Football Glory: ಬಸವ ನಾಡಿನಲ್ಲಿ ಫುಟಬಾಲ್ ಕ್ರೀಡೆಯನ್ನು ಗತವೈಭವಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ- ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ(Vijayapura District) ಫುಟವಬಾಲ್(Foot Ball) ಒಂದು ಕಾಲದಲ್ಲಿ ಎಲ್ಲ ಕ್ರೀಡೆಗಳಿಗಿಂತ ಹೆಚ್ಚು ಜನಪ್ರೀಯವಾಗಿತ್ತು.  ಇಲ್ಲಿನ ಪಂದ್ಯಗಳನ್ನು ನೋಡಲು ಬೇರೆ ಕಡೆಗಳಿಂದ ಫುಟಬಾಲ್ ಅಭಿಮಾನಿಗಳು(Fans) ಬರುತ್ತಿದ್ದರು.  ಅಷ್ಟರ ಮಟ್ಟಿಗೆ ಫುಟಬಾಲ್ ಕ್ರೇಜ್(Craze) ಜನರಲ್ಲಿತ್ತು.  ಆ ಗತವೈಭವವನ್ನು ಮರಳಿ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಚಿವ ಮತ್ತು ಫುಟಬಾಲ ಸಂಸ್ಥೆಯ ವಿಜಯಪುರ ಜಿಲ್ಲಾಧ್ಯಕ್ಷ ಅಪ್ಪು ಪಟ್ಟಣಶೆಟ್ಟಿ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿದರು

ವಿಜಯಪುರ ನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಫುಟ್ಬಾಲ್ ಸಂಸ್ಥೆ ವತಿಯಿಂದ 2ನೇ ಮಿನಿ ಓಲಿಂಪಿಕ್ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳುತ್ತಿರುವ ವಿಜಯಪುರ ಜಿಲ್ಲೆಯ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಸಮವಸ ವಿತರಿಸಿ ಮತ್ತು ಸಮವಸ್ತ್ರ ಅನಾವಣರ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ಈ ಹಿಂದೆ ಫುಟಬಾಲ್ ಉಚ್ಛ್ರಾಯ ಸ್ಥಿತಿಯಲ್ಲಿದ್ದ ವಿಜಯಪುರದಲ್ಲಿ ನಂತರದ ದಿನಗಳಲ್ಲಿ ಕ್ರಿಕೆಟ್ ಹೆಚ್ಚು ಜನಪ್ರೀಯತೆ ಪಡೆದುಕೊಂಡಿತು.  ಇದರಿಂದಾಗಿ ಕಾಲ್ಚೆಂಡಿನಾಟಕ್ಕೆ ಜನರ ಆಸಕ್ತಿ ಕಡಿಮೆಯಾಯಿತು.  ಆದರೂ, ಫುಟಬಾಲ್ ಗೆ ಹೆಸರಾಗಿರುವ ಬಸವ ನಾಡಿನಲ್ಲಿ ಮತ್ತೆ ಜನಪ್ರೀಯತೆ ತಂದು ಕೊಡುವುದಾಗಿ ಅವರು ತಿಳಿಸಿದರು.

 

ಸಂಸ್ಥೆಯ ಅಧ್ಯಕ್ಷನಾದ ಬಳಿಕ ನಾನು ಫುಟಬಾಲ್ ಆಸಕ್ತರನ್ನು ಗುರುತಿಸಿ ಅವರಿಗೆ ಸರಿಯಾದ ಮಾರ್ಗದರ್ಶನದ ನೀಡುವುದರ ಜೊತೆಯಲ್ಲಿಯೇ ಅದರ ಕಡೆ ಆಸಕ್ತಿ ಬೆಳೆಸಲು ಪ್ರಯತ್ನ ಮಾಡಿದ್ದೇನೆ.  ನನ್ನ ಜೊತೆಗೆ ನಗರದ ಬಹುತೇಕರು ಕೈಜೋಡಿಸಿದ್ದಾರೆ.  ಇನ್ನೂ ಹೆಚ್ಚಿನ ಜನರು ಪ್ರೋತ್ಸಾಹ ನೀಡಬೇಕು.  ಈಗಾಗಲೇ ನಗರದ ಉದ್ಯಮಿ ರಾಜು ಬಿಜ್ಜರಗಿ, ಆಬೀದ ಸಂಗಮ, ಉಮೇಶ ಕಾರಜೋಳ, ವಿವೇಕ ಹರಕಾರಿ ಅವರಂಥ ಫುಟಬಾಲ್ ಪ್ರೀಯರು ಕ್ರೀಡಾಪಟುಗಳಿಗೆ ಸಮವಸ ವಿತರಿಸುವ ಮೂಲಕ ಸ್ಪಂದಿಸಿದ್ದಾರೆ.  ಬಸವ ನಾಡಿನ ಕ್ರೀಡಾಪಟುಗಳು ತಮ್ಮಲ್ಲಿರುವ ಕೌಶಲ್ಯದ ಮೂಲಕ ಅತ್ಯುತ್ತಮ ಆಟ ಪ್ರದರ್ಶಿಸಿ ವಿಶ್ವಮಟ್ಟದಲ್ಲಿ ಹೆಸರು ಮಾಡಲಿ ಎಂದು ಹೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  ಪ್ರಾಯೋಜಕರಾದ ರಾಜು ಬಿಜ್ಜರಗಿ, ಆಬೀದ ಸಂಗಮ, ಉಮೇಶ ಕಾರಜೋಳ,  ವಿವೇಕ ಹರಿಕಾರಿ, ಸತೀಶ ಬಾಗಿ ಮುಂತಾದವರು ಉಪಸ್ಥಿತರಿದ್ದರು.

ಸಂಘಟಕರಾದ ಮಿಲಿಂದ ಚಂಚಲಕರ, ಕಷ್ಣಾ ಗಾಡಿವಡ್ಡರ, ಡುಮ್ಮ ದರ್ಗಾ, ಸತೀಶ ಪಾಟೀಲ, ಸುಂದರ ಹಲವಾಯಿ, ಅನೀಲ ಹರನಾಳ, ಜಗದೀಶ ಮುಚ್ಚಂಡಿ, ಸನ್ನಿ ಗವಿಮಠ, ವಿನೋದ ಮಣೂರ ಮುಂತಾದವರು ಭಾಗವಹಿಸಿದ್ದರು.

Leave a Reply

ಹೊಸ ಪೋಸ್ಟ್‌