ವಿಜಯಪುರ: ಪಂಚಮಸಾಲಿ ಸಮಾಜ(Panchanasali Community) ನಡೆಸುತ್ತಿರುವ 2ಎ ಮೀಸಲಾತಿ(2A Reservation) ಹೋರಾಟಕ್ಕೆ ವಿಜಯಪುರ ನಗರ(Vijatapura Vity) ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basabagouda Patil Yatbal) ನಿಸ್ವಾರ್ಥ ಸೇವೆಯ ಮೂಲಕ ಶಕ್ತಿ ತುಂಬಿದ್ದಾರೆ(Given Strength)ಎಂದು ಪಂಚಮಸಾಲಿ ಸಮಾಜದ ಮುಖಂಡರಾದ ಎಂ. ಎಸ್. ರುದ್ರಗೌಡ, ಪಂಚಮಸಾಲಿ ಮಹಾಸಭಾ ವಿಜಯಪುರ ಜಿಲ್ಲಾಧ್ಯಕ್ಷ ಬಿ. ಎಂ. ಪಾಟೀಲ, ಶಂಕರಗೌಡ ಬಿರಾದಾರ ಹೇಳಿದ್ದಾರೆ.
ವಿಜಯಪುರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಮಾನಗಳ ಇತಿಹಾಸವಿರುವ ಲಿಂಗಾಯತ ಪಂಚಮಸಾಲಿ ಸಮುದಾಯದ ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಾಮಾಜಿಕ ನ್ಯಾಯವನ್ನು ಕೊಡಿಸಲು ಕೂಡಲ ಸಂಗಮ ಲಿಂಗಾಯಿತ ಪಂಚಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಳವಳಿ ಆರಂಭಿಸಿದ್ದಾರೆ. ಐತಿಹಾಸಿಕ 2ಎ ಮೀಸಲಾತಿ ಚಳವಳಿಯಲ್ಲಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಪಾಲ್ಗೊಂಡಿದ್ದು ಈವರೆಗೂ ಹೋರಾಟ ಜೀವಂತವಾಗಿರಲಿಕ್ಕೆ ಸಾಕ್ಷಿ ಎಂದು ಹೇಳಿದರು.
ಶ್ರೀಗಳು ಆರಂಭಿಸಿರುವ ಈ ಬೃಹತ್ ಹೋರಾಟಕ್ಕೆ ಸಮಾಜದ ಒತ್ತಾಯಕ್ಕೆ ಮಣಿದ ಯಾತ್ನಾಳ ಅವರು ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದಾರೆ ಮತ್ತು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಮಾಜದ ನೇತೃತ್ವ ವಹಿಸಿದ್ದಾರೆ. ಇಲ್ಲದಿದ್ದರೆ, ಈ ಚಳವಳಿಯನ್ನೇ ಕೆಲವು ಕೆಲವು ಸ್ವಾರ್ಥ ರಾಜಕಾರಣಿಗಳು ಬಂಡವಾಳ ಮಾಡಿಕೊಂಡು ಹೋರಾಟವನ್ನು ಹಾಡಹಗಲೇ ಮಣ್ಣುಪಾಲು ಮಾಡುತ್ತಿದ್ದರು ಎಂದು ಅವರು ಹೇಳಿದರು.
