ವಿಜಯಪುರ: ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ(Vijayapura Transferred) Deputy Commissioner) ಪಿ. ಸುನೀಲ ಕುಮಾರ(P Sunil Kumar) ತಮ್ಮ ಸೇವಾವಧಿಯಲ್ಲಿ(His Service) ಜನತೆಗೆ ಹತ್ತಿರವಾಗುವ(Close To Public) ಮೂಲಕ ಜಿಲ್ಲಾಡಳಿತದ ವರ್ಚಸ್ಸನ್ನು ಹೆಚ್ಚಿದ್ದಷ್ಟೇ ಅಲ್ಲ,(Increased District Administration Image) ಕೊರೊನಾ ನಿರ್ವಹಣೆ ಸೇರಿದಂತೆ ಎಲ್ಲ ಸಮಸ್ಯೆಗಳನ್ನು ಸುಲಲಿತವಾಗಿ ನಿರ್ವಹಿಸಿ ರಾಜ್ಯದಲ್ಲಿಯೇ ಹೆಸರು ಮಾಡಿದ್ದರು.
ಈಗ ವಿಜಯಪುರಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧಿಕಾರ ಸ್ವೀಕರಿಸಿದ್ದಾರೆ. ಆದರೂ ಇಬ್ಬರೂ ಅಧಿಕಾರಿಗಳು ಯಾವುದೇ ಹಂಗು ಬಿಂಗಿಲ್ಲದವರಾಗಿದ್ದಾರೆ. ಇದೆಲ್ಲದಕ್ಕೆ ಪೂರಕ ಎಂಬಂತೆ ವಿಜಯಪುರ ಜಿಲ್ಲೆಯ ಅಧಿಕಾರಿಗಳು ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ದಂಪತಿಯನ್ನು ಮುಸ್ಸಂಜೆ ನಡೆದ ಕಾರ್ಯಕ್ರಮದಲ್ಲಿ ಆತ್ಮೀಯವಾಗಿ ಬೀಳ್ಕೋಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಸಮಾರಂಭದಲ್ಲಿಯೂ ಅಷ್ಟೇ ಪಿ. ಸುನೀಲ ಕುಮಾರ ತಮ್ಮ ಯಶಸ್ಸಿಗೆ ಜಿಲ್ಲೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯೇ ಕಾರಣ. ಎಲ್ಲರೂ ಕುಟುಂಬದ ಸದಸ್ಯರಂತೆ ಕೆಲಸ ಮಾಡಿದ್ದು, ತಮ್ಮ ಯಶಸ್ಸಿಗೆ ಕಾರಣ ಎಂದು ಹೇಳಿದ್ದಾರೆ.
ವಿಜಯಪುರ ಜಿಲ್ಲಾಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪಿ. ಸುನೀಲ ಕುಮಾರ ಅವರನ್ನು ಆತ್ಮೀಯವಾಗಿ ಬೀಳ್ಕೊಡಲಾಯಿತು. ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ಇಲಾಖೆಗಳ ಅಧಿಕಾರಿಗಳು ಜನರಿಗಾಗಿ, ಜನರ ಕಷ್ಟ ಮತ್ತು ನೋವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು’ ಎಂದೇ ಬಣ್ಣಿಸಿದರು.
ಒಬ್ಬೊಬ್ಬರಂತೆ ಸಾಲು ಸಾಲಾಗಿ ವೇದಿಕೆಯ ಮೇಲೆ ಬಂದ ಅಧಿಕಾರಿಗಳು ಪಿ. ಸುನೀಲ್ ಕುಮಾರ ದಂಪತಿಗೆ ಶಾಲು ಹೊದಿಸಿ, ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದ್ದು ವಿಶೇಷವಾಗಿತ್ತು. ತಮ್ಮ ಸಹದ್ಯೋಗಿ ಹಿರಿ ಕಿರಿಯರ ಬಗ್ಗೆ ನಂಜಿಲ್ಲದ ಪ್ರೀತಿ ಹೊಂದಿರುವ ಅಧಿಕಾರಿಯೆಂದೇ ಹೆಸರಾಗಿದ್ದ ಪಿ. ಸುನೀಲ ಕುಮಾರ ಅವರು ಪ್ರತಿಯೊಬ್ಬ ಅಧಿಕಾರಿಯ ಪ್ರೀತಿಗೆ ಪಾತ್ರರಾಗಿದ್ದರು ಎಂಬುದಕ್ಕೆ ಬೀಳ್ಕೊಡುಗೆ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಹಿರಿ ಕಿರಿಯ ಅಧಿಕಾರಿಗಳೇ ಸಾಕ್ಷಿಯಾಗಿದ್ದರು.
