ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ತಾಲೂಕಿನ ಸಂಗಾಪುರ (ಎಸ್.ಎಚ್) ಗ್ರಾಮದಲ್ಲಿ(Sangapur SH Village) ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ(Shree Siddalingeshwar Kamarimath Jatra Mahotsava) ಹಾಗೂ ಶ್ರೀ ಸಿದ್ದಲಿಂಗೇಶ್ವರರ ನೂತನ ರಥೋತ್ಸವ(Shree Siddalingeshwar New Chariot), ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಪುಣ್ಯಾರಾಧನೆ, ಲಿಂ. ತಿಮ್ಮಜ್ಜನವರ 25ನೇ ಪುಣ್ಯಾರಾಧನೆ ಮತ್ತು ಯಾತ್ರಾ ನಿವಾಸದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ನಾನಾ ಧಾರ್ಮಿಕ ಕಾರ್ಯಕ್ರಮಗಳು(Relegious Programme) ಆರಂಭವಾಗಿದ್ದು ಮೇ 3 ರವರೆಗೆ ನಡೆಯಲಿವೆ.
ಈ ಮಧ್ಯೆ, ಈ ಮಹತ್ವದ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಕೂಡ ಆಗಮಿಸುತ್ತಿದ್ದು, ಜಾತ್ರಾ ಮಹೋತ್ಸವಕ್ಕೆ ಮೆರಗು ತಂದಿದೆ.
ಏ..30 ರಂದು ಬೆ. 7 ಗಂ. ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆಗೆ ಬುತ್ತಿ ಪೂಜೆ ನಡೆಯಲಿದ್ದು, ಮ.12 ಕ್ಕೆ ಶ್ರೀ ಸಿದ್ಧಲಿಂಗೇಶ್ವರರ ಕಳಸಾರೋಹಣ ನಡೆಯಲಿದೆ. ಸಂ.7 ಕ್ಕೆ ಪ್ರವಚನ ಆಯೋಜಸಲಾಗಿದ್ದು, ಸಂಗಾಪುರ ಎಸ್.ಎಚ್ ನ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮಿಗಳು, ಅಫಜಲಪುರ(ಇಂಚಗೇರಿ) ಶಿವಯೋಗಿಶ್ವರ ಮಠದ ಶ್ರೀ ಶಂಭುಲಿಂಗ ಶಿವಾಚಾರ್ಯ ಮಹಾಸ್ವಾಮಿಜಿ, ಕೌಲಗುಡ್ಡದ ಅವರೇಶ್ವರ ಮಹಾಸ್ವಾಮಿಜಿ, ಸಿಂಧಿಪುರ ಬೆಟ್ಟದ ಶ್ರೀ ದಯಾನಂದ ಶರಣರು, ಗೋಕಾಕ ಆಧ್ಯಾತ್ಮ ಜ್ಞಾನ ಕೇಂದ್ರದ ಶ್ರೀ ಸುವರ್ಣಾ ತಾಯಿಯವರು ಹೊಸಮಠ ಪಾಲ್ಗೊಳ್ಳಲಿದ್ದಾರೆ.
ಮೇ 1 ರಂದು ಬೆ. 6 ಕ್ಕೆ ಶ್ರೀ ಚಂದ್ರಶೇಖರ ಮಹಾಸ್ವಾಮಿಗಳ ಗದ್ದುಗೆ ರುದ್ರಾಭೀಷೇಕ ನಡೆಯಲಿದೆ. ಬೆ. 7 ಕ್ಕೆ ಶ್ರೀ ಸಿದ್ದಲಿಂಗೇಶ್ವರ ಗದ್ದುಗೆಗೆ ಸಹಸ್ರ ಭಿಲ್ವಾರ್ಚನೆ ನಡೆಯಲಿದೆ. ನಂತರ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆಯ ಮೂಲಕ ಶ್ರೀಮಠಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮವಿದೆ. ಅಲ್ಲದೇ, ಶ್ರೀ ಲಿ. ಚಂದ್ರಶೇಖರ ಮಹಾಸ್ವಾಮಿಗಳ ಮಂದಿರ ಶಂಕು ಸ್ಥಾಪನೆ ಪ್ರವಚನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಸಿದ್ದಲಿಂಗ ಸ್ವಾಮಿಜಿ, ಶ್ರೀ ಬಸವರಾಜೇಂದ್ರ ಮಹಾಸ್ವಾಮಿಜಿ, ಶ್ರೀ ಅಭಿನವ ನಾಗಲಿಂಗೇಶ್ವರ ಮಹಾಸ್ವಾಮಿಜಿ, ಶ್ರೀ ಸಿದ್ದಲಿಂಗ ದೇವರು, ಶ್ರೀ ಶಿವಾನಂದ ಮಹಾಸ್ವಾಮಿಜಿ, ಶ್ರೀ ಬಸಯ್ಯ ಸ್ವಾಮಿಗಳು, ಶ್ರೀ ರುದ್ರಸ್ವಾಮಿಗಳು ಪಾಲ್ಗೊಳ್ಳಲಿದ್ದಾರೆ.
ಸಂ. 7 ಕ್ಕೆ ನಡೆಯುವ ಪ್ರವಚನ ಕಾರ್ಯಕ್ರಮದಲ್ಲಿ ಡಾ.ವೃಷಭಲಿಂಗ ಮಹಾಸ್ವಾಮಿಗಳು, ಶ್ರೀ ರಾಜೇಂದ್ರ ಒಡೆಯ ಶಿವಾಚಾರ್ಯ ಮಹಾಸ್ವಾಮಿಗಳೂ, ಶ್ರೀ ಯಮುನಾನಂದ ಸ್ವಾಮಿಗಳು,ಶ್ರೀ ನಿತ್ಯಾನಂದ ಸ್ವಾಮಿಗಳು, ಶ್ರೀ ಶಿವಪುತ್ರ ಮಹಾಸ್ವಾಮಿಗಳು, ಶ್ರೀ ಕಮಲಾಕರ ಸ್ವಾಮಿಗಳು ಪಾಲ್ಗೋಳ್ಳಲಿದ್ದಾರೆ. ರಾ. 10 ಕ್ಕೆ ಶಿವಭಜನೆ ಕಾರ್ಯಕ್ರಮ ನಡೆಯಲಿದೆ.
ಏ. 2 ರಂದು ಸೋಮವಾರ ಬೆ. 7 ಕ್ಕೆ ಶ್ರೀ ಸಿದ್ಧಲಿಂಗೇಶ್ವರ ಗದ್ದುಗೆಗೆ ಕಾರಿಖ ಪೂಜೆ ನಡೆಯಲಿದೆ.
ಬೆ. 11 ಕ್ಕೆ ಯಾತ್ರಾ ನಿವಾಸದ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಸಭೆ ಪ್ರತಿಪಕ್ಷದ ನಾಯಕ ಶ್ರೀ ಎಸ್. ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ, ಆನಂದ ನ್ಯಾಮಗೌಡ, ವಿಧಾನಪರಿಷತ್ ಸದಸ್ಯರಾದ ಆರ್.ಬಿ.ತಿಮ್ಮಾಪುರ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ಜೆ.ಟಿ ಪಾಟೀಲ, ರಾಜು ಆಲಗೂರ, ಶರಣಪ್ಪ ಸುಣಗಾರ, ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಮುಖಂಡರಾದ ಬಿ.ಎಸ್.ಪಾಟೀಲ ಯಾಳಗಿ, ಅಶೋಕ ಮನಗೂಳಿ, ಹಮೀದ ಮುಶ್ರಿಫ್, ಸುಭಾಷ ಛಾಯಾಗೋಳ, ಆನಂದ ದೊಡಮನಿ ಮುಂತಾದವರು ಪಾಲ್ಗೊಳ್ಳಲಿದ್ದು, ಶ್ರೀ ಅಭಿನವ ಸಿದ್ದಲಿಂಗ ಸ್ವಾಮಿಜಿ ಸಾನಿಧ್ಯ ವಹಿಸಲಿದ್ದಾರೆ.
ಮೇ 3 ರಂದು ಬೆ. 6 ಕ್ಕೆ ಶ್ರೀ ಸಿದ್ದಲಿಂಗ ಗದ್ದುಗೆಗೆ ರುದ್ರಾಭಿಷೇಕ ನಡೆಯಲಿದೆ. ಮ.3 ಕ್ಕೆ ಶ್ರೀಗಳ ಅಡ್ಡ ಪಲ್ಲಕ್ಕಿ ಉತ್ಸವ ಹಾಗೂ ಸಂ.4 ಕ್ಕೆ ಶ್ರಿ ಸಿದ್ಧಲಿಂಗ ರಥೋತ್ಸವ ನಡೆಯಲಿದೆ ಎಂದು ಗ್ರಾಮದ ಮುಖಂಡ ರಮೇಶ ಬಡ್ರಿ ತಿಳಿಸಿದ್ದಾರೆ.