ಶಾಸಕ ಯಾತ್ನಾಳ ಅವರ ನಿಸ್ವಾರ್ಥ ಬೆಂಬಲದಿಂದ ಪಂಚಮಸಾಲಿ ಸಮಾಜಕ್ಕೆ ರಾಷ್ಟ್ರದಲ್ಲಿಯೇ ದೊಡ್ಡ ಹೆಸರು ಬಂದಿದೆ ಹೊರತು ಯಾತ್ನಾಳ ಅವರ ರಾಜಕೀಯ ಬದುಕಿಗಾಗಿ ಅಲ್ಲ ಎಂಬುದನ್ನು ಅವರ ರಾಜಕೀಯ ವಿರೋಧಿಗಳು ಅರ್ಥಮಾಡಿಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕಿನ ಅಧ್ಯಕ್ಷರೆಂದು ಹೇಳಿಕೊಂಡು ಅನೇಕರು ಮುಗ್ದ ಸಮಾಜವನ್ನು ಹಾಗೂ ಸರಕಾರಗಳನ್ನು ಬ್ಲ್ಯಾಕಮೇಲ್ ಮಾಡುತ್ತ ತಾವು ಮಾತ್ರ ಆರ್ಥಿಕವಾಗಿ ಪ್ರಬಲರಾಗಿ ಸಮಾಜವನ್ನು ಸಂಘಟನೆ ಹೆಸರಲ್ಲಿ ಶೋಷಣೆ ಮಾಡುತ್ತಿದ್ದಾರೆ. ಲಿಂ. ಎಸ್. ಅರ್. ಕಾಶಪ್ಪನವರ, ಹನುಮಾನಲ್ ಮೇಸ್ಟ್ರು ಹಾಗೂ ಅನೇಕ ಗಣ್ಯರು 1994ರಲ್ಲಿ 2ಎ ಮೀಸಲಾತಿಗಾಗಿ ಪಂಚಮಸಾಲಿ ಸಂಘಟನೆಯನ್ನು ಆರಂಭಿಸಿದ್ದಾರೆ. ಅವರು 2003ರಲ್ಲಿ ಲಿಂಗಕ್ಯರಾದ ನಂತರ ಮೂಲ ಉದ್ದೇಶವನ್ನು ಕಡೆಗಣಿಸಿ ಚುನಾವಣೆ ಬಂದಾಗ ಮಾತ್ರ ಬಳಸಿಕೊಳ್ಳುವ, ಆಳುವ ಸರಕಾರಗಳನ್ನು ಸ್ವಾರ್ಥಕ್ಕಾಗಿ 2ಎ ವಿಷಯವನ್ನು ಹೋರಾಟದ ಹೆಸರಲ್ಲಿ ಶೋಷಣೆ ಮಾಡುತ್ತಾ ಬಂದಿದ್ದಾರೆ ಹೊರತು ಮೀಸಲಾತಿಯ ನ್ಯಾಯವನ್ನು ಕೊಡಿಸಲಿಲ್ಲ ಎಂದು ಅವರು ದೂರಿದರು.
ಈ ಶೋಷಣೆಗಳ ಕಾರಣದಿಂದ ಸಮಾಜದ ಮಕ್ಕಳ ಶಿಕ್ಷಣಕಾಗಿ ಮೀಸಲಾತಿಗಾಗಿ ಕಳೆದ 25 ವರ್ಷಗಳಿಂದ ಹೋರಾಟ ಜನಾಂದೋಲನ ಆಗಲಿಲ್ಲ. ಈ ಹಿನ್ನೆಲೆಯಲ್ಲಿ 2019ರಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾದಾಗ ಕೂಡಲ ಸಂಗಮ ಶ್ರೀಗಳು ಸಮಾಜದ ಋಣವನ್ನು ಸತತವಾಗಿ ಅನುಭವಿಸುತ್ತ ಬಂದಿರುವ ಯಡಿಯೂರಪ್ಪ ಅವಧಿಯಲ್ಲಿ ಮಾತ್ರ ಈ ಸಮಾಜಕ್ಕೆ ಮಿಸಲಾತಿ ಪಡೆಯಲೇಬೇಕೆಂದು ಮತ್ರು ಕೊಟ್ಟ ಮಾತನ್ನು ಯಡಿಯೂರಪ್ಪ ತಪ್ಪಿದ ಕಾರಣ ಹಾಗೂ ವಿನಯ ಕುಲಕರ್ಣಿ ಅವರ ಸಲಹೆಯಂತೆ ಪಾದಾಯಾತ್ರೆ ನಿರ್ಧಾರ ಘೋಷಿಸಿದ್ದರು. ಈ ಸಂದರ್ಭದಲ್ಲಿ ವಿಜಯಾನಂದ ಕಾಶಪ್ಪನವರು ಒಬ್ಬರೇ ಆರಂಭದಲ್ಲಿ ಜವಾಬ್ದಾರಿ ವಹಿಸಿಕೊಂಡರು ಎಂದು ಅವರು ತಿಳಿಸಿದರು.
