Sainik School: ವಿಜಯಪುರ ಸೈನಿಕ ಶಾಲೆಯ ನೂತನ ಪ್ರಾಚಾರ್ಯರಾಗಿ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ ಅಧಿಕಾರ ಸ್ವೀಕಾರ- ಶಾಲೆಯ ಮೊದಲ ಮಹಿಳಾ ಪ್ರಾಚಾರ್ಯ

ವಿಜಯಪುರ: ವಿಜಯಪುರದ(Vijayapura) ಪ್ರತಿಷ್ಠಿತ(Prestigious) ಮತ್ತು ರಾಜ್ಯದ ಮೊದಲ ಸೈನಿಕ ಶಾಲೆ(State First Sainik School) ಎಂದೇ ಹೆಸರಾಗಿರುವ ವಿಜಯಪುರ ಸೈನಿಕ ಶಾಲೆ ನೂತನ ಪ್ರಾಚಾರ್ಯರಾಗಿ(New Principal) ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ ಗ್ರುಪ್ ಗ್ಯಾಪ್ಟನ್ ಪ್ರತಿಭಾ ಬಿಷ್ಟ(Group Captain Pratibha Bist) ಅಧಿಕಾರ ವಹಿಸಿಕೊಂಡಿದ್ದಾರೆ.

ವಾಯು ಪಡೆಯ ಉನ್ನತ ಅಧಿಕಾರಿಯಾಗಿರುವ ಗ್ರೂಪ್ ಕ್ಯಾಪ್ಟನ್ ಪ್ರತಿಭಾ ಬಿಷ್ಟ ತಮ್ಮ 22 ವರ್ಷದ ಅವಧಿಯಲ್ಲಿ ಭಾರತೀಯ ವಾಯುಪಡೆಯಲ್ಲಿ ನಾನಾ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.  ವಾಯು ಪಡೆಯ ಶೈಕ್ಷಣಿಕ ವಿಭಾಗದ ಡೆಪ್ಯೂಟಿ ಕಮಾಂಡ’ ಜಾಯಿಂಟ್ ಡೈರೆಕ್ಟರ್ ಮತ್ತು ಕೊಯಿಮತ್ತೂರಿನ ವಾಯು ಪಡೆಯ ಎಡ್ಮಿನಿಸ್ಟ್ರೇಷನ್ ಕಾಲೇಜಿನ ಮುಖ್ಯ ತರಬೇತುದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಈಗ ವಿಜಯಪುರದ ಸೈನಿಕ ಶಾಲೆಯ ಪ್ರಾಚಾರ್ಯರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ವಿಜಯಪುರದಲ್ಲಿರುವ ರಾಜ್ಯದ ಮೊದಲ ಸೈನಿಕ ಶಾಲೆ

ಸೈನಿಕ ಶಾಲೆಯ ಆರು ದಶಕಗಳ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಮಹಿಳೆಯೊಬ್ಬರು ಸೈನಿಕ ಶಾಲೆ ಪ್ರಾಚಾರ್ಯರಾಗಿ ನೇಮಕ ವಾಗುತ್ತಿರುವುದು ಗಮನಾರ್ಹವಾಗಿದೆ.  ಅಲ್ಲದೇ, ಸೈನಿಕ ಶಾಲೆಯ ಉಪ ಪ್ರಾಚಾರ್ಯರಾಗಿ ಕಮಾಂಡರ್ ಸುರುಚಿ ಗೌರ್ ನೇಮಕವಾಗಿರುವುದೂ ವಿಶೇಷ ಸಂಗತಿಯಾಗಿದೆ.

ಈಗ ಪ್ರತಿ ವರ್ಷವೂ ಸೈನಿಕ ಶಾಲೆಗೆ ಹತ್ತು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗುತ್ತಿದೆ.  ಸಧ್ಯಕ್ಕೆ ಈ ಸೈನಿಕ ಶಾಲೆಯಲ್ಲಿ ಸುಮಾರು 30 ವಿದ್ಯಾರ್ಥಿನಿಯರು ವ್ಯಾಸಾಂಗ ಮಾಡುತ್ತಿದ್ದಾರೆ.  ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯ ಸಹಭಾಗಿತ್ವದ ಹಿನ್ನೆಲೆಯಲ್ಲಿ ಈ ಎಲ್ಲ ಅಂಶಗಳು ಗಮನ ಸೆಳೆದಿವೆ.

Leave a Reply

ಹೊಸ ಪೋಸ್ಟ್‌