ವಿಜಯಪುರ: ವಿಜಯಪುರ ನಗರದ(Vijayapura City)) ಪ್ರತಿಷ್ಠಿತ ಬಿ. ಎಲ್. ಡಿ. ಇ. ಸಂಸ್ಥೆಯ(BLDEA) ವಚನ ಪಿತಾಮಹ ಡಾ. ಪ. ಗು.ಹಳಕಟ್ಟಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ(Engineering Collage) ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗ ಮತ್ತು ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಸಂಯುಕ್ತ ಆಶ್ರಯದಲ್ಲಿ ಫೈರ್ ಆಂಡ್ ಸೇಪ್ಟಿ ಮೇಜರ್ಸ್(Fire And Safety Measures) ಕುರಿತು ಕಾರ್ಯಕ್ರಮ(Programme) ನಡೆಯಿತು.
ಈ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಂಗನಾಥ ಮತ್ತು ಸಿಬ್ಬಂದಿ, ಅಗ್ನಿ ಎಂದರೇನು? ಅಗ್ನಿಯ ಪ್ರಕಾರಗಳು, ಅವುಗಳನ್ನು ಹತೋಟಿಗೆ ತರುವ ಹಾಗೂ ನಂದಿಸುವ ವಿಧಿವಿಧಾನಗಳ ಕುರಿತು ಅಣಕು ಪ್ರದರ್ಶನ ನಡೆಸಿಕೊಟ್ಟರು. ಅಲ್ಲದೇ, ಬೆಂಕಿಯ ಅವಘಡಗಳನ್ನು ತಪ್ಪಿಸಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಬೆಂಕಿಯ ಅವಘಡಗಳ ಪ್ರಸಂಗಗಳು, ಪ್ರಕಾರಗಳು, ಪ್ರಾಕೃತಿಕ ವಿಕೋಪಗಳು, ಮನುಷ್ಯನ ತಪ್ಪಿನಿಂದ ಆಗುವ ಪ್ರಮಾದಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯ ಸಂಚಾಲಕ ಡಾ. ಬಿ. ಎಂ. ಅಂಗಡಿ ಸ್ವಾಗತಿಸಿದರು. ಪ್ರಾಂಶುಪಾಲ ಡಾ. ವಿ. ಜಿ. ಸಂಗಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಆರ್. ಎನ್. ಜೀರಗಾಳ, ಕಾಲೇಜಿನ ಬೋಧಕರ ಹೊರತಾದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೋ. ಆರ್. ಎಸ್. ಎಲ್ಲೂರು ವಂದಿಸಿದರು. ಮಹೇಶಕುಮಾರ ಹಳಗೊಂಡ ಕಾರ್ಯಕ್ರಮ ನಿರೂಪಿಸಿದರು.