Textile Park: ವಿಜಯಪುರದಲ್ಲಿ ಜವಳಿ ಪಾರ್ಕ್ ನಿರ್ಮಾಣ- ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿದ ಸಂಸದ ರಮೇಶ ಜಿಗಜಿಣಗಿ

ವಿಜಯಪುರ: ವಿಜಯಪುರದಲ್ಲಿ(Vijayapura) ಜವಳಿ ಪಾರ್ಕ್(Textile Park) ನಿರ್ಮಿಸುವಂತೆ ಆಗ್ರಹಿಸಿ ಬಿಜೆಪಿ ಸಂಸದ(BJP Member Of Parliament) ರಮೇಶ ಜಿಗಜಿಣಗಿ(Ramesh Jigajinagi) ನವದೆಹಲಿಯಲ್ಲಿ ಕೇಂದ್ರ ಜವಳಿ ಸಚಿವ ಪಿಯುಷ ಗೋಯಲ(Piyush Goel) ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ರಾಜ್ಯ ಸರಕಾರ ವಿಜಯಪುರದಲ್ಲಿ ಜವಳಿ ಪಾರ್ಕ್ ನಿರ್ಮಿಸುವಂತೆ ಈಗಾಗಲೇ ಕಳುಹಿಸಿರುವ ಪ್ರಸ್ತಾವನೆಗೆ ಸ್ಪಂದಿಸಿ ಸಮಗ್ರ ಜವಳಿ ಪಾರ್ಕ್ ನಿರ್ಮಿಸುವಂತೆ ಸಂಸದರು ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.  ಅಲ್ಲದೇ, ವಿಜಯಪುರ ಜಿಲ್ಲೆಯಲ್ಲಿ ಜವಳಿ ಪಾರ್ಕ್ ಸ್ಥಾಪನೆಯಿಂದಾಗುವ ಲಾಭಗಳ ಕುರಿತು ಸಚವರಿಗೆ ರಮೇಶ ಜಿಗಜಿಣಗಿ ಸುದೀರ್ಘವಾಗಿ ವಿವರಿಸಿದರು.

ಸಂಸದರ ವಿಚಾರಗಳನ್ನು ಆಲಿಸಿದ ಕೇಂದ್ರ ಸಚಿವ ಪಿಯೂಷ್ ಗೋಯಲ್, ಈ ಜವಳಿ ಪಾರ್ಕ್ ಸ್ಥಾಪನೆಗೆ ಸಂಬಂಧಿಸಿದಂತೆ ಶಿಫಾರಸ್ಸು ಮಾಡಿ ಹೈಪವರ್ ಕಮೀಟಿಗೆ ಸಲ್ಲಿಸುವುದಾಗಿ ಭರವಸೆ ನೀಡಿದರು.

