Cow Care: ಉರಿ ಬಿಸಿಲಿನಲ್ಲಿ ಮಗನ ಜೊತೆ ಸೇರಿ ಗೋಮಾತೆಯ ಬಾಯಾರಿಕೆ ನೀಗಿಸಿದ ತಾಯಿ

ವಿಜಯಪುರ: ಬೇಸಿಗೆಯ(Summer) ಬಿಸಿಲು(Heat) ಜೋರಾಗುತ್ತಿದೆ. ಬಿಸಿಲಿನ ಝಳಕ್ಕೆ ಮೇಲೆ ತಲೆ ಸುಡುತ್ತಿದ್ದ ಕೆಳಗೆ ಇಳೆ(Earth) ಕಾಯುತ್ತಿದೆ. ಎಷ್ಟೇ ನೀರು(Water) ಕುಡಿದರೂ ಕಡಿಮೆ ಎನಿಸುವುದು ಉರಿ ಬಿಸಿಲಿನ ವಿಶೇಷ. ಇಂಥ ಪರಿಸ್ಥಿತಿಯಲ್ಲಿ(Situation) ಜಾನುವಾರುಗಳ ಪಾಡಂತೂ ಹೇಳತೀರದು.

ರೈತರು ಸಾಕಿರುವ ಜಾನುವಾರುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ಜೋಪಾನ ಮಾಡುತ್ತಾರೆ. ಸಮಯಕ್ಕೆ ಸರಿಯಾಗಿ ಮೇವು ಹಾಕಿ, ನೀರು ಕುಡಿಸುತ್ತಾರೆ. ಆದರೆ, ಬೇಸಿಗೆಯಲ್ಲಿ ಬಿಡಾಡಿ ದನಗಳ ಪಾಡಂತೂ ಹೇಳತೀರದು. ಜಲಕ್ಕಾಗಿ ಅವುಗಳು ಪರದಾಡುವ ಪರಿಸ್ಥಿತಿ ಎಂಥವರಲ್ಲೂ ಕರುಣೆ ಮೂಡಿಸುತ್ತದೆ.  ಇಂಥ ಬೀಡಾಡು ಆಕಳ ಪರಿಸ್ಥಿತಿ ಕಂಡು ತಾಯಿಯೊಬ್ಬಳು ತನ್ನ ಮಗನ ಜೊತೆ ಸೇರಿ ಸ್ಪಂದಿಸಿ ಧನ್ಯತೆ ಮೆರೆದಿದ್ದಾರೆ.

ಬಾಯಾರಿದ ಹಸುವಿಗೆ ನೀರು ಕುಡಿಸಿದ ತಾಯಿ, ಮಗ

ಈ ಘಟನೆ ನಡೆದಿದ್ದು ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಶ್ರೀ ಶಿಖರ ಶಿಂಗಣಾಪುರ ಮಹಾದೇವ ದೇವಸ್ಥಾನದ ಗುಡ್ಡದಲ್ಲಿ. ಸೋಮವಾರ ಮಹಾದೇವನ ವಾರ. ಈ ದಿನ ಇಲ್ಲಿ ದೇವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಬರುತ್ತಾರೆ. ಈಗ ಹೇಳಿ ಕೇಳಿ ಮದುವೆಗಳೂ ನಡೆಯುತ್ತಿರುವುದರಿಂದ ಕರ್ನಾಟಕ,ಮಹಾರಾಷ್ಟ್ರ ಸೇರಿದಂತೆ ನಾನಾ ರಾಜ್ಯಗಳಿಂದ ನವಜೋಡಿಗಳೂ ಈ ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಅಷ್ಟೇ ಅಲ್ಲ, ದೇವರ ದರ್ಶನ, ಹರಕೆ ತೀರಿಸಲು ಕುಟುಂಬಗಳ ಸಮೇದ ಮಹಾದೇವ ಭಕ್ತರು ನಾನಾ ವಾಹನಗಳಲ್ಲಿ ಇಲ್ಲಿಗೆ ಬರುತ್ತಿದ್ದಾರೆ.

