MBP Kudalsangam: ಬಸವಣ್ಣನವರ ಐಕ್ಯಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದ ಎಂ. ಬಿ. ಪಾಟೀಲ- ಬಸವಾದಿ ಶರಣರ ವಚನಗಳು ಇಂದು ಹೆಚ್ಚು ಪ್ರಸ್ತುತವಾಗಿವೆ ಎಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ

ಬಾಗಲಕೋಟೆ: ವಿಶ್ವಗುರು(Vishwaguru) ಬಸವಣ್ಣನವರ ಜಯಂತಿ(Basaveshwar Jayatni) ಹಿನ್ನೆಲೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ(KPCC Campaign Committee Chairman) ಎಂ. ಬಿ. ಪಾಟೀಲ(M B Patil) ಬೆಳಿಗ್ಗೆ ಕೂಡಲ ಸಂಗಮದ(Kudal Sangam) ಬಸವಣ್ಣನವರು ಐಕ್ಯ ಮಂಟಪಕ್ಕೆ ತೆರಳಿ ದರ್ಶನ ಪಡೆದಿದ್ದಾರೆ. 

ಕೂಡಲ ಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪಕ್ಕೆ ಭೇಟಿ ನೀಡಿದ ಎಂ. ಬಿ. ಪಾಟೀಲ ಪೂಜೆ ಸಲ್ಲಿಸಿದರು

ಈ ಸಂದರ್ಭದಲ್ಲಿ ಐಕ್ಯ ಮಂಟಪದಲ್ಲಿ ಕೆಲಕಾಲ ಧ್ಯಾನ ನಡೆಸಿದರು.  ಈ ಸಮಯದಲ್ಲಿ ಉಪಸ್ಥಿತರಿದ್ದ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಚನಗಳನ್ನು ಪಠಿಸಿದರು. ಅಲ್ಲದೇ, ಎಂ. ಬಿ. ಪಾಟೀಲ ಅವರಿಗೆ ಆಶ್ರೀರ್ವಾದ ಮಾಡಿದರು.

 

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿಜ ಎಂ. ಬಿ. ಪಾಟೀಲ ಅವರು, ಇಂದು ಜಗತ್ತಿನಾದ್ಯಂತ ಮತ್ತು ನಮ್ಮ ನಾಡಿನಲ್ಲಿ ಅಣ್ಣ ಬಸವಣ್ಣನವರ ಜಯಂತಿ ಆಚರಿಸಲಾಗುತ್ತಿದೆ.  ಈ ಹಿನ್ನೆಲೆಯಲ್ಲಿ ನಾನೂ ಕೂಡ ಕೂಡಲ ಸಂಗಮಕ್ಕೆ ಬಂದು ಬಸವಣ್ಣನವರ ಐಕ್ಯ ಮಂಟಪದಲ್ಲಿ ನನ್ನ ನಮನಗಳನ್ನು ಸಲ್ಲಿಸಿದ್ದೇನೆ.  ಬಸವ ಜಯಮೃತ್ಯುಂಜಯ ಸ್ವಾಮೀಜಿಗಳೂ ಕೂಡ ಉಪಸ್ಥಿತರಿದ್ದು, ವಚನಗಳನ್ನು ಪಠಣ ಮಾಡಿದ್ದೇವೆ ಎಂದು ಹೇಳಿದರು.

 

 

12ನೇ ಶತಮಾನದಲ್ಲಿ ಬಸವಾದಿ ಶರಣರು ಮಾನವ ಕುಲಕ್ಕೆ ತಮ್ಮ ಸೈದ್ದಾಂತಿಕ ನೆಲೆಯಲ್ಲಿ ವಚನಗಳ ನೀಡಿದ್ದಾರೆ.  ಅಲ್ಲದೇ, ಜಗತ್ತಿನ ಮೊದಲ ಸಂಸತನ್ನು ಅನುಭವ ಮಂಟಪದ ಮೂಲಕ ನಮಗೆ ನೀಡುವ ಮೂಲಕ ಸಮಾನತೆಯನ್ನು ಸಾರಿದ್ದಾರೆ.  ಸುಂದರ ಸಮಾಜ ನಿರ್ಮಾಣವಾಗಬೇಕು.  ಎಲ್ಲರೂ ಸಮಾನರು ಎಂಬ ಸಂದೇಶ ಕೊಟ್ಟಿದ್ದಾರೆ.  ಸಮಾಜದಲ್ಲಿನ ತಾರತಮ್ಯಗಳನ್ನು ಹೋಗಲಾಡಿಸಿ ಸುಂದರ ಜೀವನ ಸಾಗಿಸಲು ಅಗತ್ಯವಾಗಿರುವ ಸಂದೇಶಗಳನ್ನು ಸರಳ ಮತ್ತು ಆಡುಭಾಷೆಯಲ್ಲಿ ರಚಿಸುವ ಮೂಲಕ ನಮ್ಮ ನಾಡು, ದೇಶ ಮತ್ತು ಜಗತ್ತಿಗೆ ದೊಡ್ಡ ಸಂದೇಶವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ವಚನಗಳು ಮತ್ತು ಬಸವ ಧರ್ಮದ ಕುರಿತು ಜಾಗತಿಕ ಮಟ್ಟದಲ್ಲಿ ಪ್ರಚಾರವಾಗಬೇಕು.  ಇದು ಕೇವಲ ನಮ್ಮ ಸ್ವತ್ತಲ್ಲ.  ಜಗತ್ತಿನ ಸ್ವತ್ತು.  ಜಗತ್ತಿನ ಎಲ್ಲ ಜನರು ಇದನ್ನು ತಿಳಿದುಕೊಂಡು ತಮ್ಮ ಬದುಕನ್ನು ಸುಂದರಗೊಳ್ಳಬೇಕು.  ಇಂದು ಬಸವಾದಿ ಶರಣರು ಹೆಚ್ಚು ಪ್ರಸ್ತುತರಾಗಿದ್ದಾರೆ ಎಂದು ಎಂ. ಬಿ. ಪಾಟೀಲ ತಿಳಿಸಿದರು.

ಈ ಸಂದರ್ಭದಲ್ಲಿ ಡಾ. ಮಹಾಂತೇಶ ಬಿರಾದಾರ ಸೇರಿದಂತೆ ನಾನಾ  ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