Nurses Service: ಕೊರೊನಾ ಸಮಯದಲ್ಲಿ ನರ್ಸುಗಳು ಸಲ್ಲಿಸಿದ ಸೇವೆ ಸ್ಮರಣೀಯ- ಎಂ ಎಲ್ ಸಿ ಸುನೀಲಗೌಡ ಪಾಟೀಲ

ವಿಜಯಪುರ: ಕೊರೊನಾ ಸಮಯದಲ್ಲಿ(Corona Time) ಪ್ರಾಣದ ಹಂಗು ತೊರೆದು ರೋಗಿಗಳನ್ನು(Patients) ಉಪಚರಿಸಿ(Treatment), ಗುಣಮುಖರನ್ನಾಗಿ(Cured) ಮಾಡಿದ ಆರೊಗ್ಯ ಸಿಬ್ಬಂದಿಯನ್ನು ಶುಶ್ರೂಷಕರು(Nurses) ಮುಂಚೂಣಿಯಲ್ಲಿದ್ದಾರೆ ಎಂದು ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.

ಎಂ ಎಲ್ ಸಿ ಸುನೀಲಗೌಡ ಪಾಟೀಲ ಮಾತನಾಡಿದರು.

ನಗರದ ಬಿ ಎಲ್ ಡಿ ಇ ಸಂಸ್ಥೆಯ ಬಿ ಎಂ ಪಾಟೀಲ ನರ್ಸಿಂಗ್ ಕಾಲೇಜಿನಲ್ಲಿ ದೀಪ ಬೆಳಗುವ ಮತ್ತು ಹೊಸದಾಗಿ ನಸಿರ್ಂಗ್ ಕೋರ್ಸ್ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನರ್ಸಿಂಗ್ ಕೋರ್ಸ್ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಶುಭ ಕೋರಿದ ಅವರು, ಆರೋಗ್ಯಕರ ಸಮಾಜ ಕಟ್ಟುವಲ್ಲಿ ಶುಶ್ರೂಷಕರ ಸೇವೆ ಅಮೂಲ್ಯವಾಗಿದೆ. ಭಾರತೀಯ ಶುಶ್ರೂಷಕರ ಸೇವೆ ವಿದೇಶಗಳಲ್ಲಿಯೂ ಪ್ರಶಂಸೆಗೆ ಪಾತ್ರವಾಗಿದೆ. ಹೀಗಾಗಿ, ವಿದೇಶಗಳಲ್ಲಿ ಅಲ್ಲಿನ ಸರ್ಕಾರಗಳು ಭಾರತೀಯ ನರ್ಸ್‍ಗಳನ್ನು ಗೌರವಿಸುತ್ತಿವೆ ಎಂದು ಸುನೀಲಗೌಡ ಪಾಟೀಲ ಹೇಳಿದರು.

ರಾಜೀವಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ರಾಮಚಂದ್ರ ಶೆಟ್ಟಿ ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ ಶುಶ್ರೂಷಕರ ಸೇವೆ ಬಹುಮುಖ್ಯವಾಗಿವೆ. ಬೇರೆ ವೃತ್ತಿಗಳಿಗಿಂತ ನರ್ಸ್‍ಗಳಿಗೆ ಹೆಚ್ಚಿನ ಗೌರವ ಸಿಗುತ್ತಿವೆ. ಪ್ರತಿಯೊಬ್ಬ ನಾಗರಿಕರು ಶುಶ್ರೂಷಕರನ್ನು ಬ್ರದರ್ ಮತ್ತು ಸಿಸ್ಟರ್ ಎಂದು ಕರೆಯುವ ಮೂಲಕ ತಮ್ಮ ಕುಟುಂಬ ಸದಸ್ಯರಂತೆ ಗೌರವಯುವತವಾಗಿ ಕಾಣುತ್ತಾರೆ. ಇದು ಎಲ್ಲಕ್ಕಿಂತ ಹೆಮ್ಮೆಯ ವಿಷಯ. ನರ್ಸಿಂಗ್ ವಿದ್ಯಾರ್ಥಿಗಳು ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಹೊಸ ಪುಸ್ತಕಗಳನ್ನು ಓದಿ, ಜ್ಞಾನಾರ್ಜನೆ ಮಾಡಬೇಕು ಎಂದು ಹೇಳಿದರು.

ಹುಬ್ಬಳ್ಳಿ ಕೆ.ಎಲ್.ಇ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಪೀರಾಪುರ ಮಾತನಾಡಿ, ನರ್ಸಿಂಗ್ ವಿದ್ಯಾರ್ಥಿಗಳು ಯಾವುದೇ ಸಮಸ್ಯೆ ಎದುರಾದರೂ ಕೂಡ ಧೃತಿಗೆಡದೆ ಮುನ್ನುಗ್ಗಿ ಆರೋಗ್ಯ ಕ್ಷೇತ್ರವನ್ನು ಬಲಪಡಿಸಬೇಕು ಎಂದರು.

ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯಆಡಳಿತಾಧಿಕಾರಿ ಡಾ. ಆರ್ ವಿ ಕುಲಕರ್ಣಿ ಅವರು ಮಾತನಾಡಿ ಸಂಸ್ಥೆಯಿಂದ ನರ್ಸಿಂಗ್ ಕೋರ್ಸ್‍ಗೆ ಅಗತ್ಯವಾಗಿರುವ ಎಲ್ಲ ಸೌವಲತ್ತುಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ. ಶಾಲ್ಮೊನ್ ಚೋಪಡೆ, ಕಾಲೇಜಿನ ಬೋಧಕ, ಬೋಧಕೇತರ, ವಿದ್ಯಾರ್ಥಿಗಳು ಮತ್ತು ಪೆÇೀಷಕರು ಉಪಸ್ಥಿತರಿದ್ದರು.
ಗುರು ಗುಗ್ಗರಿ ಸ್ವಾಗತಿಸಿದರು. ಸಂತೋμï ಇಂಡಿ ವಂದಿಸಿದರು. ಜಯಶ್ರೀ ಪೂಜಾರಿ ಮತ್ತು ಡಾ. ಶ್ವೇತಾ ಜವಳಿ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