Harmony MB Patil: ಸರ್ವ ಜನಾಂಗದ ಶಾಂತಿಯ ತೋಟ ಕನ್ನಡ ನಾಡಿನಲ್ಲಿ ರಾಜಕೀಯ ಆಸೆಗಾಗಿ ಶಾಂತಿ ಕೆಡಿಸುವ ಕೆಲಸವಾಗುತ್ತಿದೆ- ಎಂ. ಬಿ. ಪಾಟೀಲ

ವಿಜಯಪುರ: ಸರ್ವಜನಾಂಗದ ಶಾಂತಿಯ(Peace Land) ತೋಟವಾಗಿರುವ ಕನ್ನಡ ನಾಡನ್ನು(Karnataka) ಕೆಲವು ದುಷ್ಟಶಕ್ತಿಗಳು(Miscreants) ರಾಜಕೀಯ ಆಸೆಗಾಗಿ(Political Milage) ಶಾಂತಿಯ ತೋಟವನ್ನು ಹಾಳು ಮಾಡುವ(Disturbing Harmony) ಕೆಲಸದಲ್ಲಿ ತೊಡಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ವಿಷಾಧ ವ್ಯಕ್ತಪಡಿಸಿದ್ದಾರೆ. 

ವಿಜಯಪುರ ನಗರದ ಕೆ. ಸಿ. ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಇಫ್ತಿಯಾರ ಕೂಟ ಹಾಗೂ ಸೌಹಾರ್ದತಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ವಿಜಯಪುರದಲ್ಲಿ ನಡೆದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೋಂಡ ಎಂ. ಬಿ. ಪಾಟೀಲ ಮತ್ತೀತರರು

ಎಲ್ಲ ಜನಾಂಗಗಳ ಶಾಂತಿಯ ನೆಲೆಬೀಡಾಗಿದ್ದ ಕನ್ನಡ ನಾಡನ್ನು ಕುವೆಂಪು ಅವರು ಶಾಂತಿಯ ತೋಟ ಎಂದು ಬಣ್ಣಿಸಿದ್ದಾರೆ.  ಆದರೆ ಕೆಲವು ಸಮಾಜ ಘಾತುಕ ವ್ಯಕ್ತಿಗಳು ಈ ಶಾಂತಿಯ ತೋಟದ ಸೌಂದರ್ಯವನ್ನು ಹಾಗೂ ಸೌಹಾರ್ದತೆಯನ್ನು ಹಾಳುಗೆಡುವುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು.

ವಿತ್ರ ರಂಜಾನ್ ಮಾಸ ಆತ್ಮಶುದ್ಧಿ, ಮನಶುದ್ಧಿ ಮಾಡಿಕೊಳ್ಳುವ ಪವಿತ್ರ ಮಾಸವಾಗಿದೆ,  ನಮ್ಮ ಧರ್ಮವನ್ನು ಪ್ರೀತಿಸೋಣ.  ಜೊತೆಗೆ ಉಳಿದ ಧರ್ಮವನ್ನೂ ಗೌರವಿಸೋಣ,  ಸೌಹಾರ್ದತೆ, ಸಹೋದರತೆಯಿಂದ ಜೀವಿಸೋಣ,  ನಮ್ಮ ಏಕತೆ ಛೀದ್ರ ಮಾಡುವ ಶಕ್ತಿಗಳಿಗೆ ತಕ್ಕ ಪಾಠ ಕಲಿಸೋಣ.  ಅಣ್ಣ ಬಸವಣ್ಣ ಜಯಂತಿ ಹಾಗೂ ರಂಜಾನ್ ಹಬ್ಬ ಒಂದೇ ದಿನ ಬಂದಿರುವುದು ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದು ಅವರು ಹೇಳಿದರು.

ಇಫ್ತಿಯಾರ್ ಕೂಟದ ಸಾನಿಧ್ಯ ವಹಿಸಿದ್ದ ಕರ್ನಾಟಕ ಅಹಲೆ ಸುನ್ನತ ಜಮಾತ್ ಅಧ್ಯಕ್ಷ ಹಜರತ್ ಸೈಯ್ಯದ್ ತನ್ವೀರ ಪೀರಾ ಹಾಶ್ಮೀ ಮಾತನಾಡಿ, ಇಸ್ಲಾಂ ಧರ್ಮ ಎಂದರೆ ಶಾಂತಿಯ ಇನ್ನೊಂದು ಪದ,  ಪ್ರವಾದಿ ಮೊಹ್ಮದ್ ಪೈಗಂಬರ್ ಅವರು ಮಾನವೀಯತೆ, ದಯೆ ಗುಣಗಳನ್ನು ಬೋಧಿಸಿದ್ದಾರೆ.  ನಾವೆಲ್ಲರೂ ಭಾರತೀಯರು.  ನಾವೆಲ್ಲರೂ ಸಹೋದರರು.  ದುಷ್ಟಶಕ್ತಿಗಳು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ.  ಈ ದ್ವೇಷದ ತಂತ್ರಕ್ಕೆ ಯಾರೂ ಬಲಿಯಾಗಬಾರದು.  ಎಲ್ಲರೂ ಸಹೋದರರಂತೆ ಜೀವಿಸಬೇಕು ಎಂದು ಕರೆ ನೀಡಿದರು.

