Loud Dpeakers Yatnal: ಧ್ವನಿವರ್ಧಕ ವಿಚಾರದಲ್ಲಿ ಸರಕಾರ ಕ್ರಮ ಕೈಗೊಳ್ಳದಿದ್ದರೆ ಪ್ರಮೋದ ಮುತಾಲಿಕ ಗೆ ನನ್ನ ಬೆಂಬಲ ಎಂದ ಶಾಸಕ ಯತ್ಬಾಳ

ವಿಜಯಪುರ: ಧ್ವನಿ ವರ್ಧಕಗಳ(Loud Speakers) ಬಳಕೆ(Use) ವಿಚಾರದಲ್ಲಿ ರಾಜ್ಯ ಸರಕಾರ(State Government) ಸುಪ್ರೀಂ ಕೋರ್ಟ್ ಆದೇಶ ಪಾಲಿಸಬೇಕು. ಇಲ್ಲದಿದ್ದರೆ ಶ್ರೀರಾಮ ಸೇನೆ ಮುಖಂಡ(Shriramsene Leader) ಪ್ರಮೋದ ಮುತಾಲಿಕ ನಡೆಸಲು ಮುಂದಾಗಿರುವ ಅಭಿಯಾನವನ್ನು ಬೆಂಬಲಿಸುವುದಾಗಿ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnsl) ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದೇವಸ್ಥಾನ ಮತ್ತು ಮಸೀದಿಗಳಲ್ಲಿ ಅನುಮತಿ ಇಲ್ಲದ ಧ್ವನಿವರ್ಧಕಗಳನ್ನು ತೆರವುಗೊಳಿಸಬೇಕು. ಶಬ್ದದ ವೇಗದ ಮಿತಿಯನ್ನು ಪರಿಶೀಲಿಸಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸರಕಾರ ಅನುಮತಿ ಇಲ್ಲದ ಮೈಕ್ ತೆರವುಗೊಳಿಸಬೇಕು. ಕೋರ್ಟ್ ಆದೇಶ ಪಾಲಿಸಬೇಕಿರುವುದು ಕರ್ನಾಟಕ ಸರಕಾರದ ಧರ್ಮ ಎಂದು ಅವರು ಹೇಳಿದರು.

ಉತ್ತರ ಪ್ರದೇಶದಂತೆ ಕರ್ನಾಟಕದಲ್ಲಿಯೂ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಬೇಕು. ಸಿಎಂ ಸುಪ್ರೀಂಕೋರ್ಟ್ ಆದೇಶವನ್ನ ಪಾಲಿಸಬೇಕು. ಸಿಎಂ ಆದೇಶ ಪಾಲಿಸದಿದ್ದರೇ ಮುತಾಲಿಕ ಅವರಿಗೆ ನನ್ನ ನನ್ನ ಬೆಂಬಲ ಇರಲಿದೆ ಎಂದು ಯತ್ನಾಳ ಹೇಳಿದರು.

ಈ ವಿಚಾರದಲ್ಲಿ ಸಿಎಂ ಯಾಕೆ‌ ಸುಮ್ಮನಾಗಿದ್ದಾರೋ ನನಗೆ ಗೊತ್ತಿಲ್ಲ. ಪ್ರಮೋದ ಮುತಾಲಿಕ್ ಹೇಳಿದ್ದರಲ್ಲಿ ತಪ್ಪಿಲ್ಲ. ಇವತ್ತೇ ಗೃಹ ಮಂತ್ರಿಗಳಿಗೆ ಸಿಎಂ ಆದೇಶ ಮಾಡಲಿ. ಅನುಮತಿ ಇಲ್ಲದ, ಕಾನೂನು ಪಾಲಿಸದ ಮೈಕ್ ತೆರವುಗೊಳಿಸಲು ಸಿಎಂ ಆದೇಶಿಸಬೇಕು ಎಂದು ಯತ್ನಾಳ ಆಗ್ರಹಿಸಿದರು.

ಮೈಕ್ ತೆರವುಗೊಳಿಸದಿದ್ದರೆ ಮತ್ತೊಂದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೇಳಿದರು.

ಡಿ. ಕೆ. ಶಿವಕುಮಾರ ವಿರುದ್ಧ ಮತ್ತೆ ವಾಗ್ದಾಳಿ

ಇದೇ ವೇಳೆ ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ತಮ್ಮನ್ನು ಮೆಂಟಲ್ ಎಂದ ವಿಚಾರಕ್ಕೆ ಯತ್ನಾಳ ಖಾರವಾಗಿ ಪ್ರತಿಕ್ತಿಯೆ ನೀಡಿದರು.

ಕೊತ್ವಾಲ್ ರಾಮಚಂದ್ರನಿಗೆ ಚಹಾ, ಸಿಗರೇಟ್ ತಂದು ಕೊಟ್ಟ ರೌಡಿಗಳಿಂದ ನಾನೇನು ಕಲಿಯಬೇಕಿಲ್ಲ ಎಂದು ಯತ್ನಾಳ್ ಟಾಂಗ್ ನೀಡಿದರು. ಡಿ. ಕೆ. ಶಿವಕುಮಾರ ಮಾನನಷ್ಟ ಮೊಕದ್ದಮೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಾಕಲಿ ಬಿಡಿ. ಏನಾಗುತ್ತೆ ಎಂದು ಪ್ರಶ್ನಿಸಿದರು.

ಅವನ ಬಳಿ ಹಣ ಇದೆ. ಮೊಕದ್ದಮೆ ಹಾಕ್ತಾನೆ. ಮಾನ ಇದ್ದವರಿಗೆ ಮಾನ ನಷ್ಟವಾಗುತ್ತೆ. ‌ಮಾನ ಇಲ್ಲದವರಿಗೆ ಏನು ಮಾನ ನಷ್ಟವಾಗುತ್ತೆ ಎಂದು ಯತ್ನಾಳ್ ಮರು ಪ್ರಶ್ನಿಸಿದರು.

Leave a Reply

ಹೊಸ ಪೋಸ್ಟ್‌