿ ಮೆಳೈಸಿವೆ ಎಂದು ಹೇಳಿದರು.

ಗೋಳಗುಮ್ಮಟ ಹಾಗೂ ವಚನ ಗುಮ್ಮಟದಿಂದ ವಿಜಯಪುರದ ಹೆಸರು ಎಲ್ಲೆಡೆ ಖ್ಯಾತವಾಗಿದೆ. ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರು ತಾಡೊಲೆಗಳಲ್ಲಿದ್ದ ವಚನಗಳನ್ನು ಹುಡುಕಿ, ಸಂಗ್ರಹಿಸಿದ ಪ್ರಕಟಿಸಿದ ಪರಿಣಾಮ ಹರಿದು ಹಂಚಿ ಹೋಗಿದ್ದ 200ಕ್ಕೂ ಹೆಚ್ಚು ಶರಣರು ಮತ್ತು ಅವರ ವಚನಗಳು ಇಂದು ಜಗತ್ತಿನಾದ್ಯಂತ ಎಲ್ಲರಿಗೂ ಸಿಗುವಂತಾಗಿವೆ. ತನು,ಮನ ಮತ್ತು ಧನದಿಂದ ಅವರು ಮಾಡಿದ ಕಾರ್ಯದಿಂದಾಗಿ ಇಂದು ವಿಜಯಪುರ ಜಿಲ್ಲೆಯ ಹೆಸರು ಚಿರಸ್ಥಾಯಿಯಾಗುಂತೆ ಮಾಡಿದೆ ಎಂದು ಶ್ರೀಗಳು ಹೇಳಿದರು.

ಇದೇ ವೇಳೆ, ದೇಶದ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯಾಗಿ ದ್ವಿಪಕ್ಷೀಯ ಪದ್ಧತಿ ಜಾರಿಗೆ ಬರಬೇಕು. ಅಲ್ಲದೆ, ಚುಬಾವಣೆಯಲ್ಲಿ ಚಲಾವಣೆಮೆಯಾದ ಒಟ್ಟು ಮತಗಳಲ್ಲಿ ಶೇ. 50 ಕ್ಕಿಂತ ಹೆಚ್ಚು ಮತ ಪಡೆದವರನ್ನು ಮಾತ್ರ ವಿಜೇತ ಅಭ್ಯರ್ಥಿಯಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಲೋಣಿ ಬಿ. ಕೆ. ಗ್ರಾಮದಿಂದ ದೆಹಲಿಯವರೆಗೆ ಸುಮಾರು 1500 ಕಿ. ಮೀ.‌ ಪಾದಯಾತ್ರೆ ನಡೆಸಿದ ರಾಷ್ಟ್ರ ಚಿಂತಕ ಬಾಪುರಾಯ ಲೋಣಿ, ಕೊರೊನಾ ಸಂಕಷ್ಟದ ಸಮಯದಲ್ಲಿ ಅತೀ ಹೆಚ್ಚಿನ ಹಾಸಿಗೆಗಳನ್ನು ಮೀಸಲಿಟ್ಟು, ಅತ್ಯಂತ ಕಡಿಮೆ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ ಹಾಗೂ ಉಕ್ರೆನ್ ಯುದ್ಧದಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ವ್ಯವಸ್ಥೆ ಕಲ್ಪಿಸಿ ಮಾನವೀಯತೆ ಮೆರೆದ ವಿಜಯಪುರದ ಪ್ರತಿಷ್ಠಿತ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, 50 ವರ್ಷಗಳ ಹಿಂದೆಯೆ ವಿಜಯಪುರದಲ್ಲಿ ಪ್ರಥಮವಾಗಿ ರಕ್ತ, ಮಲ, ಮೂತ್ರ ತಪಾಸಣೆ ಪ್ರಯೋಗಾಲಯ ಆರಂಭಿಸಿದ ಡಾ. ಎಚ್. ವಿ. ಕರಿಗೌಡರ, ನೇತ್ರದಾನ ಜಾಗೃತಿಯೊಂದಿಗೆ ಉಚಿತ ಶಿಬಿರಗಳನ್ನು ನಡೆಸುತ್ತಿರುವ ಡಾ. ಪ್ರಭುಗೌಡ ಪಾಟೀಲ, ಬಡತನದಲ್ಲಿ ಬೆಳೆದು, ಚಿನ್ನದ ಪದಕದೊಂದಿಗೆ ಪಾಸಾಗಿ, ಶ್ರೇಷ್ಠ ಅರಣ್ಯ ಅಧಿಕಾರಿಯಾಗಿರುವ ಪಿ. ಕೆ. ಪ್ರಶಾಂತ ಅವರನ್ನು ಶ್ರೀಗಳು ಸನ್ಮಾನಿಸಿದರು. ಅಲ್ಲದೇ, ಅವರ ಸಾಧನೆಯ ನುಡಿಗಳನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾದಾನಿ ಡಾ. ಕಂಠೀರವ ಕುಲ್ಲೋಳ್ಳಿ, ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ 20 ವರ್ಷಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾ. ಎಂ. ಎಸ್.‌ಮದಭಾವಿ, ಸಿದ್ದಸಿರಿ ಸೌಹಾರ್ದ ಬ್ಯಾಂಕ್ ನಿರ್ದೇಶಕ ಸಾಯಿಬಾಬಾ ಸಿಂದಗೇರಿ, ಬಸವನ ಬಾಗೇವಾಡಿ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಲ್ಹಾದ ಪಾಟೀಲ ಇವರನ್ನು ಪೂಜ್ಯ ಶ್ರೀಗಳು ಗೌರವಿಸಿದರು.

ಪೂಜ್ಯರಾದ ಹರ್ಷಾನಂದ ಶ್ರೀಗಳು, ಆಲಮಟ್ಟಿಯ ರುದ್ರಮುನಿ ಶಿವಾಚಾರ್ಯರು, ಚುಂಚನಹಳ್ಳಿ ಶ್ರೀಗಳು, ಜಯರಾಜೇಂದ್ರರವರು, ನಂಜುಂಡಸ್ವಾಮಿ ವೇದಿಕೆಯಲ್ಲಿದ್ದರು.

ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷೆ ಸುಜಾತಾ ಸೋಮನಾಥ ಕಳ್ಳಿಮನಿ, ಸಂಗಮೇಶ ಬಬಲೇಶ್ವರ, ಡಾ. ಗಂಗಾಧರ ಸಂಬಣ್ಣಿ, ಡಾ. ಮಹಾಂತೇಶ ಜಾಲಗೇರಿ, ಜಗದೀಶ ಕೊಟ್ರಶೆಟ್ಟಿ, ಗುರುಶಾಂತ ಕಾಪಸೆ, ಚಂದ್ರಕಾಂತ ಡೊಣಗಿ, ಶಂಕರ ಸಿ

Leave a Reply

ಹೊಸ ಪೋಸ್ಟ್‌