Congress Siddharamaiah: ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಎಲ್ಲ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಿದೆ- ಎಸ್. ಸಿದ್ಧರಾಮಯ್ಯ

ವಿಜಯಪುರ: ಮುಂದಿನ ಬಾರಿ(Next Time) ಕಾಂಗ್ರೆಸ್(Congress) ಸರಕಾರ(Government) ಅಧಿಕಾರಕ್ಕೆ(Power) ಬಂದರೆ ಐದು ವರ್ಷಗಳಲ್ಲಿ ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ.  ರಾಜ್ಯದಲ್ಲಿ ಬಾಕಿ ಉಳಿದಿರುವ ಎಲ್ಲ ನೀರಾವರಿ(Pending Irrigation Projects) ಯೋಜನೆಗಳನ್ನು ಪೂರ್ಣಗೊಳಿಸಲಿದೆ ಎಂದು ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ಹೇಳಿದರು. 

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠ ಜಾತ್ರಾ ಮಹೋತ್ಸವ ಮತ್ತು ಯಾತ್ರಾ ನಿವಾಸ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಕಾರ್ಯಕ್ರಮವನ್ನು ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಉದ್ಘಾಟಿಸಿದರು.

ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ತಪ್ಪುವುದಿಲ್ಲ.  ವಚನ ಭ್ರಷ್ಟರಾಗಲ್ಲ.  ನುಡಿದಂತೆ ನಡೆಯುತ್ತೇವೆ.  2013ರಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ.  ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಪ್ರತಿವರ್ಷ ರೂ. 10 ಸಾವಿರ ಕೋ. ರಂತೆ ಒಟ್ಟು ರೂ. 50 ಕೋ. ಖರ್ಚು ಮಾಡುವುದಾಗಿ ಹೇಳಿದ್ದೇವು.  ಅದರಂತೆ ನಾನು ಸಿಎಂ ಆಗಿದ್ದಾಗ ಈ ಭಾಗದವರೇ ಎಂ. ಬಿ. ಪಾಟೀಲ ಅವರನ್ನು ಜಲಸಂಪನ್ಮೂಲ ಸಚಿವರನ್ನಾಗಿ ಮಾಡಿದ್ದೇವು.  ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರಿಂದ ಈ ಭಾಗದಲ್ಲಿ ಪ್ರತಿ ಹಳ್ಳಿಗೂ ನೀರು ಬಂದಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

2018ರ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀರಾವರಿಗಾಗಿ ರೂ. 1.50 ಲಕ್ಷ ಕೋ. ಖರ್ಚು ಮಾಡುವುದಾಗಿ ಹೇಳಿತ್ತು.  ಆದರೆ, ಅಷ್ಟು ಹಣ ಖರ್ಚು ಮಾಡಿದೆಯಾ? ಎಂದು ಪ್ರಶ್ನಿಸಿದ ಅವರು, ಒಂದು ವೇಳೆ ಬಿಜೆಪಿ ಅಷ್ಟು ಅನುದಾನ ಬಳಸಿದ್ದರೆ ಈಗಾಗಲೇ ಮಹಾದಾಯಿ, ಯುಕೆಪಿ ಸೇರಿದಂತೆ ಎಲ್ಲ ನೀರಾವರಿ  ಯೋಜನೆಗಳು ಪೂರ್ಣಗೊಳ್ಳುತ್ತಿದ್ದವು.  ಪ್ರಧಾನಿ ನರೇಂದ್ರ ಮೋದಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಹೇಳಿದ್ದರು.  ಆದರೆ, ಅದರ ಬದಲು ಈಗ ರೈತರ ಸಾಲ ದುಪ್ಪಟ್ಟಾಗಿದೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.

ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಾವು ಯಾವುದೇ ಜಾತಿ, ಧರ್ಮಗಳ ಭೇದಭಾವವಿಲ್ಗದೇ ಜಾತ್ರೆ, ಹಬ್ಬ, ಹರಿದಿನಗಳನ್ನು ಅಚರಣೆ ಮಾಡುವ ಸಂಪ್ರದಾಯವಿದೆ.  ನಮ್ಮ ಸಂಪ್ರದಾಯದಂತೆ ಜಾತ್ರೆಯಲ್ಲಿ ಸಂತೋಷದಿಂದ ಊರವರೆಲ್ಲ ಸೇರಿ ಆಚರಿಸುತ್ತೇವೆ.  ಜೊತೆಗೆ ಅಕ್ಕಪಕ್ಕದ ಊರಿನವರು, ಸಮಾಜದವರು, ಧರ್ಮದವರು ಪಾಲ್ಗೊಳ್ಳುತ್ತಾರೆ.  ಜಾತ್ರೆ, ಉರುಸ್, ಕ್ರಿಸ್ಮಸ್ ಹಬ್ಬಗಳನ್ನು ಒಟ್ಟಿಗೆ ಆಚರಿಸುವುದರಿಂದ ಸಮಾಜದಲ್ಲಿ ಸಾಮರಸ್ಯ ಕಾಪಾಡಲು ಅನುಕೂಲವಾಗುತ್ತದೆ.  ಜಾತಿ, ಧರ್ಮ, ಭಾಷೆ ಆಧಾರದ ಮೇಲೆ ಜನರನ್ನು ವಿಂಗಡಿಸಬಾರದು. ಎಲ್ಲರೂ ಮನುಷ್ಯರು ಎಂದು ಅವರು ಹೇಳಿದರು.

ಧರ್ಮ ಮನುಷ್ಯನ ಕಲ್ಯಾಣಕ್ಕಾಗಿ ಇದೆ.  ಬದುಕು ಹಸನು ಮಾಡಲು, ಮನುಷ್ಯ ಇರುವುದು ಧರ್ಮಕ್ಕಾಗಿ ಅಲ್ಲ.  ಧರ್ಮ ಇರುವುದು ಮನುಷ್ಯನಿಗಾಗಿ.  ಧರ್ಮದಲ್ಲಿ ಎಲ್ಲರೂ ಸಮಾನರು.  ಕೇವಲ ಬಸವಣ್ಣನ ಫೋಟೋ ಇಟ್ಟುಕೊಂಡರೆ ಸಾಲದು.  ಬಸವಣ್ಣನ ವಿಚಾರ ಧಾರೆಗಳಿಗೆ ಅನುಗುಣವಾಗಿ ಬದುಕಬೇಕು ಎಂದು ಹೇಳಿದ ಎಸ್. ಸಿದ್ಧರಾಮಯ್ಯ ಅವರು, ಸಂಗಾಪುರ ಎಸ್. ಎಚ್. ಗ್ರಾಮದ ಮಠದ ಜಾತ್ಯತೀತತೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಶ್ರೀ ಎಂ. ಬಿ. ಪಾಟೀಲ, ಶಾಸಕರಾದ ಶ್ರೀ ಆನಂದ ನ್ಯಾಮಗೌಡ, ಎಂ ಎಲ್ ಸಿ ಶ್ರೀ ಪ್ರಕಾಶ ರಾಠೋಡ, ಶ್ರೀ ಸುನೀಲಗೌಡ ಪಾಟೀಲ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಮಾಜಿ ಶಾಸಕರಾದ ಶ್ರೀ ಸಿ. ಎಸ್. ನಾಡಗೌಡ, ಪ್ರೊ. ರಾಜು ಆಲಗೂರ, ಶ್ರೀ ಶರಣಪ್ಪ ಸುಣಗಾರ, ವಿಠ್ಠಲ ಕಟಕದೊಂಡ, ಮುಖಂಡರಾದ ಹಮೀದ ಮುಶ್ರಿಫ್, ಅಶೋಕ ಮನಗೂಳಿ, ಸುಭಾಷ ಛಾಯಾಗೋಳ, ಸೋಮನಾಥ ಬಾಗಲಕೋಟ, ಬಿ. ಎಸ್. ಪಾಟೀಲ ಯಾಳಗಿ, ವಿದ್ಯಾರಾಣಿ ತುಂಗಳ, ಸುಜಾತಾ ಕಳ್ಳಿಮನಿ, ಸಿದ್ದು ಗೌಡನವರ, ರಮೇಶ ಬಡ್ರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