Siddheshwar Swamiji: ನಿಪ್ಪಾಣಿಗೆ ತೆರಳಿ ಶ್ರೀ ಸಿದ್ಧೇಶ್ವರ ಶ್ರೀಗಳಿಗೆ ಕೃಷಿ ಸಮಾವೇಶಕ್ಕೆ ಆಹ್ವಾನ ನೀಡಿದ ಮುಖಂಡರು

ಬೆಳಗಾವಿ: ವಿಜಯಪುರ(Vijayapura) ನಗರದ ಎಸ್. ಎಸ್. ಹೈಸ್ಕೂಲ ಬ ಶಾಲೆಯ ಮೈದಾನದಲ್ಲಿ ಮೇ 19 ರಿಂದ 23ರ ವರೆಗೆ ಕೃಷಿ ಸಮಾವೇಶ(Agri Conference) ನಡೆಯಲಿದೆ. ಐದು ದಿನಗಳ ಈ ಸಮಾವೇಶಕ್ಕೆ ಜ್ಞಾನಯೋಗಾಶ್ರಮದ(Jnanayogashrama) ಶ್ರೀ ಸಿದ್ದೇಶ್ವರ ಸ್ವಾಮೀಜಿಗಳಿಗೆ(Shree Siddheshwar Swamiji) ಆಹ್ವಾನ ನೀಡಲಾಗಿದೆ.  

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿದ ವಿಜಯಪುರದ ಮುಖಂಡರು

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿರುವ ಶ್ರೀಗಳನ್ನು ಭೇಟಿ ಮಾಡಿ ವಿಜಯಪುರ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ, ಅವರ ನೇತೃತ್ವದಲ್ಲಿ ಎ. ಎಸ್. ಪಾಟೀಲ ಕಾಮರ್ಸ್ ಮತ್ತು ಎಂ. ಬಿ. ಎ. ಕಾಲೇಜಿನ ಬೋಧಕ ಸಿಬ್ಬಂದಿ ಭೇಟಿ ಮಾಡಿದರು. ನಿಪ್ಪಾಣಿಯ ಶ್ರೀ ವೀರುಪಾಕ್ಷಿಲಿಂಗ ಸಮಾದಿ ಮಠ ಆಶ್ರಮದಲ್ಲಿರುವ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳನ್ನು ಭೇಟಿ ಮಾಡಿದ ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಕೃಷಿ ಸಮಾವೇಶ ಆಯೋಜಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಶುಭ ಕೋರಿದರು. ಈ ಸಮಾವೇಶದಲ್ಲಿ ರೈತರು, ಕೃಷಿ ಯಂತ್ರೋಪಕರಣ ತಯಾರಕರು ಮತ್ತು ಗ್ರಾಹಕರ ಹಿತ ಕಾಪಾಡುವ ನಿಟ್ಟಿನಲ್ಲಿ ವಿಚಾರಗೋಷ್ಠಿ ಸೇರಿದಂತೆ ಜಾಗೃತಿ ಕಾರ್ಯಕರ್ಮ ಆಯೋಜಿಬೇಕು. ಅಲ್ಲದೇ, ಮಣ್ಣಿನ ಗುಣಧರ್ಮಕ್ಕನುಗುಣವಾಗಿ ಬೆಳೆ ಬೆಳೆಯುವ ಕುರಿತು ಹಾಗೂ ಜನರ ಆರೋಗ್ಯಕ್ಕೆ ಪೂರಕವಾಗಿರುವ ಆಹಾರ ಧಾನ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಕಾರ್ಯಕ್ರಮ ಸಂಘಟಕರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಸಮಾವೇಶದ ಮುಖ್ಯ ಸಂಯೋಜಕ ಸಂತೋಷ ಬಿರಾದಾರ, ಎ. ಎಸ್. ಪಾಟೀಲ
ಕಾಮರ್ಸ್ ಕಾಲೇಜ(ಸ್ವಾಯತ್ತ) ದೈಹಿಕ ನಿರ್ದೇಶಕ ದಿಲೀಪಗೌಡ ಪಾಟೀಲ, ಎಂಬಿಎ ವಿಭಾಗದ ಪ್ರೊ. ಮುರುಗೇಶ ಪಟ್ಟಣಶೆಟ್ಟಿ, ಮಂಜುನಾಥ ಸಜ್ಜನ ಮತ್ತು ಶಿವಾನಂದ ಜಂಗಮಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