Summer Hot: ಬಸವ ನಾಡಿನಲ್ಲಿ ಮುಂದಿನ ಐದು ದಿನ ಬಿಸಿಲಿನ ಝಳ ಹೆಚ್ಚಳ- ಉಷ್ಣಾಂಶ ಸುಮಾರು 44 ° ಸೆಲ್ಸಿಯಸ್ ಸಾಧ್ಯತೆ- ಹವಾಮಾನ ಇಲಾಖೆ ಮುನ್ಸೂಚನೆ

ವಿಜಯಪುರ: ಈಗಾಗಲೇ ಬಿಸಿಲಿನ(Heat) ಬೇಗೆಯಿಂದ(Sweating) ತತ್ತರಿಸಿರುವ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯ(Vijayapura District) ಜನತೆಗೆ ಮುಂದಿನ ಐದು ದಿನಗಳಲ್ಲಿ(Next Five Days) ಸೆಕೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಮುಂದಿನ ಐದು ದಿನಗಳಲ್ಲಿ ಬಿಸಿ ವಾತಾವರಣದೊಂದಿಗೆ ಉತ್ತರ ಕರ್ನಾಟಕದಾದ್ಯಂತ ಬೇಸಿಗೆಯ ಕಾವು ಹೆಚ್ಚಾಗಲಿದೆ.  ಆಕಾಶವೂ ಕೂಡ ಸ್ಪಷ್ಟವಾಗಿರಲಿದೆ.  ಯಾವುದೇ ಮೋಡ ಕವಿಯುವ ಸಾಧ್ಯತೆಗಳೂ ಇಲ್ಲ.  ಮಳೆಯೂ ಸುರಿಯುವ ಲಕ್ಷಣಗಳಿಲ್ಲ.

ಕಲ್ಯಾಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ 41 °ಸೆ. ನಿಂದ 43 ° ಸೆ. ಉಷ್ಣಾಂಶ ದಾಖಲಾಗಲಿದೆ.  ಮುಂದಿನ ಐದು ದಿನಗಳಲ್ಲಿ ಕಲಬುರ್ಗಿ, ಯಾದಗಿರಿ, ರಾಯಚೂರು ಜಿಲ್ಲಾದ್ಯಂತ ಮತ್ತು ವಿಜಯಪುರ ಜಿಲ್ಲೆಯ ಈಶಾನ್ಯ ಭಾಗದಲ್ಲಿ ಅಂದರೆ, ಸಿಂದಗಿ ಮತ್ತೀತರ ತಾಲೂಕುಗಳು ಹಾಗೂ ಕೊಪ್ಪಳ ಜಿಲ್ಲೆಯ ಕೆಲವು ಭಾಗಗಳಲ್ಲಿ ಉಷ್ಣಾಂಶ 44 ° ಸೆ. ತಲುಪುವ ಸಾಧ್ಯತೆಗಳು ಹೆಚ್ಚಾಗಿವೆ.

ಬೇಸಿಗೆಯಲ್ಲಿ ತಂಪು ನೀಡುವ ಕಲ್ಲಂಗಡಿ ಹಣ್ಣು

 

ಕಲ್ಯಾಣ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಹಾವೇರಿ ಪಶ್ಚಿಮ ಭಾಗಗಳಲ್ಲಿ ಉಷ್ಣಾಂಶ 37 ಸೆ. ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ 36 ° ಸೆ. ತಾಪಮಾನ ದಾಖಲಾಗುವ ಸಾಧ್ಯತೆ ಇದೆ.  ಉತ್ತರ ಕರ್ನಾಟಕದ ಉಳಿದ ಭಾಗಗಳಲ್ಲಿ 39 ° ಯಿಂದ 41 ° ಸೆ. ಉಷ್ಣಾಂಶ ದಾಖಲಾಗಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಹಿರಿಯರು, ಮಕ್ಕಳು ಮತ್ತು ಗರ್ಭಿಣಿಯರು ಮ. 12 ರಿಂದ 3ರ ವರೆಗೆ ಹೊರಗಡೆ ಹೋಗಬಾರದು.  ಸುಡುವ ಬಿಸಿಲಿನಲ್ಲಿ ಮಕ್ಕಳನ್ನು ಆಟವಾಡಲು ಬಿಡಬಾರದು.  ಆಹಾರ ಸೇವನೆಯನ್ನು ಕಡಿಮೆ ಮಾಡಬೇಕು.  ಆದರೆ, ಸಾಕಷ್ಟು ನೀರು ಕುಡಿಯಬೇಕು ಹಾಗೂ ರಸಭರಿತವಾದ ಹಣ್ಣುಗಳನ್ನು ತಿನ್ನಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