Election Training: ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ

ವಿಜಯಪುರ: ರಾಜ್ಯ ವಾಯವ್ಯ(North West) ಶಿಕ್ಷಕರ(Teachers) ಮತ್ತು ಪದವೀಧರ ಮತಕ್ಷೇತ್ರಗಳ(Graduates) ಚುನಾವಣೆಗೆ(Election) ನಿಯೋಜನೆಯಾಗಿರುವ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮ(Officers Training) ವಿಜಯಪುರ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆಯಿತು.

ಎಂ ಎಲ್ ಸಿ ಚುನಾವಣೆಗೆ ನಿಯೋಜನೆಯಾದ ಸಿಬ್ಬಂದಿಗೆ ವಿಜಯಪುರದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಚುನಾವಣೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಆಯೋಗವು ಹೊರಡಿಸಿದ ಮಾರ್ಗಸೂಚಿಗೆ ಅನುಸಾರವಾಗಿ ಕಾರ್ಯ ನಿರ್ವಹಿಸಬೇಕು.  ಚುನಾವಣೆ ಹಿನ್ನೆಲೆಯಲ್ಲಿ ಬೇರೆ ಬೇರೆ ತಂಡಗಳನ್ನು ರಚಿಸಲಾಗಿದ್ದು, ಎಲ್ಲರು ಅವರವರ ಕೆಲಸ ಏನು ಎಂಬುದನ್ನು ಅರಿತು ಅದರಂತೆ ಕಾರ್ಯ ನಿರ್ವಹಿಸಬೇಕು.  ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಅವರಿಗೆ ಸ್ಪಂದನೆ ನೀಡಬೇಕು.  ಯಾವುದೇ ಪ್ರಕರಣಗಳು ನಡೆದಲ್ಲಿ ಅದರ ಬಗ್ಗೆ ಸರಿಯಾಗಿ ಪರಿಶೀಲಿಸಿ ಮುಂದಿನ ಕ್ರಮ ವಹಿಸಬೇಕು.  ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು.  ಭಯದಲ್ಲಿ ಕೆಲಸ ಮಾಡಬಾರದು ಎಂದು ತಿಳಿಸಿದರು.

ಪ್ರಜಾಪ್ರಭುತ್ವದ ಹಬ್ಬ ಎಂದೇ ಕರೆಯುವ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ಅಧಿಕಾರಿಗಳು ನಿಷ್ಠೆಯಿಂದ ಮಾಡಬೇಕು.  ಚುನಾವಣೆ ಮುಗಿಯುವವರೆಗೂ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು. ಕೊರೊನಾ ಮಾರ್ಗಸೂಚಿ ಪಾಲಿಸಬೇಕು.  ಮಾಸ್ಕ, ಸಾಮಾಜಿಕ ಅಂತರ, ಸ್ಯಾನಿಟೈಜರ್ ಬಳಕೆ ಎಲ್ಲವು ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸಲಹೆ ಮಾಡಿದರು.


ಎಸ್ಪಿ ಎಚ್. ಡಿ. ಆನಂದ ಕುಮಾರ ಮಾತನಾಡಿ, ಚುನಾವಣೆಯ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಎಲ್ಲರೂ ಜವಾಬ್ದಾರಿಯುತ ವ್ಯಕ್ತಿಗಳಾಗಿದ್ದು, ಒತ್ತಡದಲ್ಲಿ ಕೆಲಸ ಮಾಡದೇ ಚುನಾವಣೆ ಮಾರ್ಗಸೂಚಿಗಳಿಗೆ ಅನುಸಾರವಾಗಿ  ಕಾರ್ಯ ನಿರ್ವಹಿಸಬೇಕು.  ಏನಾದರು ಗೊಂದಲಗಳಾದರೆ ದಿಢೀರ್ ನಿರ್ಧಾರ ತೆಗೆದುಕೊಳ್ಳದೇ ಚುನಾವಣಾಧಿಕಾರಿಗಳು, ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕು.  ಚುನಾವಣೆ ಪ್ರಕ್ರಿಯೆಗಳ ನಿಯಮಗಳ ಬಗ್ಗೆ ಮಾಹಿತಿ ಪಡೆದುಕೊಂಡು ನಿಖರವಾಗಿ ಕಾರ್ಯ ನಿರ್ವಹಿಸಬೇಕು.  ತಮ್ಮ ರಕ್ಷಣೆಯ ಜವಾಬ್ದಾರಿಯನ್ನು ತಾವು ನೋಡಿಕೊಳ್ಳುವುದಾಗಿ ಹೇಳಿದರು.

ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಮಾತನಾಡಿ, ಈ ಚುನಾವಣೆಯಲ್ಲಿ ಆಯಾ ತಹಸೀಲ್ದಾರ ಅವರ ಪಾತ್ರ ಮುಖ್ಯವಾಗಿರುತ್ತದೆ.  ಹೆಚ್ಚುವರಿಯಾಗಿ ಮತದಾನ ಕೇಂದ್ರಗಳನ್ನು ಮಾಡುವುದಿದ್ದರೆ ