ವಿಜಯಪುರ: ಶಿಕ್ಷಣದ(Education) ಜೊತೆಗೆ ಮೌಲ್ಯಗಳನ್ನು(Values} ಬೆಳೆಸಿದಾಗ ವ್ಯಕ್ತಿತ್ವ(Personality) ಪರಿಪೂರ್ಣವಾಗುತ್ತದೆ(Complete}) ಎಂದು ಬೆಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೋ. ಬಸವರಾಜ ಬೆಣ್ಣಿ(Prof Basavaraj Benni) ಹೇಳಿದರು.
ವಿಜಯಪುರ ನಗರದ ಎ. ಎಸ್. ಪಾಟೀಲ ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಕೌಶಲ್ಯ ಭಾರತ: ಅವಕಾಶಗಳು ಮತ್ತು ಸವಾಲಗಳು’ ಕುರಿತು ನಡೆದ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕೀರ್ಣದ ಸಮಾರೋಪ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.
ಮೌಲ್ಯಗಳನ್ನು ಬೆಳೆಸುವುದು ಕೂಡಾ ಒಂದು ಕೌಶಲ್ಯಕಾಗಿದೆ. ಕೌಶಲ್ಯಗಳನ್ನೊಳಗೊಂಡ ಶೈಕ್ಷಣಿಕ ಚಟುವಟಿಗಳನ್ನು ಎಷ್ಟೋ ಕಾಲೇಜುಗಳು.ಮತ್ತು ವಿಶ್ವವಿದ್ಯಾಲಯಗಳು ಮಾಡದೇ ಇರುವ ಕೆಲಸಗಳನ್ನು ತಾವು ಆಯೋಜಿಸುತ್ತಿದ್ದೀರಿ. ಬದುಕನ್ನು ರೂಪಿಸುವ ವಿಷಯಗಳನ್ನು ಬೋಧಿಸುವುದು ಅವಶ್ಯ. ಎಂದು ವಾಣಿಜ್ಯ ಪದವಿಯ ಜೊತೆ ಕಾಸ್ಟಿಂಗ್ ಮತ್ತು ಗಣಿತ, ಫೈನಾನ್ಶಿಯಲ್ ಮ್ಯಾನೇಜಮೆಂಟ್ ಮತ್ತು ಭೌತಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ವಿಷಯಗಳನ್ನು ಅಧ್ಯಯನ ಮಾಡುವುದರಿಂದ ಹೆಚ್ಚು ಉದ್ಯೋಗ ಅವಕಾಶಗಳು ದೊರೆಯುತ್ತವೆ. ಈ ರೀತಿ ನಾನಾ ವಿಷಯಗಳ ಪರಿಚಯದಿಂದ ಉದ್ಯೋಗ ಸೃಷ್ಟಿಗೆ ಪೂರಕವಾಗುತ್ತವೆ. ಪ್ರತಿಭಾನ್ವಿತರಿಗೆ ಸಾಕಷ್ಟು ಅವಕಾಶಗಳಿವೆ ಎಂದು ಅವರು ಪ್ರೊ. ಬಸವರಾಜ ಬೆಣ್ಣಿ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೋ. ಡಿ. ಜಿ. ಸಾವಕಾರ ಕ್ಲೌವ್ಡ್ ಕಂಪ್ಯುಟಿಂಗ್ ಬಗ್ಗೆ ಸವಿಸ್ತರ ಮಾಹಿತಿಯನ್ನು ನೀಡಿದರು.