ಶಾಸಕ ಯತ್ನಾಳರಿಂದ ಸಮಾಜಕ್ಕೆ ಆನೆ ಬಲ
ಈ ಮಧ್ಯೆ, ಪಾದಯಾತ್ರೆ ರದ್ದು ಮಾಡಿದ್ದೇನೆ ಎಂದು ಯಡಿಯೂರಪ್ಪ ಅವರಿಗೆ ಸುಳ್ಳು ಹೇಳಿ ಕೆಲವರು ಪಾದಾಯಾತ್ರೆ ಹಿಂದಿನ ದಿನ ಜ. 13 ರಂದು ಮಂತ್ರಿಗಳಾದರು. ಇಡೀ ರಾಜ್ಯದ ಪಂಚಮಸಾಲಿಗಳು ಒಬ್ಬ ವ್ಯಕ್ತಿಯನ್ನು ಮಂತ್ರಿ ಮಾಡಲು ಪಾದಯಾತ್ರೆಯನ್ನು ಶ್ರೀಗಳು ರದ್ದುಗೊಳಿಸಿದ್ದಾರೆ ಎಂಬ ತಪ್ಪು ತಿಳುವಳಿಕೆಯಿಂದಾಗಿ ಸಮಾಜದಲ್ಲಿ ದೊಡ್ಡ ಗೊಂದಲ ಉಂಟಾಯಿತು. ಇದರಿಂದ ಶ್ರೀಗಳ ಪ್ರಾಮಾಣಿಕ ಹೋರಾಟದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದರು. ಇಂಥ ಕಠಿಣ ಪರಿಸ್ಥಿತಿಯಲ್ಲಿ ಪಕ್ಷದ ಯಾವೊಬ್ಬ ಶಾಸಕ ಅಥವಾ ಸಂಸದರಾಗಲಿ ಬೆಂಬಲಿಸಲಿಲ್ಲ. ಕೇವಲ ಮಾಜಿ ಜನಪ್ರತಿನಿಧಿಗಳು ಬೆಂಬಲ ನೀಡಿದ್ದರು. ಜಗದ್ಗುರುಗಳ ಮನವಿ ಮತ್ತು ಸಮಾಜದ ಒತ್ತಡಕ್ಕೆ ಮಣಿದು ಬಡಮಕ್ಕಳ ಅಭಿವೃದ್ಧಿ ದೃಷ್ಟಿಯಿಂದ ಬಸನಗೌಡ ಪಾಟೀಲ ಯಾತ್ನಾಳ ಸಾಂಪ್ರಾದಾಯಿಕ ಸಿದ್ದೇಶ್ವರ ಜಾತ್ರೆಯನ್ನು ಮಗನಿಗೆ ಒಪ್ಪಿಸಿ, 2014ರ ಜ. 14 ರಂದು ಕಷ್ಟಕಾಲದಲ್ಲಿ ಪಾದಯಾತ್ರೆಯನ್ನು ಉದ್ಘಾಟಿಸಿ ತನು, ಮನ ಹಾಗೂ ಧನದ ಸಹಾಯ ನೀಡುವ ಮೂಲಕ ಹೋರಾಟಕ್ಕೆ ಶಕ್ತಿಯನ್ನು ತುಂಬಿದರು ಎಂದು ಅವರು ಹೇಳಿದರು.
ಯಾತ್ನಾಳ ಹಿಂದುತ್ವವಾದಿಗಳು. ಯಾವಾಗಲೂ ಸ್ವಜಾತಿ ಸಂಘಟನೆ ಬಂದವರಲ್ಲ. ನಮ್ಮೆಲ್ಲರ ಒತ್ತಡಕ್ಕೆ ಮಣಿದು ಹಾಗೂ ಯಾವುದೇ ಕಾರಣಕ್ಕೂ ಆಮಿಷ ಮತ್ತು ಒತ್ತಡಕ್ಕೆ ಮಣಿಯದೆ ಪಾದಾಯಾತ್ರೆಯನ್ನು ಬೆಂಗಳೂರಿನವರೆಗೂ ಮಾಡಲೇಬೇಕು ಎಂಬ ಷರತ್ತಿನೊಂದಿಗೆ ಹೋರಾಟದ ಸ್ವಾಗತ ಸಮಿತಿಯ ಅಧ್ಯಕ್ಷರಾದರು. ನಂತರ ಯತ್ನಾಳ, ಸಚಿವ ಸಿ. ಸಿ. ಪಾಟೀಲ, ಸಂಸದ ಕರಡಿ ಸಂಗಣ್ಣ, ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ ಅವರು ಬಹಿರಂಗವಾಗಿ ಪಾದಯಾತ್ರೆಗೆ ಬೆಂಬಲಿಸಿದರು ಎಂದು ಅವರು ಈ ಹಿಂದೆ ನಡೆದ ಘಟನೆಗಳನ್ನು ವಿವರಿಸಿದರು.
