ವಿಜಯಪುರ: ಬಿಜೆಪಿ(BJP) ಹೊಂದಿರುವ(Stand) ಜನಪರ(Public Oriented) ಮತ್ತು ದೇಶಾಭಿಮಾನದ(Patriotism) ನಿಲುವಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಿಜೆಪಿಯತ್ತ ಒಲವು ಬೆಳೆಸಿಕೊಳ್ಳುವಂತೆ(Attracting People) ಮಾಡಿದೆ ಎಂದು ಬಿಜೆಪಿ ಬೆಳಗಾವಿ ವಿಭಾಗದ ಪ್ರಭಾರಿ ಚಂದ್ರಶೇಖರ ಕವಟಗಿ ಹೇಳಿದ್ದಾರೆ.
ವಿಜಯಪುರ ನಗರದ ಶುಭಶ್ರೀ ಸಭಾಂಗಣದಲ್ಲಿ ನಡೆದ ಬಿಜೆಪಿ ಪ್ರಕೋಷ್ಠಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಈ ಮುಂಚೆ ಹೊಂದಿದ್ದ ಮತ ಗಕೆ ಪ್ರಮಾಣ ಶೇ.2 ರಿಂದ ಈಗ ಶೇ.38 ಕ್ಕೆ ಏರಿಕೆಯಾಗಿದೆ. ಇದು ಗಮನಾರ್ಹವಾಗಿದ್ದು, ಶೇ.51 ರಷ್ಟು ಮತಗಳಿಕೆಗೆ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ಆಸಕ್ತಿಯಿಂದ ಕೆಲಸ ಮಾಡುವ ದೊಡ್ಡ ಜನಸಮೂಹವೇ ಇದೆ. ಅನೇಕ ವೃತ್ತಿಪರರು ಈಗ ಬಿಜೆಪಿ ಜೊತೆ ಸಕ್ರೀಯವಾಗಿ ದುಡಿಯುವ ಮನೋಭಾವ ಹೊಂದಿದ್ದಾರೆ. ಹೀಗಾಗಿ ವಿಶೇಷ ಸಂದರ್ಭದಲ್ಲಿ ಅವರ ಸೇವೆ ಬಳಸಿಕೊಳ್ಳಲು ಪ್ರಕೋಷ್ಠಗಳ ರಚನೆ ಮಾಡಲಾಗಿದೆ. ವೈದ್ಯಕೀಯ, ಪ್ರಶಿಕ್ಷಣ, ಮಾಧ್ಯಮ ಹೀಗೆ ಅನೇಕ ಪ್ರಕೋಷ್ಠಗಳ ರಚನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಮಾತನಾಡಿ, ನಾನಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗಣ್ಯರನ್ನು, ಪ್ರಮುಖರನ್ನು ಗುರುತಿಸಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಸುವುದು ಈ ಪ್ರಕೋಷ್ಠಗಳ ಉದ್ದೇಶವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಜೋಗುರ, ಬಸವರಾಜ ಬಿರಾದಾರ, ಗುರಲಿಂಗಪ್ಪ ಅಂಗಡಿ, ಸುರೇಶ ಬಿರಾದಾರ, ವಿಜಯಕುಮಾರ ಕುಡಿಗನೂರ, ವಿಜಯ ಜೋಶಿ, ರಾಜು ಬಿರಾದಾರ, ಬಾಬು ರಾಜೇಂದ್ರ ನಾಯಕ, ಸಮೀರ ಕುಲಕರ್ಣಿ, ಸಂದೀಪ ಪಾಟೀಲ, ಸಂಗು ಉಕ್ಕಲಿ, ಶಂಕರಗೌಡ ಬಿರಾದಾರ, ಮಲ್ಲು ಕಲಾದಗಿ, ರಾಜೇಶ ತವಸೆ, ಸಂತೋಷ ಬಿರಾದಾರ, ಮುತ್ತು ಶ್ಯಾಬಾದಿ, ಭೀಮಸಿಂಗ ರಾಠೋಡ, ಚಿದಾನಂದ ಔರಂಗಾಬಾದ, ಕಾಶೀರಾಯಗೌಡ ಬಿರಾದಾರ, ಸಿದ್ದಯ್ಯಮಠ, ಚಂದ್ರಕಾಂತ ಶಿರಕನಳ್ಳಿ, ನಾಗರಾಜ ಬಿರಾದಾರ, ಮಲ್ಲಿಕಾರ್ಜುನ ಕನ್ನೂರ, ನಾನಾ ಪ್ರಕೋಷ್ಠಗಳ ಪದಾಧಿಕಾರಿಗಳು ಮತ್ತೀತರರು ಉಪಸ್ಥಿತರಿದ್ದರು.