Sweet Potateo: ಅಬ್ಬಾ, ಈ ಗೆಣಸು ಎಷ್ಟು ಬೆಳೆದಿದೆ ನೋಡಿ- ಇದಕ್ಕೆಲ್ಲ ಎಂ. ಬಿ. ಪಾಟೀಲ ಮಾಡಿದ ನೀರಾವರಿ ಕಾರಣ ಎಂದು ಗುಣಗಾನ ಮಾಡಿದ ರೈತ

ವಿಜಯಪುರ: ಅಬ್ಬಾ(Wow)! ಈ ಗೆಣಸು(Sweet Potateo) ಬೆಳೆದ(Height) ಪರಿ ನೋಡಿದರೆ ಎಲ್ಲರೂ(Everyone) ಅಚ್ಚರಿ(Wonder) ಪಡುವುದು ಗ್ಯಾರಂಟಿ.  ಈ ಕೆಂಗೆಣಸನ್ನು ಕಂಡು ಸ್ವತಃ ರೈತನೇ ಹೈರಾಣಾಗಿದ್ದಾನೆ. 

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದ ಪ್ರಗತಿಪರ ರೈತ ಸಿದ್ರಾಮಯ್ಯ ದಾ ರೋಣಿಹಾಳಮಠ ಅವರ ತೋಟದಲ್ಲಿ ಬೆಳೆದಿರುವ ಈ ಗೆಣಸು ಅನ್ನದಾತರನ್ನಷ್ಟೇ ಅಲ್ಲ, ಎಲ್ಲರನ್ನೂ ಅಚ್ಚರಿ ಉಂಟು ಮಾಡಿದೆ.  ಇದಕ್ಕೆಲ್ಲ ಇಲ್ಲಿಯ ಭೂಮಿಯ ಫಲವತ್ತತೆ ಕಾರಣ.  ಈ ಭೂಮಿ ಇಷ್ಟೋಂದು ಫಲವತ್ತಾಗಲು ಈ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಮತ್ತು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಸ್ಥಳೀಯ ಬಬಲೇಶ್ವರ ಕಾಂಗ್ರೆಸ್ ಶಾಸಕರಾಗಿರುವ ಎಂ. ಬಿ. ಪಾಟೀಲ ಅವರೇ ಕಾರಣ ಎಂದು ರೈತ ಸಿದ್ರಾಮಯ್ಯ ದಾ. ರೋಣಿಹಾಳಮಠ ಸಂತಸದಿಂದ ಗುಣಗಾನ ಮಾಡಿದ್ದಾರೆ.

ಕಾಖಂಡಕಿ ಗ್ರಾಮದಲ್ಲಿ ಬೆಳೆದಿರುವ ಬೃಹತ್ ಉದ್ದವಾದ ಗೆಣಸು

ಈ ಗೆಣಸು ಇಷ್ಟೋಂದು ಉದ್ದ ಬೆಳೆದಿರುವ ಸುದ್ದಿ ತಿಳಿದ ರೈತರು ರೈತನ ಸಿದ್ರಾಮಯ್ಯ ದಾ. ರೋಣಿಹಾಳಮಠ ಅವರ ಹೊಲಕ್ಕೆ ದೌಡಾಯಿಸಿದ್ದಾರೆ.  ಅಲ್ಲದೇ, ಅದರ ರುಚಿ ನೋಡಲು ನಾ ಮುಂದು, ತಾ ಮುಂದು ಎಂದು ಎಲ್ಲರೂ ಅದನ್ನು ತುಂಡು ತುಂಡಾಗಿ ಮುರಿದು ತಿಂದು ಖುಷಿಪಟ್ಟಿದ್ದಾರೆ.  ಗೆಣಸು ಇಷ್ಟೋಂದು ಪ್ರಮಾಣದಲ್ಲಿ ಬೆಳೆದಿರುವುದು ಈ ಭಾಗದಲ್ಲಿ ಇದೇ ಮೊದಲ ಬಾರಿಯಾಗಿದ್ದು, ಅದನ್ನು ಪ್ರದರ್ಶನ ಮತ್ತು ವೈಜ್ಞಾನಿಕವಾಗಿ ಸಂಶೋಧನೆಗೆ ಒಳಪಡಿಸುವ ಬದಲು ನಮ್ಮೂರಲ್ಲಿ ಇಷ್ಟೋಂದು ಉದ್ದವಾದ ಗೆಣಸು ಬೆಳೆದಿದೆ ಎಂದು ಗಬಗಬನೆ ರುಚಿ ಸವಿದಿದ್ದು, ಇವರ ಸಂತಸಕ್ಕೆ ಸಾಕ್ಷಿಯಾಗಿದೆ.

ಅಂದಹಾಗೆ ಈ ಗೆಣಸಿನ ಉದ್ದ 5 ಅಡಿ 3 ಇಂಚು.  ಭೂತಾಯಿಗೆ ಅಕ್ಕರೆಯಿಂದ ನಿರುಣಿಸಿದರೆ ಸಕ್ಕರೆಯಂಥ ಫಲ ನೀಡುತ್ತಾಳೆ ಎಂಬುದಕ್ಕೆ ಈ ಬೃಹತ್ ಉದ್ದದ ಗೆಣಸು ಸಾಕ್ಷಿಯಾಗಿದೆ.

Leave a Reply

ಹೊಸ ಪೋಸ್ಟ್‌