ವಿಜಯಪುರ: ಪ್ರಧಾನಿ(Prime Minister) ವಿದೇಶ ಪ್ರವಾಸದಿಂದ(Foreign Tour) ವಾಪಸ್ಸಾದ(Return) ಮೇಲೆ ಕರ್ನಾಟಕ ಮತ್ತು ಪಕ್ಷದ(Karnataka And Party) ಹಿತೃದೃಷ್ಠಿಯಿಂದ ಒಂದು ಒಳ್ಳೆಯ ನಿರ್ಣಯ(Good Decision) ಹೊರಬರಲಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌ ಪಾಟೀಲ ಯತ್ನಾಳ ಸಿಎಂ ಬದಲಾವಣೆ ಅಥವಾ ಸಚಿವ ಸಂಪುಟ ಪುನಾರಚನೆಯ ಬಗ್ಗೆ ಸುಳಿವು ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರದ ಗೃಹ ಇಲಾಖೆಯ ಕಾರ್ಯಕ್ರಮಗಳ ಜೊತೆಗೆ ಪಕ್ಷದ ಮುಂದಿನ ಚುನಾವಣೆ ತಯಾರಿಗಾಗಿ ಕೇಂದ್ರ ಗೃಹ ಸಚಿವ ಅಮಿತ ಶಾ ಮತ್ತು ಬಾರತೀಯ ಜನತಾ ಪಕ್ಷದ ರಾಜ್ಯ ಉಸ್ತುವಾರಿ ಅರುಣಸಿಂಗ್ ಕರ್ನಾಟಕಕ್ಕೆ ಬಂದಿದ್ದಾರೆ. ಮುಖ್ಮಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಸಭೆ ನಡೆಸುತ್ತಿದ್ದಾರೆ. ಈ ಮೂಲಕ ಮುಂದಿನ ವಿಧಾನ ಸಭೆ ಚುನಾವಣೆ ತಯಾರಿ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಿಎಂ ಬದಲಾವಣೆ, ಸಚಿವ ಸಂಪುಟ ಅಮೂಲಾಗ್ರ ಬದಲಾವಣೆ ವಿಚಾರ
ನಮ್ಮ ಪಕ್ಷದ ಹೈಕಮಾಂಡ್ ಪಕ್ಷವನ್ನು ಕರ್ನಾಟಕದಲ್ಲಿ ಯಾವ ರೀತಿ ಪ್ರಬಲಗೊಳಿಸಬೇಕು. ಸರಕಾರ ಇನ್ನಷ್ಟು ಕ್ರಿಯಾಶೀಲರಾಗಿ ಅಭಿವೃದ್ಧಿ ಕಾಮಗಾರಿಯ ವೇಗ ಹೆಚ್ಚಿಸಬೇಕು. ಈಗ ಬಂದಿರುವ ಆರೋಪಗಳಿಗೆ ಸೂಕ್ತವಾದ ಪರಿಹಾರ ಕೊಡುವ ಉದ್ದೇಶದಿಂದ ರಾಷ್ಟ್ರೀಯ ನಾಯಕರು ಚಿಂತನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ ಮುಂದಿನ ಚುನಾವಣೆ ತಯಾರಿ ನಡೆಸುತ್ತಿದ್ದಾರೆ. ಮೇ 10ರೊಳಗೆ ಬದಲಾವಣೆಯಾಗಬಹುದು ಅಥವಾ ಪ್ರಧಾನಿ ನರೇಂದ್ರ ಮೋದಿ ಇನ್ನೆರಡು ದಿನಗಳಲ್ಲಿ ದಿನಗಳಲ್ಲಿ ವಿದೇಶ ಪ್ರವಾಸದಿಂದ ವಾಪಸ್ಸಾಗಲಿದ್ದಾರೆ. ಆಗ ಕರ್ನಾಟಕದಲ್ಲಿ ಏನೆಲ್ಲ ಬದಲಾವಣೆ ಮಾಡಬೇಕು ಎಂಬುದನ್ನು ನಿರ್ಧರಿಸುತ್ತಾರೆ. ಈಗಾಗಲೇ ಎಲ್ಲ ವರದಿಗಳನ್ನು ಸಂಗ್ರಹಿಸಿದ್ದಾರೆ. ದೆಹಲಿಯಲ್ಲಿ ಒಂದು ಹೈಪವರ್ ಮೀಟಿಂಗ್ ಆಗಿದೆ. ಅದರಲ್ಲಿ ಏನು ಸಂದೇಶ ನೀಡಲಾಗಿದೆ ಎಂಬುದ ಗೊತ್ತಿಲ್ಲ. ಆದರೆ, ಕರ್ನಾಟಕ ಮತ್ತು ಪಕ್ಷದ ಹಿತದೃಷ್ಠಿಯಿಂದ ನಮ್ಮ ಪ್ರಧಾನಿಗಳಿಗೆ ಎಲ್ಲ ಇಂಚಿಂಚೂ ಮಾಹಿತಿ ಇದೆ. ಆ ಆಧಾರದ ಮೇಲೆ ಒಳ್ಳೆಯ ನಿರ್ಣಯ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.
