Panchamasali Reservaton: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ: ಮುಖ್ಯಮಂತ್ರಿ ಶಿಗ್ಗಾವಿ ನಿವಾಸದ ಎದುರು ಧರಣಿ ನಡೆಸಲು ಕೂಡಲ ಸಂಗಮ ಸ್ವಾಮೀಜಿ ನಿರ್ಧಾರ

ವಿಜಯಪುರ: ಪಂಚಮಸಾಲಿ(Panchamasali) ಸಮುದಾಯಕ್ಕೆ 2ಎ ಮೀಸಲಾತಿ(2A Reservation) ಘೋಷಣೆ(Announcement) ಮಾಡದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ(Chief Minister) ಶಿಗ್ಗಾವಿ ನಿವಾಸದ ಎದುರು ಧರಣಿ ಸತ್ಯಾಗ್ರಹ ಮಾಡುವುದಾಗಿ ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ(Basavajaya Mrutyunjaya Swamiji) ಎಚ್ಚರಿಕೆ ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಪಟ್ಟಂತೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ತಕ್ಷಣ ಅನೇಕ ಬಾರಿ ನಮಗೆ ಬಹಳ ದೊಡ್ಡ ಭರವಸೆ ಕೊಟ್ಟಿದ್ದರು.  ಅವರ ಮೇಲೆ ಎಲ್ಲಿಲ್ಲದ ನಂಬಿಕೆ ವಿಶ್ವಾಸ ಇಟ್ಟಿದ್ದೇವು. ಆದರೆ, ಈಡೇರಿಸಿಲ್ಲ ಎಂದು ಹೇಳಿದರು.

ಬಜೆಟ್ ಅಧಿವೇಶನದೊಳಗೆ ನೀಡುವುವದಾಗಿ ಹೇಳಿದ್ದ ಭರವಸೆ ಹುಸಿಯಾಗಿದೆ

ಇದೇ ವೇಳೆ, ಬಜೆಟ್ ಅಧಿವೇಶನದೊಳಗೆ ಮೀಸಲಾತಿ ಕೊಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ,, ಸಚಿವರಾದ ಸಿ. ಸಿ. ಪಾಟೀಲ, ಅರವಿಂದ ಬೆಲ್ಲದ, ಸಿದ್ದು ಸವದಿ ಅವರಿಗೆ ಡಿ. 16 ರಂದು ನಡೆದ ಸಭೆಯಲ್ಲಿ ಮಾತು ಕೊಟ್ಟಿದ್ದರು.  ಆದರೆ, ಕೊಟ್ಟ ಮಾತು ತಪ್ಪಿರುವ ಕಾರಣ ನಾವು ಜನರಿಗೆ ಕೊಟ್ಟಂತೆ ನಿರ್ಣಯ ತಪ್ಪಬಾರದು ಎಂಬ ಕಾರಣಕ್ಕೋಸ್ಕರವಾಗಿ ಏ. 21 ನಿರಂತರ ಹೋರಾಟ ಪ್ರಾರಂಭಿಸಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.

ಏ. 21 ರಿಂದ ಮೇ 4ರ ವರೆಗೊ ಕೂಡಲ ಸಂಗಮ ಕ್ಷೇತ್ರದಲ್ಲಿ ಬಸವಣ್ಣನವರ ಸನ್ನಿಧಾನದಲ್ಲಿ 14 ದಿನಗಳ ಕಾಲ ಬಹಳ ದೊಡ್ಡ ಧರಣಿ ಸತ್ಯಾಗ್ರಹವನ್ನು ಮಾಡಿ ಮೇ 5 ರಿಂದ ರಾಜ್ಯಾದ್ಯಂತ ಎಲ್ಲ ತಹಸೀಲ್ದಾರ ಕಚೇರಿ ಮುಂದೆ ನಮ್ಮ ಜನ ಪ್ರತಿಭಟನೆ ಶುರು ಮಾಡಿದ್ದಾರೆ.  ಕೆಲವು ಕಡೆ ಬೀಗ ಹಾಕುವ ಕಾರ್ಯವನ್ನು ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಮುಂದಿನ ದಿನಗಳಲ್ಲಿ ಮೀಸಲಾತಿಗೆ ಸೂಕ್ತವಾದ ಸ್ಪಂದನೆ ಸಿಗದೆ ಇದೇ ರೀತಿ ವಿಳಂಬ ಧೋರಣೆ ಮುಂದುವರೆದರೆ ಪ್ರತಿಯೊಂದು ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುವ ನಿರ್ಧಾರ ಮಾಡಿದ್ದೇವೆ.  ಆ ದಿನಾಂಕವನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸಲಾಗುವುದು ಎಂದು ಅವರು ಹೇಳಿದರು.

ಆದಾದ ನಂತರವೂ ಸಹ ಸರಕಾರ ಇದೇ ರೀತಿ ವಿಳಂಬ ಮಾಡಿದರೆ ನಾನು ಶಿಗ್ಗಾವಿಯಲ್ಲಿರುವ ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ಸತ್ಯಾಗ್ರಹ ಮಾಡುತ್ತೇನೆ.  ಈ ಮೂಲಕ ನಮ್ಮ ನೋವನ್ನು ನಮ್ಮ ಸಂಕಟವನ್ನು ಈ ನಾಡಿನ ದೊರೆಗೆ ಹೇಳುತ್ತೇನೆ.  ಹೀಗೆ ಮೀಸಲಾತಿ ಸಿಗುವವರೆಗೆ ಉಗ್ರ ಹೋರಾಟವನ್ನು ಮಾಡುವ ಉದ್ದೇಶಕ್ಕೋಸ್ಕರವಾಗಿ ಜನರಿಗೆ ಕೊಟ್ಟ ಮಾತಿನಂತೆ ನಾವು ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಶ್ರೀಗಳು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುವ ನಿರ್ಧಾರವನ್ನು ಎರಡ್ಮೂರು ದಿನಗಳಲ್ಲಿ ನಿರ್ಧರಿಸುತ್ತೇವೆ.  ರಾಜ್ಯ ರಾಜಕೀಯದಲ್ಲಿ  ಸಚಿವ ಸಂಪುಟ ಬಗ್ಗೆ ಚರ್ಚೆಗಳಾಗುತ್ತಿವೆ.  ಆ ಗೊಂದಲದಲ್ಲಿ ನಮ್ಮ ಶಾಸಕರಿದ್ದಾರೆ.  ಅದಾದ ನಂತರ ನಾನು ಮತ್ತೆ ಚರ್ಚೆ ನಡೆಸಿ ದಿನಾಂಕವನ್ನು ನಿಗದಿ ಮಾಡುತ್ತೇವೆ.  ಸಾಧ್ಯವಾದರೆ ಮೇ ತಿಂಗಳಲ್ಲಿ ಆ ಸತ್ಯಾಗ್ರವನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಎರಡು ದಿನಕ್ಕೋಮ್ಮೆ ಅಂದರೆ ಸೋಮವಾರ ಮತ್ತು ಗುರುವಾರ ಈ ರೀತಿ ಮಾಡುವ ನಿರ್ಧಾರ ಮಾಡಲಾಗಿದೆ.  ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡುವ ದಿನಾಂಕವನ್ನು ಅಂದೇ ಘೋಷಿಸುತ್ತೇವೆ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

Leave a Reply

ಹೊಸ ಪೋಸ್ಟ್‌