ವಿಡಿಯೋ ನೋಡಿ:

ಹೀಗೆ ಶ್ರೀ ಶಿಖರ ಶಿಂಗಣಾಪುರ ಮಹಾದೇವ ದರ್ಶನಕ್ಕೆ ಸಂಬಂಧಿಕರೊಂದಿಗೆ ಬಂದಿದ್ದ ತಾಯಿ ತಮ್ಮ ಬಳಿಯಿದ್ದ ಪ್ಕಾಸ್ಟಿಕ್ ಬಾಟಲಿಯಲ್ಲಿದ್ದ ನೀರನ್ನು ಕುಡಿಯುತ್ತಿದ್ದರು. ಬಿಸಿಲಿನ ಝಳ ಎಂಥವರನ್ನೂ ಹೈರಾಣಾಗಿಸಿತ್ತು. ಆಗ ಈ ಮಹಿಳೆಯ ಹಸುವೊಂದು ಬಂದು ಮಗನೊಂದಿಗೆ ನಿಂತಿದ್ದ ಮಹಿಳೆಯನ್ನು ನೋಡುತ್ತಿತ್ತು. ಮಾತು ಬಾರದ ಮಕ್ಕಳ ಭಾಷೆಯನ್ನು ಅವುಗಳ ಕಣ್ಣಿನಿಂದಲೇ‌ ಅರ್ಥ ಮಾಡಿಕೊಳ್ಳುವ ತಾಯಿಗೆ ಆ ಹಸುವಿನ ಕಣ್ಣುಗಳನ್ನು ನೋಡಿದ ತಕ್ಷಣ ಅದರ ಆಸೆ‌ ಗೊತ್ತಾಗಿದೆ. ಕೂಡಲೇ ತನ್ನ ಕೈಯಲ್ಲಿದ್ದ ನೀರಿನ ಬಾಟಲಿಯನ್ನು ಮಗನ‌ ಕೈಗೆ ನೀಡಿದ್ದಾಳೆ. ತನ್ನ ಎರಡು ಕೈಗಳನ್ನು ಜೋಡಿಸಿ ಬೊಗಸೆ ಮಾಡಿ ಹಸುವಿನ ಬಾಯಿಗೆ ಹಿಡಿದಿದ್ದಾರೆ. ತಾಯಿಯ ಆಂಗಿಗ ಭಾಷೆಯನ್ನು ಅರ್ಥೈಸಿಕೊಂಡ‌ ಮಗ ಆ ಬೊಗಸೆಯಲ್ಲಿ ನೀರು ಹಾಕಿದ್ದಾನೆ. ಆಗ ಹಸು ನೀರು ಕುಡಿದಿದೆ. ಆಗ ತಾಯಿ ಮಗನಿಗೆ ಹೇಳಿ ಇನ್ನಷ್ಟು ಬಾಟಲಿ ನೀರು ಖರೀದಿಸಿ ಆ ಆಕಳಿಗೆ ನೀರು ಕುಡಿಸಿದ್ದಾಳೆ. ಅದರಲ್ಲಿ ಅಲ್ಪ‌ ಪ್ರಮಾಣದ ನೀರು ಕೆಳಗೂ ಹರಿದಿದೆ. ನಂತರ ಆ ತಾಯಿ ಬಾಟಲಿಗಳಲ್ಲಿನ ನೀರು ಖಾಲಿಯಾದ ತಕ್ಷಣ ತನ್ನ ಎರಡೂ ಕೈಗಳಿಂದ ಆಕಳನ್ನು ಮುಟ್ಟಿ ನಮಸ್ಕರಿಸಿ ಅಲ್ಲಿಂದ ತೆರಳಿದ್ದಾಳೆ.

ಭಾರತೀಯರಲ್ಲಿ ಅದರಲ್ಲೂ ಮಹಿಳೆಯಲ್ಲಿ ಆಕಳುಗಳೆಂದರೆ ದೇವರ ಸ್ವರೂಪ ಎಂದು ಪೂಜಿಸುತ್ತಾರೆ. ಇನ್ನು ದೇವಸ್ಥಾನದಲ್ಲಿ ಆಕಳುಗಳು ಕಂಡೆ ನಮಸ್ಕರಿಸಿ ಆಹಾರ ಖುಷಿ ಪಡುತ್ತಾರೆ. ಅದರಲ್ಲೂ ಆಕಳಿಗೆ ಈ ಮಹಿಳೆ ತೋರಿದ ಪ್ರೀತಿ ಹಸುಪ್ರೇಮಕ್ಕೆ ಸಾಕ್ಷಿಯಾಗಿದೆ.

Leave a Reply

ಹೊಸ ಪೋಸ್ಟ್‌