DKC Yatnal: ಡಿಕೆಶಿ ವಿರುದ್ಧ ಕಿಡಿ- ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಭಯವಿದೆ- ಬಿಜೆಪಿ ಹೈಕಮಾಂಡ್ ಬಗ್ಗೆ ನಾನು ಹೇಳಿಕೆ ನೀಡಿಲ್ಲ- ಶಾಸಕ ಯತ್ನಾಳ

ವಿಜಯಪುರ: ಕೆಪಿಸಿಸಿ(KPCC) ಅಧ್ಯಕ್ಷ(President) ಡಿ. ಕೆ. ಶಿವಕುಮಾರ(D K Shivakumar) ವಿರುದ್ಧ(Against) ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಹರಿಹಾಯ್ದಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ. ಕೆ, ಶಿವಕುಮಾರಗೆ ನನ್ನ ಭಯ ಶುರವಾಗಿದೆ.  ಯತ್ನಾಳ್ ಸಿಎಂ ಆದರೆ ತಮ್ಮ ರಾಜಕೀಯ ಭವಿಷ್ಯ ಅಂತ್ಯವಾಗುತ್ತೆ ಎನ್ನುವ ಭಯ ಡಿ. ಕೆ. ಶಿವಕುಮಾರ ಅವರಿಗೆ ಇದೆ.  ಮತ್ತೆ ಅದೆ ಜಾಗಕ್ಕೆ(ಜೈಲಿಗೆ) ಹೋಗಬೇಕಾಗುತ್ತೆ ಎನ್ನುವ ಭಯ ಶುರುವಾಗಿದೆ.  ಡಿ. ಕೆ. ಶಿವಕುಮಾರ ಅವರಿಗೆ ಏನೋ ಒಂದು ಸಂದೇಶ‌ ಸಿಕ್ಕಿದೆ.  ಯತ್ನಾಳ್ ಪವರ್‌ಪುಲ್ ಮನುಷ್ಯ ಆದರೆ ಎನ್ನುವ ಭಯ ಇದೆ ಎಂದು ಹೇಳಿದರು.

ನಾನು ಸಚಿವ ಸ್ಥಾನ ಕೇಳಿಯೇ ಇಲ್ಲ.  ನಾನು ವಿಧಾನ ಸೌಧದಲ್ಲಿ ರೂ. 2000 ಕೋ. ವಿಚಾರ ಮಾತನಾಡಿದಾಗ ಇದು ಇಶ್ಯೂ ಆಗಲಿಲ್ಲ.  ಅದನ್ನೇ ರಾಮದುರ್ಗದಲ್ಲಿಯೂ ಹೇಳಿದ್ದೇನೆ.  ವಿಧಾನಸೌಧದಲ್ಲಿ ಹೇಳಿದಾಗ ಯಾಕೆ ಚರ್ಚೆ ಆಗಲಿಲ್ಲ ಎಂದು ಅವರು ಪ್ರಶ್ನಿಸಿದರು.

ಕೆಲವೇ ದಿನಗಳಲ್ಲಿ ಸಚಿವ ಸಂಪುಟದಲ್ಲಿ ಬದಲಾವಣೆಯ ಸುಳಿವಿದೆ,  ಹೀಗಾಗಿ ನಾನು ಟಾರ್ಗೆಟ್ ಆಗಿದ್ದೇನೆ.  ಡಿ. ಕೆ. ಶಿವಕುಮಾರ ಅವರಿಗೆ ಯತ್ನಾಳ್ ಟಾರ್ಗೆಟ್ ಆಗಿದ್ದಾರೆ. ಅವರಿಗೆ ಯತ್ನಾಳ್ ಬಗ್ಗೆ ಭಯ ಇದೆ.  ಯತ್ನಾಳ್ ಏನಾದರೂ ಆದರೆ ಬುಲ್ಡೋಜರ್ ತರ್ತಾರೆ ಎಂಬ ಭಯವಿದೆ. ಅಕ್ರಮ ಆಸ್ತಿ ಒಡೆಯೋಕೆ ಶುರು ಮಾಡ್ತಾರೆ ಎಂಬ ಭಯವಿದೆ.  ನಾನು ಸಿಎಂ ಆದರೆ ಬುಲ್ಡೊಜರ‍್ ರೆಡಿ ಇಟ್ಟಿದ್ದೀನಿ.

ಬುಲ್ಡೊಜರ‍್ ಗೆ ಆರ್ಡರ್ ಕೊಟ್ಟಿದ್ದೀನಿ ಎಂದು ಯತ್ನಾಳ ಟಾಂಗ್ ನೀಡಿದರು.

