Arakeri LIS: ಬಸವ ಜಯಂತಿ ದಿನ ಅರಕೇರಿ ಏತ ನೀರಾವರಿ ಯೋಜನೆಗೆ ಪ್ರಾಯೋಗಿಕವಾಗಿ ನೀರು ಬಿಡುಗಡೆ- ಗಂಗೆಯ ಕಂಡು ಸಂತಸಗೊಂಡ ರೈತರು

ವಿಜಯಪುರ: ವಿಜಯಪುರ ಜಿಲ್ಲೆಯ(Vijayapura District) ಬಬಲೇಶ್ವರ ವಿಧಾನಸಭೆ ಮತಕ್ಷೇತ್ರದ(Babaleshwar Constituency) ಅರಕೇರಿ, ಸಿದ್ದಾಪುರ, ಇಟ್ಟಂಗಿಹಾಳ, ಯತ್ನಾಳ, ಜಾಲಗೇರಿ ಗ್ರಾಮದ 15 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಅರಕೇರಿ ಏತ ನೀರಾವರಿ ಯೋಜನೆಗೆ(Arakeri Lift Irrigation Scheme) ಬಸವ ಜಯಂತಿಯ(Basava Jayanti) ದಿನ ಪ್ರಾಯೋಗಿಕವಾಗಿ ನೀರು(Practical Water Release) ಹರಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಮತ್ತು ಸ್ಥಳೀಯ ಶಾಸಕ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಅರಕೇರಿ ಏತ ನೀರಾವರಿ ಯೋಜನೆಯಡಿ ಬಸವ ಜಯಂತಿ ದಿನ ಪ್ರಾಯೋಗಿಕವಾಗಿ ಹರಿದು ಬಂದ ನೀರು

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಬಬಲೇಶ್ವರ ವಿಧಾನಸಭೆ ಮತಕ್ಷೇತ್ರವು ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆ, ಮುಳವಾಡ ಏತ ನೀರಾವರಿ ಯೋಜನೆಯಡಿ ಮಲಘಾಣ ಪಶ್ಚಿಮ ಕಾಲುವೆ, ಬಬಲೇಶ್ವರ ಶಾಖಾ ಕಾಲುವೆ ಹಾಗೂ ತಿಡುಗುಂದಿ ವಿಸ್ತರಣಾ ಕಾಲುವೆಗಳಿಂದ ಹೆಚ್ಚಿನ ಪ್ರದೇಶ ನೀರಾವರಿಗೆ ಒಳಪಟ್ಟಿದೆ.  ಆದರೂ, ಮುಮ್ಮಟಿಗುಡ್ಡ ಹಾಗೂ ಸುತ್ತಲಿನ ಎತ್ತರದ ಪ್ರದೇಶ ನೀರಾವರಿಯಿಂದ ವಂಚಿತವಾಗಿತ್ತು.  ಇದಕ್ಕಾಗಿ ತಾವು 2018ರಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ಅರಕೇರಿ ಲಿಫ್ಟ್ ಯೋಜನೆ ರೂಪಿಸಲಾಗಿತ್ತು.  ಈ ಯೋಜನೆಗೆ ತಿಡಗುಂದಿ ವಿಸ್ತರಣಾ ಕಾಲುವೆಯಿಂದ ನೀರೆತ್ತಿ, ಅಮೋಘ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಡೆಲೆವೆರಿ ಛೇಂಬರ್ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿತ್ತು.  ಅಲ್ಲಿಂದ ಪೈಪ್‍ಲೈನ್ ಮೂಲಕ ನೀರಾವರಿ ವಂಚಿತ ಅರಕೇರಿ, ಸಿದ್ದಾಪುರ, ಇಟ್ಟಂಗಿಹಾಳ, ಯತ್ನಾಳ, ಜಾಲಗೇರಿ ಗ್ರಾಮದ 15 ಸಾವಿರ ಎಕರೆ ಪ್ರದೇಶಕ್ಕೆ ಮಧ್ಯಪ್ರದೇಶದ ಮಾದರಿಯಲ್ಲಿ ಮುಚ್ಚಿದ ಕೊಳೆವೆ ಮಾರ್ಗದ ಮೂಲಕ ರೈತರ ಜಮೀನಿಗೆ ನೀರೋದಗಿಸುವ ಯೋಜನೆ ಆರಂಭಿಸಲಾಗಿತ್ತು.

 

ಬಸವ ಜಯಂತಿಯ ಶುಭ ಸಂದರ್ಭದಂದು ಬಿರು ಬೇಸಿಗೆಯ ಈ ಸಮಯದಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಿರುವುದು ಗ್ರಾಮಸ್ಥರಲ್ಲಿ ಸಂಭ್ರಮದ ವಾತಾವರಣ ಉಂಟು ಮಾಡಿದೆ ಎಂದು ಎಂ. ಬಿ. ಪಾಟೀಲ ಹೇಳಿದ್ದಾರೆ.

Leave a Reply

ಹೊಸ ಪೋಸ್ಟ್‌