ಬೆಂಗಳೂರಿನಲ್ಲಿ ನಡೆದ ಪಾದಯಾತ್ರೆ ಸಮಾರೋಪ ಸಮಾಭದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಜನ ಸೇರಿದ್ದರು. ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಲು ಬಾಡಿಗೆ ಹಣವನ್ನು ಪಾವತಿಸದ ಹೊರತು ಅವಕಾಶ ನೀಡುವುದಿಲ್ಲ ಎಂದು ಕೆಲವರು ವಿಜಯೇಂದ್ರನ ಮಾತು ಕೇಳಿ ಸ್ಥಳಾವಕಾಶ ನಿರಾಕರಿಸಿದ್ದರು. ಆಗ ಸ್ವತಃ ಹಣವನ್ನು ಪಾವತಿಸಿ ಅರಮನೆ ಮೈದಾನದಲ್ಲಿ ಸಮಾಜದ ಶಕ್ತಿ ಪ್ರದರ್ಶನಕ್ಕೆ ಅವಕಾಶ ನೀಡಲಾಯಿತು. 23 ದಿನಗಳ ಕಾಲ ಜಗದ್ಗುರುಗಳು ಮತ್ತು ವಿಜಯಾನಂದ ಕಾಶಪ್ಪನವರ ಅವರು ಫ್ರಿಡಂ ಪಾರ್ಕಿನಲ್ಲಿ ಸತ್ಯಾಗ್ರಹ ಕುಳಿತಾಗ ಯಾವೊಬ್ಬ ಶಾಸಕರು ಅಧಿವೇಶನದಲ್ಲಿ ಸಮಾಜಕ್ಕೆ ನ್ಯಾಯ ಕೊಡಿಸಲು ದ್ವನಿ ಎತ್ತಲಿಲ್ಲ. ಆದರೆ, ಯತ್ನಾಳ ಅವರು, ಅಧಿಕಾರದ ಹಂಗನ್ನು ತೊರೆದು ಏಕಾಂಗಿಯಾಗಿ ಹೋರಾಟ ನಡೆಸಿ ವಿಧಾನಸೌಧದಲ್ಲಿ ಮೀಸಲಾತಿ ಬಗ್ಗೆ ಚರ್ಚೆಯಾಗಿ ಮೊದಲ ನ್ಯಾಯ ಪಡೆಯುವಲ್ಲಿ ಯಶಸ್ವಿಯಾದರು. ಸಭಾಧ್ಯಕ್ಷರ ಮನವಿ ಹಿನ್ನೆಲೆಯಲ್ಲಿ ಶ್ರೀಗಳು ಹೋರಾಟವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಂಡರು. ಹೀಗೆ 16 ತಿಂಗಳಿಂದ ಈ ಚಳವಳಿ ಇಂದಿಗೂ ಜೀವಂತ ಇದೆ. ಇದಕ್ಕೆ ಯತ್ನಾಳ ಅವರ ನಿಸ್ವಾರ್ಥದ ಬೆಂಬಲಕಾರಣ ಎಂಬುದುನ್ನು ಟೀಕಾಕಾರರು ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಶಾಸಕ ಯತ್ನಾಳ ಅವರು, 2004ರಲ್ಲಿ ಕೇಂದ್ರ ಒಬಿಸಿ ಮೀಸಲಾತಿಗಾಗಿ ರೇಲ್ವೆ ಮೂಲಕ ಸಮಾಜದ 254 ಮುಖಂಡರನ್ನು ಪ್ರಧಾನಿ ವಾಜಪೇಯಿ ಅವರಿಗೆ ಭೇಟಿ ಮಾಡಿಸಿ ಮನವಿ ಸಲ್ಲಿಸಿದ್ದಾರೆ. ಅಲ್ಲದೇ, ಸಂಸತ್ತಿನ ಮುಂಭಾಗದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಪ್ರತಿಮೆ ಸ್ಥಾಪನೆಗಾಗಿ ಪ್ರಧಾನಿಗಳ ಮನವೊಲಿಸಿ ಯಶಸ್ವಿಯಾಗಿದ್ದಾರೆ. ವಿಧಾನ ಸೌಧ ಅಧಿವೇಶನದ ಇತಿಹಾಸದಲ್ಲಿ ಮೊದಲ ಬಾರಿಗೆ ಪಂಚಮಸಾಲಿ, ಕುರುಬ, ವಾಲ್ಮೀಕಿ, ಕೋಳಿ ಇನ್ನಿತರ ಸಮುದಾಯಗಳ ಪರ ದ್ವನಿ ಎತ್ತಿ ಸರಕಾರದ ಗಮನ ಸೆಳೆದಿದ್ದು ಈಗ ಕಡತದಲ್ಲಿ ದಾಖಲಾಗಿದೆ. ಯಾವುದೇ ಮುಖ್ಯಮಂತ್ರಿ, ಮಂತ್ರಿ ಸ್ಥಾನಗಳನ್ನು ಬಯಸದೇ ಕಳೆದ16 ತಿಂಗಳಿಂದ ನಿರಂತರವಾಗಿ ಮೀಸಲಾತಿಗಾಗಿ ಬಡಮಕ್ಕಳ ಶಾಶ್ವತ ಅಭಿವೃದ್ಧಿಗೆ ಬೀದರಿನಿಂದ ಚಾಮರಾಜನಗರ ವರೆಗೆ ಚಳುವಳಿಯ ಮುಂದಾಳತ್ವ ವಹಿಸಿದ್ದಾರೆ. ಮಂತ್ರಿ ಬೇಡ, ಮೀಸಲಾತಿ ಕೊಡಿ ಎಂದ ಸಮಾಜಕ್ಕಾಗಿ ತ್ಯಾಗ ಮಾಡಿದ್ದಾರೆ. ಮೀಸಲಾತಿ ಹೋರಾಟವನ್ನು ಬೇರೆ ರಾಜಕಾರಣಿಗಳಂತೆ ಯತ್ನಾಳ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದರೆ ಇಂದು ಯಾತ್ನಾಳ ಅವರು ಯಡಿಯೂರಪ್ಪನವರ ನಂತರ ಎಂದೋ ಈ ರಾಜ್ಯದ ಸಿಎಂ, ಸಚಿವ ಅಥವಾ ರಾಜ್ಯಾಧ್ಯಕ್ಷರಾಗುತ್ತಿದ್ದರು. ಅಲ್ಲದೇ, ವಿಜಯಾನಂದ ಕಾಶಪ್ಪನವರ ಕಾಂಗ್ರೆಸ್ಸಿನಿಂದ ನಾಮನಿರ್ದೇಶನ ಎಂ ಏಲ್ ಸಿ ಆಗುತ್ತಿದ್ದರು. ಕೆಲವು ವಾರಗಳ ಹಿಂದೆ ಸಚಿವ ಸಿ. ಸಿ. ಪಾಟೀಲ, ಶಾಸಕ ಸಿದ್ದು ಸವದಿ , ಅರವಿಂದ ಬೆಲ್ಲದ, ಮಾಜಿ ಸಚಿವ ಎ. ಬಿ. ಪಾಟೀಲ ಹಾಗೂ ಕೂಡಲ ಸಂಗಮ ಶ್ರೀಗಳ ಸಮ್ಮುಖದಲ್ಲೇ ಮುಖ್ಯಮಂತ್ರಿಗಳಿಗೆ ನನಗೆ ಮಂತ್ರಿ ಸ್ಥಾನ ಬೇಡ, ನಮ್ಮ ಮಕ್ಕಳಿಗೆ ಮೀಸಲಾತಿ ಕೊಡಿ ಎಂದು ನೇರವಾಗಿ ಹೇಳಿ ಸಮಾಜಕ್ಕಾಗಿ ಮಂತ್ರಿ ಸ್ಥಾನವನ್ನೇ ತ್ಯಾಗ ಮಾಡಲು ಸಿದ್ಧರಾದ ಪ್ರಥಮ ಶಾಸಕ ಯಾತ್ನಾಳ ಎಂಬುದನ್ನು ಯಾರು ಮರೆಯಬಾರದು ಎಂದು ಅವರು ಹೇಳಿದರು.