ಪಿ. ಸುನೀಲ ಕುಮಾರ ಅವರ ಸಂಕಲ್ಪ ವಿಶಿಷ್ಟವಾಗಿತ್ತು. ಅವರ ಕಾರ್ಯ ನಿರ್ವಹಣೆಯ ಶಕ್ತಿ ಅದ್ಭುತವಾಗಿತ್ತು ಎಂಬುದಕ್ಕೆ ಅವರ ಆಡಳಿತಾವಧಿಯಲ್ಲಿ ಆಗಿರುವ ಕಾರ್ಯಗಳೇ ಸಾಕ್ಷಿಯಾಗಿವೆ ಎಂದು ಅಧಿಕಾರಿಗಳು ಇದೆ ವೇಳೆ ಮೆಚ್ಚುಗೆ ವ್ಯಕ್ತಪಡಿಸಿ, ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
ತಮ್ಮ ವಿಶಿಷ್ಟ ಕಾರ್ಯವೈಖರಿಯಿಂದಾಗಿ ಪಿ. ಸುನೀಲ ಕುಮಾರ ಅವರು ತಮ್ಮ ಸೇವಾವಧಿಯಲ್ಲಿ ಈಗಾಗಲೇ ಸರಕಾರದ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಹಿರಿಮೆ ಹೊಂದಿದ್ದಾರೆ. ಇನ್ನೂ ಉನ್ನತ ಸ್ಥಾನಕ್ಕೆ ಏರಲಿ ಎಂದು ಅಧಿಕಾರಿಗಳು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸುವ ವೇಳೆಯಲ್ಲಿ ಅಧಿಕಾರಿಗಳ ಪ್ರೀತಿಯಂತೆ ಪಿ. ಸುನೀಲ ಕುಮಾರ ದಂಪತಿಯು ಮುತ್ತಿನ ಹಾರವನ್ನು ಪರಸ್ಪರ ಬದಲಾಯಿಸಿಕೊಂಡು ಸಂತಸ ಹಂಚಿಕೊಂಡರು.
ತಮ್ಮ ಅವಧಿಯಲ್ಲಿ ಕೋವಿಡ್ ನ್ನು ಸಮರ್ಥವಾಗಿ ನಿರ್ವಹಿಸಿದರು. ಕೋವಿಡ್ ಲಸೀಕಾಕರಣವು ಪ್ರತಿಶತ ನೂರರಷ್ಟಾಗಲು ಹಗಲಿರುಳು ಶ್ರಮಿಸಿದರು. ಸ್ಮಾರಕಗಳ ರಕ್ಷಣೆಗೆ ದುಡಿದರು. ಕ್ಷಯ ನಿಯಂತ್ರಣ ಸೇರಿದಂತೆ ಸರಕಾರದ ಅನೇಕ ಕಾರ್ಯಕ್ರಮ, ಯೋಜನೆಗಳ ಅನುಷ್ಠಾನಕ್ಕೆ ಒತ್ತು ಕೊಟ್ಟರು. ವ್ಯಕ್ತಿಯೊಬ್ಬ ತೀರಿದಾಗ ಕೊನೆಯದಾಗಿ ಗೌರವಯುತ ಅಂತ್ಯಸಂಸ್ಕಾರ ಸಿಗಲೆಂದು ಪ್ರತಿ ಗ್ರಾಮದಲ್ಲೂ ಸ್ಮಶಾನ ಭೂಮಿ ಆಗಲೆಂದು ಶ್ರಮಿಸಿದರು ಎಂದು ಅಧಿಕಾರಿಗಳು, ಪಿ. ಸುನೀಲ್ ಕುಮಾರ ಅವರ ಆಡಳಿತಾವಧಿಯಲ್ಲಿ ಆಗಿರುವ ಸಾಲುಸಾಲು ಕಾರ್ಯಗಳನ್ನು ಸ್ಮರಿಸಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಮ್ಮ ಸೇವಾವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹಕರಿಸಿದ ಹಿಂದಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಮತ್ತು ಇತರ ಅಧಿಕಾರಿಗಳು ಕೈ ಜೋಡಿಸಿದ್ದು ತಾವು ಕೆಲಸ ಮಾಡಲು ನೆರವಾಯಿತು. ಇಲ್ಲಿ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ ಎಂದು ಪಿ. ಸುನೀಲ ಕುಮಾರ ತಿಳಿಸಿದರು.
ಈ ಸಮಾರಂಭದಲ್ಲಿ ನೂತನ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಎಸ್ಪಿ ಡಾ. ಎಚ್. ಡಿ. ಆನಂದಕುಮಾರ, ಜಿಲ್ಲಾ ಪಂಚಾಯಿತಿ ಸಿಇಓ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ರಾಮಚಂದ್ರ ಗುಣಾರೆ ಮತ್ತು ಇತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.