ವಿಚಾರ ಸಂಕೀರ್ಣದ ಸಂಚಾಲಕ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಭಕ್ತಿ ಮಹಿಂದ್ರಕರ ಎರಡು ದಿನದ ವಿಚಾರ ಸಂಕೀರ್ಣದ ವರದಿಯನ್ನು ವಿವರಿಸಿದರು. ಭಾರತವನ್ನು ಯುವರಾಷ್ಟ್ರ ಎಂದು ಪರಿಗಣಿಸಲಾಗಿದೆ, ಆರ್ಥಿಕ ಅಭಿವೃದ್ಧಿ ಹಾಗೂ ಬೆಳವಣಿಗೆಯಲ್ಲಿ ಯುವ ಪೀಳಿಗೆಯ ಪಾತ್ರವು ಮಹತ್ವದ್ದಾಗಿದ್ದು ವಿಶೇಷ ಕೌಶಲ್ಯ ಹೊಂದಿದ್ದ ಯುವ ಪೀಳಿಗೆಯು ಸ್ವದೇಶದಲ್ಲಿ ಅಲ್ಲದೇ ವಿದೇಶದಲ್ಲಿಯು ಸಹ ಒಳ್ಳೆಯ ಭವಿಷ್ಯ ನಿರೂಪಿಸಬಹುದು ಎಂದಉ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೋ. ಎಸ್. ಜಿ. ರೊಡಗಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಕೌಶಲ್ಯ ಹೊಂದಿದ ಶಿಕ್ಷಣ ಪ್ರಾಮುಖ್ಯತೆ ಹಾಗೂ ಪರಿಪೂರ್ಣತೆಯನ್ನು ಪಡೆದುಕೊಳ್ಳುತ್ತದೆ. ಸಂಪನ್ಮೂಲ ವ್ಯಕ್ತಿಗಳ ಸಹಾಯದಿಂದ ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಉಪಯುಕ್ತ ಕೌಶಲ್ಯಗಳನ್ನು ಬೆಳಿಸಬೇಕು. ಈ ಎರಡು ದಿನಗಳ ವಿಚಾರ ಸಂಕೀರ್ಣವು ವಿದ್ಯಾರ್ಥಿಗಳಿಗೆ ಮತ್ತು ಸಂಶೋಧನಾರ್ಥಿಗಳಿಗೆ ಮಾರ್ಗದರ್ಶಿಯಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಂಘಟನಾ ಕಾರ್ಯದರ್ಶಿಗಳಾದ ಪ್ರೋ. ವಿ. ಎಸ್. ಚಿಕರಡ್ಡಿ, ಪ್ರೋ. ವಿಜಯಕುಮಾರ ತಳವಾರ ಉಪಸ್ಥಿತರಿದ್ದರು. ಪ್ರೋ. ಮಮದಾಪುರ ಸ್ವಾಗತಿಸಿದರು, ಪ್ರೋ. ಐಶ್ವರ್ಯಾ ಮಿರಜಕರ ನಿರೂಪಿಸಿದರು
ಪ್ರೋ. ಪಿ. ಎಸ್. ತೊಳನೂರ ವಂದಿಸಿದರು. ಪ್ರೋ. ಐ. ಬಿ. ಚಿಪ್ಪಲಕಟ್ಟಿ, ದೈಹಿಕ ನಿರ್ದೇಶಕ ಪ್ರೋ. ಎಸ್. ಏ. ಪಾಟೀಲ, ಡಾ. ಬಿ. ಎಸ್. ಮಠ, ಡಾ. ಮಹಾನಂದಾ ಪಾಟೀಲ, ಡಾ. ಮುರುಗೇಶ ಪಟ್ಟಣಶೇಟ್ಟಿ, ಪ್ರೋ. ಕೆ. ಐ. ಹಿರೇಮಠ, ಪ್ರೋ. ರವಿ ಚವ್ಹಾಣ, ಡಾ. ಚಿದಾನಂದ ಬ್ಯಾಹಟ್ಟಿ, ಪ್ರೋ. ಮಲ್ಲಿಕಾರ್ಜುನ ಜೆ. ಎಂ., ಪ್ರೋ. ಲಕ್ಷ್ಮಿ ಬಾಗಲಕೋಟ, ಪ್ರೋ. ಎಸ್. ಎಸ್. ಕಣ್ಣೂರ, ಪ್ರೋ. ಐ. ಬಿ. ಝಾಬಾ, ಪ್ರೋ. ಅನ್ನಪೂರ್ಣಾ ತುಪ್ಪದ, ಪ್ರೋ. ಸುಷ್ಮಿತಾ ತುಂಗಳ, ರವಿ ಅಲ್ಲಾಪೂರ ಹಾಗೂ ನಾನಾ ಕಾಲೇಜುಗಳಿಂದ ಆಗಮಿಸಿದ ಪ್ರತಿನಿಧಿಗಳು, ಬೋಧಕ-ಬೋಧಕೇತರ ಸಿಬ್ಬಂದ್ದಿ, ವಿದ್ಯಾರ್ಥಿಗಳು ಹಾಗೂ ಸಂಶೋಧನಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.