ಸಿಎಂ ಬದಲಾವಣೆ ಕುರಿತು ಡಿಕೆಶಿ, ಸಿದ್ಧರಾಮಯ್ಯ ಹೇಳಿಕೆ ವಿಚಾರ
ರಾಜ್ಯದಲ್ಲಿ ಸಿಎಂ ಬದಲಾಗುವ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಮತ್ತು ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧರಾಮಯ್ಯ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅವರಿಬ್ಬರಿಗೂ ಯಾಕೋ ಒಂದು ರೀತಿ ಬಿಜೆಪಿಯ ಭಯವಿದೆ. ಬೇರೆ ಸಿಎಂ ಬಂದು ಬಿಟ್ಟರೆ ದೆಹಲಿಗೆ ಹೋಗಬೇಕಾಗುತ್ತದೆ ಎಂಬ ಭಯವಿದೆ. ಒಬ್ಬರಿಗೆ(ಡಿಕೆಶಿ) ಜೈಲಿಗೆ ಹೋಗುವ ಭಯವಿದೆ. ಇನ್ನೋಬ್ಬರಿಗೆ(ಎಸ್. ಸಿದ್ಧರಾಮಯ್ಯ) ಮುಂದೆ ಮುಖ್ಯಮಂತ್ರಿ ಆಗುವುದಿಲ್ಲ ಎಂಬ ಭಯವಿದೆ. ಅವರಿಬ್ಬರಲ್ಲಿ ಜೈಲಿಗೆ ಹೋಗುವವರು ಯಾರು? ಮುಖ್ಯಮಂತ್ರಿ ಸ್ಥಾನದಿಂದ ನಿರಾಸೆಯಾಗುವವರು ಯಾರು ಎಂಬುದನ್ನು ನೀವು ವಿಶ್ಲೇಷಣೆ ಮಾಡಿ ಎಂದು ಯತ್ನಾಳ ಮಾರ್ಮಿಕವಾಗಿ ಹೇಳಿದರು.
ಶಾಸಕರು, ಸಂಸದರ ಔತಣಕೂಟ ವಿಚಾರ
ಬೆಂಗಳೂರಿನಲ್ಲಿ ಬಿಜೆಪಿ ಶಾಸಕರು ಮತ್ತು ಸಂಸದರ ಔತಣ ಕೂಟಕ್ಕೆ ಎಲ್ಲ ಶಾಸಕರು ಮತ್ತು ಸಂಸದರನ್ನು ಕರೆದಿದ್ದಾರೆ. ವಿಜಯಪುರದಲ್ಲಿ ಸಾಕಷ್ಟು ಕಾರ್ಯಕ್ರಮಗಳಿವೆ. ಬಸವ ಜಯಂತಿ ಪವಿತ್ರ ದಿನ ಇದೆ. ಅದಕ್ಕೆ ನಗೆ ಹೋಗಲು ಆಗಿಲ್ಲ. ಮುಖ್ಯಮಂತ್ರಿಗಳ ಕಚೇರಿಯಿಂದ ಎರಡು ಬಾರಿ ಕರೆ ಮಾಡಿ ಬರಲು ಹೇಳಿದ್ದರು. ಆದರೆ, ಅನಿವಾರ್ಯ ಕಾರಣಗಳಿಂದ ನಾನು ಹೋಗುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರ
ಪಿಎಸ್ಐ ನೇಮಕತಾರಿ ಅಕ್ರಮದ ಕುರಿತು ತನಿಖೆಯಾಗಬೇಕು. ಯಾರೇ ಇದ್ದರೂ ಮುಲಾಜಿಲ್ಲದೆ ಕ್ರಮವಾಗಬೇಕು. ಬಿಜೆಪಿ ಸರಕಾರವೇ ಮೊದಲು ಪಾರದರ್ಶಕವಾಗಿ ತನಿಖೆ ನಡೆಸಲು ಸಿಐಡಿಗೆ ನೀಡಿದೆ. ಈಗಾಗಲೇ ದಿವ್ಯಾ ಹಾವರಗಿ, ಶಿಕ್ಷಕ ಕಾಶೀನಾಥ, ನೀರಾವರಿ ಇಲಾಖೆ ಮಂಜುನಾಥ ಅವರನ್ನು ಬಂಧಿಸಿದ್ದಾರೆ. ನಾಳೆ ಅಶ್ವತ್ಥನಾರಾಯಣ ಅವರ ಸಹೋದರ ಅವರ ಸಹೋದರನ ಪಾತ್ರದ ಬಗ್ಗೆಯೂ ತನಿಖೆ ಮಾಡುತ್ತಾರೆ. ಅದರಲ್ಲಿ ತಪ್ಪಿದ್ದರೆ ಬಂಧಿಸುತ್ತಾರೆ. ಯಾರನ್ನೂ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಒಂದು ವೇಳೆ ಅಶ್ವತ್ಥ ನಾರಾಯಣ ಸಹೋದರ ಇದರಲ್ಲಿ ಭಾಗಿಯಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ. ಈ ರೀತಿ ಅಕ್ರಮ ಈ ಮುಂಚೆಯಿಂದಲೂ ನಡೆದುಕೊಂಡು ಬಂದಿದೆ. ಈ ಬಾರಿ ನಮ್ಮ ಸರಕಾರ ಅಧಿಕಾರದಲ್ಲಿದ್ದ ಕಾರಣ ಪ್ರಕರಣ ಹೊರಗೆ ಬಂದಿದೆ ಎಂದು ಅವರು ತಿಳಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ
ಮುಂಬರುವ ವಿಧಾನ ಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸಲು ಪಕ್ಷ ಈಗಾಗಲೇ ಸೂಚನೆ ನೀಡಿದೆ. ಎಲ್ಲರೂ ಕೂಡಿಯೇ 150 ಸೀಟು ಗೆಲ್ಲಿಸಲು ಹೇಳಿದ್ದಾರೆ. ಯಡಿಯೂರಪ್ಪರಾಗಲಿ, ನಳೀನ ಕುಮಾರ ಕಟೀಲ ಆಗಲಿ, ಜಗದೀಶ ಶೆಟ್ಟರ್ ಆಗಲಿ, ಬಸನಗೌಡ ಪಾಟೀಲ ಯತ್ನಾಳ ಆಗಲಿ, ಯಾರೂ ನಾನೇ ತರ್ತೇನೆ, ನೀನೇ ತರ್ತಿನಿ ಅಂತಿಲ್ಲ. ಎಲ್ಲರೂ ಕೂಡಿಯೇ 150 ಸ್ಥಾನ ತರಲು ಹೇಳಿದ್ದಾರೆ. ನನ್ನಿಂದ, ನನ್ನಿಂದಲೇ ಸೂರ್ಯೋದಯವಾಗುತ್ತದೆ ಎಂಬುದನ್ನು ತಲೆಯಿಂದ ತೆಗೆಯಬೇಕು. ಬಿಜೆಪಿಗೆ ಈಗ ಹಂಗಿಲ್ಲ. ಈಗ ಸಾಮೂಹಿಕ ನಾಯಕತ್ವದಲ್ಲಿ ಹೋಗುತ್ತದೆ. ಆ ಸಾಮೂಹಿಕ ನಾಯಕತ್ವದಲ್ಲಿ ಯಡಿಯೂರಪ್ಪನವರೂ ಇರ್ತಾರೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.