M B Patil: ಹಿಂದುಳಿದ ವಿಜಯಪುರ ಜಿಲ್ಲೆ ಬಂಗಾರದ ನಾಡು ಆಗಲು ಸಿದ್ಧರಾಮಯ್ಯ ಕಾರಣ- ಎಂ. ಬಿ. ಪಾಟೀಲ

ವಿಜಯಪುರ: ಹಿಂದುಳಿದ(Backward) ವಿಜಯಪುರ ಜಿಲ್ಲೆ(Vijayapura District) ಬಂಗಾರದ ನಾಡು(Land Of Gold) ಆಗಲು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ(Former Chief Minister S Siddharamaiah) ಅವರೇ ಕಾರಣ ಎಂದು ಜಪಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ(M B Patil) ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಂಗಾಪುರ ಎಸ್. ಎಚ್. ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಮತ್ತು ಯಾತ್ರಾ ನಿವಾಸ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಈ ಭಾಗದಲ್ಲಿ ನೀರಾವರಿ ಸೌಲಭ್ಯ ದೊರಕಿರುವುದರಿಂದ ಸಂಗಾಪುರ ಎಸ್. ಎಚ್. ಗ್ರಾಮಸ್ಥರು ಈ ವರ್ಷ ಸುಮಾರು 50 ಸಾವಿರ ಟನ್ ಕಬ್ಬು ಬೆಳೆದು ರೂ. 150 ಕೋ. ಆದಾಯ ಪಡೆದಿದ್ದಾರೆ.  ಇದಕ್ಕೆ ತಮ್ಮ ಪುಣ್ಯ, ಆಶೀರ್ವಾದ ಕಾರಣ.  ಇಲ್ಲಿ 3000 ದಿಂದ 4000 ಜನಸಂಖ್ಯೆ ಇದೆ.  ಆರ್ಥಿಕವಾಗಿ ಎಲ್ಲರೂ ಪ್ರಬಲರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರ ಗುಣಗಾನ ಮಾಡಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರನ್ನು ಶ್ರೀ ಅಭಿನವ ಸಿದ್ಲಲಿಂಗ ಸ್ವಾಮೀಜಿ ಆಶೀರ್ವದಿಸಿದರು

ತಮಗೆ ನೀರಾವರಿ ಸೌಲಭ್ಯ ಒದಗಿಸಿದ ಕಾರಣ ಆ ಖುಷಿಯಿಂದ ಇಲ್ಲಿಯ ಜನರು ತಮ್ಮನ್ನು ಗ್ರಾಮಕ್ಕೆ ಕರೆಯಿಸಿಕೊಂಡಿದ್ದಾರೆ.  ಈ ಪುಟ್ಟಹಳ್ಳಿಯ ಜನ ತಮಗೆ ಗುರುಗಳ ಆಶೀರ್ವಾದ ಮಾಡಿಸಿದ್ದಾರೆ.  ತಮ್ಮ ಉಪಕಾರ ಸ್ಮರಣೆ ಮಾಡಲು ಈ ಕಾರ್ಯಕ್ರಮ ಆಯೋಜಿಸಿದ್ದಾರೆ.  2013 ರಿಂದ 2018ರ ವರೆಗಿನ ತಮ್ಮ ನೇತೃತ್ತವದಲ್ಲಿದ್ದ ಒಳ್ಳೆಯ ಸರಕಾರ ಈಗ ಮತ್ತೆ ತಮ್ಮ ನೇತೃತ್ವದಲ್ಲಿ ಅಧಿಕಾರಕ್ಕೆ ಬರಬೇಕು ಎಂಬ ಆಸೆಯನ್ನು ನಾವೆಲ್ಲ ಹೊಂದಿದ್ದೇವೆ ಎಂದು ತಿಳಿಸಿದರು

ಸಿದ್ಧರಾಮಯ್ಯ ಅವರ ಕೊಡುಗೆಯನ್ನು ಸ್ಮರಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿ.  2013 ರಿಂದ 2018ರ ವರೆಗೆ ಅವರು ಸಿಎಂ ಆಗಿದ್ದಕ್ಕೆ ನಾನು ಜಲಸಂಪನ್ಮೂಲ ಸಚಿವನಾಗಿದ್ದೇನೆ.  ಅವರು ನಮ್ಮ ನಾಯಕರು.  ಅವರು ಕೊಟ್ಟ ಯೋಜನೆಯಿಂದ ಈಗ ನೀರು ಹರಿಯುತ್ತಿದೆ.  ನೆಪಮಾತ್ರ ನಾನು.  ಅದಕ್ಕೆ ಕಾರಣ ಸಿದ್ಧರಾಮಯ್ಯ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು.  ಇಡೀ ವಿಜಯಪುರ ಜಿಲ್ಲೆ ಹಿಂದುಳಿದ ನಾಡಿನಿಂದ ಬಂಗಾರದ ನಾಡಾಗಿದೆ.  ಇದಕ್ಕೆಲ್ಲ ಕಾರಣ ನಮ್ಮ ನಾಯಕರಾದ ಸಿದ್ಧರಾಮಯ್ಯನವರು.  ಒಂದಲ್ಲ, ಎರಡಲ್ಲ ಅನೇಕ ನೀರಾವರಿ ಯೋಜನೆ ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹೇಳಿದರು.

ಇದನ್ನು ಓದಿ:

Congress Siddharamaiah: ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಎಲ್ಲ ಬಾಕಿ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಿದೆ- ಎಸ್. ಸಿದ್ಧರಾಮಯ್ಯ

ಮಾಜಿ ಶಾಸಕ ಸಿ. ಎಸ್. ನಾಡಗೌಡ ಅವರು ಪೀರಾಪುರ-ಬೂದಿಹಾಳ ಸಿದ್ಧರಾಮಯ್ಯ ಸರಕಾರದ ಕೊಡುಗೆ ಎಂದು ಈಗಾಗಲೇ ಹೇಳಿದ್ದಾರೆ.  ಅಲ್ಲದೇ, ನಾಗರಬೆಟ್ಟ, ತುಬಚಿ- ಬಬಲೇಶ್ವರ, ಮುಳವಾಡ ಏತ ನೀರಾವರಿ ಆಗಿದ್ದು ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಎಂಬುದನ್ನು ಎಲ್ಲರೂ ನೆನಪಿಡಬೇಕು ಎಂದು ಶಾಸಕರು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ, ಶಾಸಕರಾದ ಆನಂದ ನ್ಯಾಮಗೌಡ, ಎಂ ಎಲ್ ಸಿ ಶ್ರೀ ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು, ಮಾಜಿ ಶಾಸಕರಾದ  ಸಿ. ಎಸ್. ನಾಡಗೌಡ, ಪ್ರೊ. ರಾಜು ಆಲಗೂರ, ಶರಣಪ್ಪ ಸುಣಗಾರ, ವಿಠ್ಠಲ ಕಟಕದೊಂಡ, ಮುಖಂಡರಾದ ಹಮೀದ ಮುಶ್ರಿಫ್, ಅಶೋಕ ಮನಗೂಳಿ, ಸುಭಾಷ ಛಾಯಾಗೋಳ, ಸೋಮನಾಥ ಬಾಗಲಕೋಟ, ಬಿ. ಎಸ್. ಪಾಟೀಲ ಯಾಳಗಿ, ವಿದ್ಯಾರಾಣಿ ತುಂಗಳ, ಸುಜಾತಾ ಕಳ್ಳಿಮನಿ, ಸಿದ್ದು ಗೌಡನವರ, ರಮೇಶ ಬಡ್ರಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