ವಿಜಯಪುರ: ಪಡಿತರ ಚೀಟಿ(Ration Card) ಹೊಂದಿರುವ ಫಲಾನುಭವಿಗಳು(Beneficiary) ಮೇ ತಿಂಗಳ(May Month) ಅಂತ್ಯೋದಯ ಅನ್ನ ಯೋಜನೆ(Antyodaya Anna Yojane) ಹಾಗೂ ಆದ್ಯತಾ (ಬಿಪಿಎಲ್) ಪಡಿತರ ಚೀಟಿದಾರರು(BPL Card Holder) ಸಂಬಂಧಿಸಿದ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ಬಿ. ದಾನಮ್ಮನವರ ಸೂಚಿನೆ ನೀಡಿದ್ದಾರೆ.
ಸಾರ್ವಜನಿಕ ವಿತರಣಾ ಪದ್ದತಿಯ ಅನ್ನಭಾಗ್ಯ ಯೋಜನೆಯಡಿ 2022ನೇ ಮೇ ತಿಂಗಳಿಗೆ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ 35 ಕೆಜಿ ಆಹಾರ ಧಾನ್ಯಗಳಲ್ಲಿ 15 ಕೆಜಿ ಬಿಳಿಜೋಳ ಹಾಗೂ 20 ಕೆಜಿ ಅಕ್ಕಿ, ಅದರಂತೆ ಆದ್ಯತಾ ಪಡಿತರ ಚೀಟಿ (ಬಿಪಿಎಲ್)ನ ಪ್ರತಿ ಸದಸ್ಯರಿಗೆ ಪಿಎಂಜಿಕೆವೈ ಯೋಜನೆಯ 5 ಕೆಜಿ ಅಕ್ಕಿ ಹಾಗೂ ಎನ್‌ಎಫ್‌ಎಸ್‌ಎ 5 ಕೆಜಿ ಅಕ್ಕಿ ಹೀಗೆ ಒಟ್ಟು 10 ಕೆಜಿ ಆಹಾರ ಧಾನ್ಯಗಳಲ್ಲಿ 2 ಕೆಜಿ ಬಿಳಿಜೋಳ ಹಾಗೂ 8 ಕೆಜಿ ಅಕ್ಕಿಯನ್ನು ಸರಕಾರ ಬಿಡುಗಡೆ ಮಾಡಿದೆ.
ಪಡಿತರ ಪಡೆಯುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.