ನನಗೆ ಸಚಿವ ಸ್ಥಾನ ತಪ್ಪಿಸಲು ಈ ಷಡ್ಯಂತ್ರ ನಡೆದಿದೆ ಎಂದು ಹೇಳಿದ ಅವರು, ಡಿ. ಕೆ. ಶಿವಕುಮಾರ ಕಂಪ್ಲೆಂಟ್ ಮತ್ತು ಟ್ವಿಟ್ ವಿಚಾರ ಕುರಿತು ವಾಗ್ದಾಳಿ ನಡೆಸಿದರು.

ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಡಿ. ಕೆ. ಶಿವಕುಮಾರ ಏನೇ ಮಾಡಿದರೂ ನಾನು ಅಂಜುವ ಮಗ ಅಲ್ಲ. ನಾನು ಅಂಜಿ ರಾಜಕಾರಣ ಮಾಡಲ್ಲ.  ಡಿ. ಕೆ. ಶಿವಕುಮಾರ ಅವರಿಗೆ ನನ್ನ ಭಯ ಹುಟ್ಟಿದೆ.  ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತೆ ಎನ್ನುವ ಭಯ ಶುರುವಾಗಿದೆ ಎಂದು ಹೇಳಿದರು.

ಸಿಎಂ ಆಗಲು ಹೈಕಮಾಂಡಿಗೆ ಹಣ ನೀಡುವ ಹೇಳಿಕೆ ವಿಚಾರ

ಸಿಎಂ ಆಗಲು ಹೈಕಮಾಂಡಿಗೆ ಹಣ ನೀಡಬೇಕು ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಹಾಗೆ ಹೇಳಿಲ್ಲ.  ಹೇಳಿದ ಅರ್ಥ ಬೇರೆ ಇದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಸಿಎಂ ಮಾಡ್ತೀವಿ ಎಂದು ಯಾರೋ ವಾಟ್ಸಾಪ್ ಕಾಲ್ ಮಾಡ್ತಾರೆ.  ನಮಗೆ ಮೋದಿ ಗೊತ್ತು.  ಸೋನಿಯಾ ಗಾಂಧಿ ಗೊತ್ತು.  ದೇವೆಗೌಡರು ಗೊತ್ತು ಎಂದು ಹೇಳುತ್ತಾರೆ.  ಈಗಿನ ವ್ಯವಸ್ಥೆ ಹಾಗಿದೆ ಎಂದು ಅವರು ಹೇಳಿದರು.

ದೆಹಲಿ ಸಾಧು ಒಬ್ಬ ತಾನು ಕೇದಾರ ಮಹಾರಾಜ ಮಾತಾಡೋದು.  ನನಗೆ ಎಲ್ಲರೂ ಗೊತ್ತು.  ಇಷ್ಟು ಹಣ ತಂದು ಕೊಟ್ಟರೆ ಶಿಫಾರಸ್ಸು ಮಾಡ್ತೀನಿ ಅಂತಾರೆ. ಇದೆಲ್ಲ‌ ರೆಕಾರ್ಡ್ ಇಟ್ಟುಕೊಳ್ಳಲು ಅಗಲ್ಲ.  ರೆಕಾರ್ಡ್ ಇಟ್ಟು ರಾಜಕೀಯ ಮಾಡೋಕೆ ಆಗಲ್ಲ.  ಹೀಗೆ ರಾಜಕಾರಣ ನಡೆಯುತ್ತದೆ.  ರಾಮದುರ್ಗದಲ್ಲಿ ವೇದಿಕೆ ಮೇಲೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಕೆಲ ಟಿಕೇಟ್ ಆಕಾಂಕ್ಷಿಗಳಿದ್ದರು.  ಅವರಿಗೆ ಹಿತವಚನ ಹೇಳಲು ನಾನು ಆ ರೀತಿ ಮಾತನಾಡಿದ್ದೇನೆ ಎಂದು ಯತ್ನಾಳ ಹೇಳಿದರು.