ಇಫ್ತಿಯಾರ್ ಕೂಟ ಆಯೋಜಕ ಅಬ್ದುಲ್‍ ಹಮೀದ್ ಮುಶ್ರೀಫ್ ಮಾತನಾಡಿ, ರಂಜನಾನ್ ಹಬ್ಬ ಪರೋಪಕಾರ, ದಾನ ಮತ್ತು ಹಸಿವಿನ ಮಹತ್ವವನ್ನು ತಿಳಿಸುತ್ತದೆ.  ಉಪವಾಸ ಆಚರಿಸಿ, ದಾನ, ಧರ್ಮ ಮಾಡಿ ಪುಣ್ಯ ಸಂಪಾದಿಸೋಣ.  ಸಹೋದರತೆಯಿಂದ ಜೀವಿಸಿ ಈ ಭವ್ಯ ಭಾರತವನ್ನು ಇನ್ನಷ್ಟೂ ಬಲಿಷ್ಠಗೊಳಿಸೋಣ ಎಂದು ಹೇಳಿದರು.

ಈ ಕಾರ್ಯಕರ್ಮದಲ್ಲಿ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಶ್ರೀ ಶಂಭುಲಿಂಗ ಮಹಾಸ್ವಾಮೀಜಿ, ಶ್ರೀ ಧನಸಿಂಗ ಮಹಾರಾಜರು, ಫಾ. ಜೀವನ್ ಸಾನಿಧ್ಯ ವಹಿಸಿದ್ದರು.

ಮುಖಂಡರಾದ ಮೊಹ್ಮದ್‍ ರಫೀಕ್ ಟಪಾಲ್ ಎಂಜಿನಿಯರ್, ವೈಜನಾಥ ಕರ್ಪೂರಮಠ, ಭೀಮಶಿ ಕಲಾದಗಿ, ಅರುಣಸಿಂಗ್ ಪರದೇಶಿ, ಡಾ. ಗಂಗಾಧರ ಸಂಬಣ್ಣಿ, ಅಣ್ಣಾರಾಯ ಈಳಿಗೇರ, ಸುಭಾಸ ಛಾಯಾಗೋಳ, ಎಸ್. ಎಂ.  ಪಾಟೀಲ ಗಣಿಹಾರ, ರವಿ ಬಿರಾದಾರ, ಉಸ್ಮಾನ ಪಟೇಲ, ಶರಣಪ್ಪ ಯಕ್ಕುಂಡಿ, ಇರ್ಫಾನ್ ಶೇಖ್, ನ್ಯಾಯವಾದಿ ಇಂಡೀಕರ, ನಾಗರಾಜ ಲಂಬು, ಸಂತೋಷ ಶಹಾಪುರ, ಶ್ರೀನಾಥ ಪೂಜಾರಿ, ಚಾಂದಸಾಬ ಗಡಗಲಗಾವ, ಅಕ್ರಂ ಮಾಶ್ಯಾಳಕರ, ಶಹನವಾಜ್ ಮುಲ್ಲಾ, ರವಿಂದ್ರ ಜಾಧವ, ಯಲ್ಲಪ್ಪ ಪಾರಶೆಟ್ಟಿ, ಇದ್ರಸ್ ಬಕ್ಷಿ, ಜಮೀರ ಬಾಂಗಿ, ಶಫೀಕ್ ಬಗದಾದಿ, ಆಫ್ತಾಬ ಖಾದ್ರಿ, ಮೈನು ಬೀಳಗಿ, ಈರಪ್ಪ ಕುಂಬಾರ, ಅಲ್ತಾಫ ಅಸ್ಕಿ ಮುಂತಾದವರು ಉಪಸ್ಥಿತರಿದ್ದರು.

ವಿಜಯಪುರ ನಗರದ ಕೆ. ಸಿ. ಮಾರ್ಕೆಟ್‍ನ ಭಾರತ ರೆಡಿಮೇಡ್ ಅಸೋಸಿಯೇಷನ್ ಅಧ್ಯಕ್ಷ ಗೌಸ್‍ಪೀರಾಂ ಪೀರಜಾದ, ಉಪಾಧ್ಯಕ್ಷ ರಾಜು ಖಂಡಗಾಳೆ, ಕಾರ್ಯದರ್ಶಿ ಅಬ್ದುಲ್ ಹಮೀದ್ ಬಾಂಗಿ, ಅಲ್ತಾಫ್ ಇನಾಮದಾರ, ರಫೀಕ್ ಪೀರಜಾದೆ, ಇರ್ಷಾದ್ ಪೀರಜಾದೆ, ಫಾರೂಕ್ ಇಂಡಿ, ಜಮೀರ ಉಸ್ತಾದ್, ಅಬ್ಬಾಸ್ ಅಲಿ, ಇಸ್ಮಾಯಿಲ್ ಪೀರಜಾದೆ, ಮುದಸ್ಸರ್ ಮುಲ್ಲಾ, ರಫಿಕ್ ಬೀಳಗಿ ಈ ಇಫ್ತಿಯಾರ ಕೂಟದ ವ್ಯವಸ್ಥೆ ಮಾಡಿದ್ದರು.

Leave a Reply

ಹೊಸ ಪೋಸ್ಟ್‌