ಸುರೇಶ ಬಿರಾದರರಿಗೆ ಸಮಾಜ ಮುಖಂಡರಿಂದ ಎಚ್ಚರಿಕೆ
ಇದೇ ವೇಳೆ ಇತ್ತೀಚೆಗೆ ಸಮುದಾಯದ ಮುಖಂಡ ಸುರೇಶ ಬಿರಾದಾರ ನೀಡಿರುವ ಹೇಳಿಕೆಯನ್ನು ಅವರು ಖಂಡಿಸಿದರು.
ನೀವು ಮತ್ತು ಭೀಮಾಶಂಕರ ಹದನೂರು ಯಾವಾಗಲು ಯಾತ್ನಾಳ ಅವರ ರಾಜಕೀಯ ವಿರೋಧಿಗಳು ಎಂಬುದು ವಿಜಯಪುರದ ಜನತೆಗೆ ಗೊತ್ತಿದೆ. ರಾಜಕೀಯ ದುರುದ್ದೇಶದ ಕಾರಣಕ್ಕೆ ಯಾತ್ನಾಳ ಅವರನ್ನು ಸೋಲಿಸಲು ನೀವು ಪ್ರಯತ್ನಿಸಿದ್ದು ಗೊತ್ತಿದೆ. ಆದರೂ ಸಹ ಗೌಡರು ಗೆದ್ದಿದ್ದಾರೆ. ಅವರನ್ನು ಪಕ್ಷದಿಂದ ಕೈಬಿಡಲು ಹೈಕಮಾಂಡ್ ಗೆ ನಿರಂತರವಾಗಿ ಕುತಂತ್ರ ಮಾಡುತ್ತಿದ್ದರೂ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಘಟಕಗಳ ಮನವನ್ನು ಯತ್ನಾಳ ಗೆದ್ದಿದ್ದಾರೆ. ಅವರನ್ನು ಸಾಮಾಜಿಕವಾಗಿ ತುಳಿಯಲು ನಿರಾಣಿ ನೇತೃತ್ವದಲ್ಲಿ ಮುಗ್ದ ಸ್ವಾಮಿಗಳನ್ನು ಬಳಸಿಕೊಂಡು ಮತ್ತೊಂದು ಪೀಠ ಮಾಡಿ ಸಮಾಜವನ್ನು ಒಡೆಯಲು ಪ್ರಯತ್ನಿಸಿ ಮೂರಾಬಿಟ್ಟಿಯಾಗಿದ್ದೀರಿ. ಇದುವರೆಗೂ ನೀವು ರಾಜಕೀಯವಾಗಿ ಗೌಡರ ವಿರುದ್ಧ ಎಷ್ಟೇ ಟೀಕಿಸಿದರೂ ಸಮಾಜ ಮತ್ತು ನಾವು ನಿಮ್ಮನ್ನು ಎಂದೂ ಪ್ರಶ್ನಿಸಿಲ್ಲ. ನಿಮ್ಮ ಟೀಕೆಗಳಿಗೆ ನೀವು ಸ್ವತಂತ್ರರು. ಆದರೆ, ಮೀಸಲಾತಿ ಹೋರಾಟದ ಹೆಸರಲ್ಲಿ ಯತ್ನಾಳರನ್ನು ಹಾಗೂ ಮೀಸಲಾತಿಯ ಯಾವುದೇ ಹೋರಾಟಗಾರರನ್ನು ಟೀಕಿಸಿದರೆ ನಾವು ಸುಮ್ಮನಿರುವುದಿಲ್ಲ. ನಿಮಗೆ ಸಮಾಜದ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ನಮ್ಮ ಸಮಾಜದ ಸಚಿವರನ್ನು ಕರೆತಂದು ಅವರ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ. 2ಎ ಮೀಸಲಾತಿಯನ್ನು ಕೊಡಿಸಲು ಬಹಿರಂಗವಾಗಿ ಬೆಂಬಲಿಸಿ. ಅಲ್ಲದೇ, ನಮ್ಮ ಶಾಸಕರು ಯತ್ನಾಳರಂತೆ ಅಧಿವೇಶನದಲ್ಲಿ ದ್ವನಿ ಎತ್ತಿದರೆ ನಾವು ಅವರ ನಾಯಕತ್ವದಲ್ಲಿಯೇ ಹೋರಾಟ ಮಾಡುತ್ತೆವೆ ಎಂದು ಅವರು ಸವಾಲು ಹಾಕಿದರು.