ನಮಗೆ ಕಾಲ್ ಮಾಡಿ ಸೋನಿಯಾ ಗಾಂಧಿ ಭೇಟಿ ಮಾಡಿಸ್ತೀನಿ ಎಂದಿದ್ದಾರೆ.  ಇಂಥಹ ದಲಾಲರು ರಾಜ್ಯದಲ್ಲಿದ್ದಾರೆ.  ದೇಶ, ಬೆಂಗಳೂರಲ್ಲಿದ್ದಾರೆ.  ಅವರು ನಮಗೆ ನಿಮ್ಮ ಸಿಎಂ ಸೀಟ್ ಗಾಗಿ ನಾವು ಟ್ರೈ ಮಾಡ್ತೀವಿ ಎಂದು ಹೇಳುತ್ತಾರೆ.  ಇಷ್ಟು ಸಾವಿರ ಕೋಟಿ ರೆಡಿ ಇಡಿ ಎನ್ನುತ್ತಾರೆ.  ನಾವು ಇಂಥವರಿಗೆ ಛೀಮಾರಿ ಹಾಕಿದ್ದೇವೆ ಎಂದು ನಾನು ರಾಮದುರ್ಗದಲ್ಲಿ ಹೇಳಿದ್ದೇನೆ ಹೊರತು ಹೈಕಮಾಂಡ್ ಹಣ ಕೇಳಿದೆ ಎಂದು ನಾನು ಹೇಳಿಲ್ಲ ಎಂದು ಯತ್ನಾಳ ಎಚ್ಚರಿಕೆ ನೀಡಿದರು.

ದೇಶದಲ್ಲಿ ಪ್ರಧಾನಿ ಮೋದಿ ಕಾಲದಲ್ಲಿ ಇಂಥದ್ದೆಲ್ಲ ಸಾಧ್ಯವಿಲ್ಲ.  ಮೋದಿ ಇದ್ದಾಗ ಇದೆಲ್ಲ ನಡೆಯಲು ಸಾಧ್ಯವಿಲ್ಲ.  ನಾನು ಹೈಕಮಾಂಡ್ ಹಣ ಕೇಳಿದೆ ಎಂದು ಹೇಳಿಲ್ಲ.  ಮೋದಿ ಪ್ರಧಾನಿ ಇದ್ದಾಗ ಸಿಎಂ ಸೀಟಿಗಾಗಿ ಹಣ ಕೇಳುವಂತದ್ದು ನಡೆಯುವುದೇ ಇಲ್ಲ.  ಏಜೆಂಟರು, ದಲಾಲರು ಇದ್ದಾರೆ ಎಂದು ಹೇಳಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು

ಯತ್ನಾಳ್ ವಿರುದ್ಧ ಶಿಸ್ತುಸಮಿತಿಗೆ ಶಿಫಾರಸ್ಸು ವಿಚಾರ

ಶಿಸ್ತು ಸಮಿತಿಯಿಂದ ತಮ್ಮ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಯತ್ನಾಳ, ಶಿಫಾರಸ್ಸು ಮಾಡಲಿ.  ಶಿಸ್ತು ಕಮಿಟಿ ಅಂದ್ರೆ ಏನು? ನನ್ನ ಕರಿಸ್ತಾರಲ್ಲ ಅಲ್ಲಿ ಹೇಳ್ತೇನೆ.  ಹಿಂದೆನು ಕರಿಸಿದ್ದರು.  ರಾಜ್ಯಾಧ್ಯಕ್ಷರೆ ಕ್ಲಿಯರ್ ಆಗಿ ಹೇಳಿದ್ದಾರಲ್ಲ.  ಪಾರ್ಟಿ ಬಗ್ಗೆ ಹೇಳಿಲ್ಲ.

ಇನ್ ಜನರಲ್ ಆಗಿ ಮಾತಾಡಿದ್ದಾರೆ ಎಂದು ನಳೀನಕುಮಾರ ಕಟೀಲ ಅವರೇ ಹೇಳಿದ್ದಾರೆ.  ಇಷ್ಟರ ಮೇಲೆ‌ ಏನು ಶಿಸ್ತು ಕ್ರಮ ಕೈಗೊಳ್ಳುತ್ತಾರೆ? ಶಿಸ್ತು ಕ್ರಮ ಎಂದು ಕೆಲವು ಮಾಧ್ಯಮಗಳು ಹೊಡೆಯುತ್ತಿವೆ.  ಅದು ಏನು ಆಗೋದಿಲ್ಲ. ಮಾಧ್ಯಮದಲ್ಲಿ ಹೇಳಿದ್ದೆಲ್ಲ ಸತ್ಯವಲ್ಲ.  ಸತ್ಯ 24 ಕ್ಯಾರೆಟ್ ಬಂಗಾರವಿದ್ದಂತೆ.  ಸತ್ಯಕ್ಕೆ ಪಿಲ್ಟರ್ ಇರೋಲ್ಲ.  ಸುಳ್ಳಿಗೆ ಪಿಲ್ಟರ್ ಇರುತ್ತೆ ಎಂದು ಯತ್ನಾಳ ಸ್ಪಷ್ಟಪಡಿಸಿದರು.

Leave a Reply

ಹೊಸ ಪೋಸ್ಟ್‌