ವಿಜಯಪುರ: ನೂತನ(New) ಶೈಕ್ಷಣಿಕ ವರ್ಷ(Education Year) ಆರಂಭವಾಗಿದ್ದು(Starts), ಮೊದಲ ದಿನ ಬಸವ ನಾಡು(Basava Nadu) ವಿಜಯಪುರ ಜಿಲ್ಲೆಯಲ್ಲಿ ವಿದ್ಯಾರ್ಥಿಗಳನ್ನು(Students) ಸರಕಾರಿ ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸ್ವಾಗತಿಸಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಪ್ರತಿಷ್ಠಿತ ಶ್ರೀ ಸಂಗಮೇಶ್ವರ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಿಕ ಶಾಲೆ ಮತ್ತು ಪ್ರೌಢಶಾಲೆಯ ಮಕ್ಕಳನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಎಸ್. ವಿ. ಚೋಪಡೆ, ಮುಖ್ಯ ಶಿಕ್ಷಕ ಎಚ್. ಆರ್. ಬಗಲಿ, ಪಿ. ಎಂ. ಖೇಡಗಿ, ಸಹ ಶಿಕ್ಷಕರಾದ ಟಿ. ಆರ್. ಕೋಳಿ, ಆರ್. ಆರ್. ಕೋಳಿ, ಎಸ್. ಆರ್. ಹಿಟ್ನಳ್ಳಿ, ಆರ್. ಎಂ. ಬಂಡಿ, ಪಿ. ಬಿ. ಕಟಗೇರಿ, ಎಸ್. ವಿ. ಕಟ್ಟಿಮನಿ, ಎಸ್. ಜಿ. ಉಮರಾಣಿ, ಎಂ. ಐ. ಅಮರಖೇಡ, ಎಸ್. ಆರ್. ಗಚ್ಚಿನಕಟ್ಟಿ, ಎಂ. ಜಿ. ಚಿಂಚೋಳಿ, ಎ. ಎಸ್. ವಾಲಿ, ಪಿ. ಆರ್. ಪಾಟೀಲ, ಎಸ್. ಜಿ. ಕೋಟಿ, ಬಿ. ಪಿ. ಅಂಕದ ಮುಂತಾದವರು ಮಕ್ಕಳ ಮೇಲೆ ಪುಷ್ಪ ಹಾಕಿ ಸ್ವಾಗತಿಸಿದರು.
ಅಲ್ಲದೇ, 2022-23ನೇ ಶೈಕ್ಷಣಿಕ ವರ್ಷ ಎಲ್ಲರಿಗೂ ಶುಭವನ್ನು ತರಲಿ ಎಂದು ಶಾಲೆಯ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಶುಭ ಕೋರಿದರು.