ಸಮಾಜದ ಅನ್ನತಿಂದು ಸಮಾಜದ ಮಕ್ಕಳ ಮೀಸಲಾತಿ ಹೋರಾಟಕ್ಕೆ ಮೋಸ ಮಾಡುವ ರಾಜಕಾರಣಿಗಳ ಮಾತನ್ನು ಕೇಳಿ ಯತ್ನಾಳರನ್ನು ಮೀಸಲಾತಿ ವಿಚಾರದಲ್ಲಿ ಟೀಕಿಸುವುದನ್ನು ಬಿಡಬೇಕು. 2ಎ ಮೀಸಲಾತಿ ಹೋರಾಟ ನಡೆದ ಮೇಲೆ ಇಂದು ಕೋಟ್ಯಾಂತರ ಪಂಚಮಸಾಲಿಗಳು ಕೇವಲ ಯಾತ್ನಾಳ ಮತ್ತು ವಿಜಯಾನಂದ ಕಾಶಪ್ಪನವರ, ಎಚ್. ಎಸ್. ಶಿವಶಂಕರ, ಸಿ. ಸಿ. ಪಾಟೀಲ, ಸಿದ್ದು ಸವದಿ , ಅರವಿಂದ ಬೆಲ್ಲದ, ಎ. ಬಿ. ಪಾಟೀಲ, ಈರಣ್ಣ ಕಡಾಡಿ, ಕರಡಿ ಸಂಗಣ್ಣ, ರವಿಕಾಂತ ಪಾಟೀಲ ಮುಂತಾದವರನ್ನು ಮಾತ್ರ ಸಮಾಜ ನಂಬಿದೆ ಎಂಬುದನ್ನು ಮರೆಯಬಾರದು ಎಂದು ಅವರು ಹೇಳಿದರು.
2ಎ ಮೀಸಲಾತಿ ವಿಚಾರದಲ್ಲಿ ಯತ್ನಾಳ ಮತ್ತು ಹೋರಾಟದಲ್ಲಿರುವ ಯಾವುದೇ ನಾಯಕರನ್ನು ಅವರ ಬೆಳವಣಿಗೆ ಸಹಿಸದೇ ಟೀಕಿಸಿದರೆ ನಿಮ್ಮ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ. ನಿಮ್ಮಂಥ ಸಣ್ಣ ವ್ಯಕ್ತಿಗಳಿಗೆ ಉತ್ತರ ಕೊಡುವುದು ಬೇಡ ಎಂದು ನಾವು ಈವರೆಗೆ ಸುಮ್ಮನಿದ್ದೆವು. ಆದರೆ, ಯತ್ನಾಳರಿಗೆ ಬೆಂಬಲ ವ್ಯಕ್ತಪಡಿಸಲು ಕೋಟ್ಯಂತರ ಪಂಚಮಸಾಲಿಗಳು ಅವರ ಜೊತೆಗಿದ್ದೆವೆ ಎಂಬುದನ್ನು ತೋರಿಸಲು ಈಗ ಬೆಂಬಲ ನೀಡುತ್ತಿರುವುದಾಗಿ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶ್ರೀಶೈಲ ಬುಕ್ಕಾಣಿ, ಪ್ರೊ. ವಿ. ಎಚ್. ಬಿರಾದಾರ, ಕಾಮರಾಜ ಬಿರಾದಾರ, ಮಲ್ಲಿಕಾರ್ಜುನ ಹಂಗರಗಿ, ಸಂಜು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.