ಸಂಸದ ರಮೇಶ ಜಿಗಜಿಣಗಿ ನವದೆಹಲಿಯಲ್ಲಿ ಕೇಂದ್ರ ಸಚಿವ ಪಿಯುಷ ಗೋಯಲ ಅವರನ್ನು ಭೇಟಿ ಮಾಡಿ ಮಾಡಿದರು

ವಿಜಯಪುರ ಜಿಲ್ಲೆಯಲ್ಲಿ ಜವಳಿ ಮೌಲ್ಯ ಸರಪಳಿ, ಅಂದರೆ ನೂಲುವ, ನೇಯ್ಗೆ, ಹೆಣಿಗೆ ಮೊದಲಾದ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಫುಲವಾದ ಮಾರುಕಟ್ಟೆ ಹಾಗೂ ಸಿದ್ಧತಾ ಕ್ರಮಗಳು ವ್ಯಾಪಕವಾಗಿವೆ. ಕರ್ನಾಟಕ ಜವಳಿಗಳ ಉದ್ಯಮದಲ್ಲಿ ಸುದೀರ್ಘ ಮತ್ತು ಶ್ರೀಮಂತ ಇತಿಹಾಸವನ್ನು ಹೊಂದಿದೆ.  ಅಲ್ಲದೇ, ಕರ್ನಾಟಕದ ಕೈಮಗ್ಗಗಳು ತಮ್ಮ ವಿನ್ಯಾಸ ಮತ್ತು ಗುಣಮಟ್ಟಕ್ಕಾಗಿ ವಿಶ್ವಾದ್ಯಂತ ಮೆಚ್ಚುಗೆಯನ್ನು ಗಳಿಸಿವೆ.  ಈ ಶ್ರೀಮಂತ ಇತಿಹಾಸ ಮತ್ತು ಈ ಪ್ರದೇಶದಲ್ಲಿ ಸ್ಥಳೀಯವಾಗಿ ಲಭ್ಯವಿರುವ ಮೂಲಭೂತ ಸೌಕರ್ಯಗಳೊಂದಿಗೆ ಜವಳಿ ಮತ್ತು ಉಡುಪುಗಳಲ್ಲಿ ಹೂಡಿಕೆಯನ್ನು ಆಕರ್ಷಿಸಲು ಕರ್ನಾಟಕವು ಅಗ್ರ ಸ್ಥಾನದಲ್ಲಿದೆ.  ಈ ನಿಟ್ಟಿನಲ್ಲಿ ವಿಜಯಪುರದಲ್ಲಿ ಜವಳಿ ಪಾರ್ಕ್ ಸ್ಥಾಪನೆಯಾದರೆ ಹೆಚ್ಚಿಗೆ ಉದ್ಯೋಗ ಸೃಷ್ಟಿಯಾಗಲಿವೆ ಮತ್ತು ಜವಳಿ ಉದ್ಯಮಕ್ಕೆ ನವ ಉತ್ತೇಜನ ದೊರಕಲು ಸಾಧ್ಯವಾಗುತ್ತದೆ ಎಂದು ರಮೇಶ ಜಿಗಜಿಣಗಿ ಹೇಳಿದರು.

ವಿಜಯಪುರ ಜಿಲ್ಲೆ ಜನತೆ ಬಡತನ ಎದುರಿಸುತ್ತಿದ್ದಾರೆ.  ದುಡಿಯಲು ಗುಳೆ ಹೋಗುವಂತಾಗಿದೆ.  ಆದರೆ, ಜನರಲ್ಲಿ ಕೌಶಲ್ಯಗಳಿಗೆ ಮಾತ್ರ ಬರವಿಲ್ಲ.  ಹೀಗಾಗಿ ಈ ದುಡಿಯುವ ಕೈಗಳಿಗೆ ಉದ್ಯೋಗ ನೀಡಿದರೆ ಅವರಿಗೂ ಉದ್ಯೋಗ ದೊರಕಿದಂತಾಗುತ್ತದೆ.  ಈ ಹಿನ್ನೆಲೆಯಲ್ಲಿ ಜವಳಿ ಪಾರ್ಕ್ ನಿರ್ಮಿಸಬೇಕು ಎಂದು ಅವರು ಹೇಳಿದರು.

ಅದೇ ರೀತಿ ವಿಜಯಪುರದಲ್ಲಿ ಪ್ರಧಾನ ಮಂತ್ರಿ ಮಿತ್ರ ಉದ್ಯಾನವನ ಸ್ಥಾಪನೆಗೂ ಅವಕಾಶಗಳಿವೆ.  ವಿಮಾನ ಸೇವೆ ಕೂಡ ಶೀಘ್ರದಲ್ಲಿ ಕಾರ್ಯಾರಂಭವಾಗಲಿವೆ.  ಡಬಲ್ ಟ್ರ್ಯಾಕ್ ರೈಲು ಮಾರ್ಗ ಮೊದಲಾದ ಸೌಲಭ್ಯಗಳಿದ್ದು, ಈ ಉದ್ಯಾನವನ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಮನವಿ ಪತ್ರ ಸಲ್ಲಿಸಿದರು.

 

Leave a Reply

ಹೊಸ ಪೋಸ್ಟ್‌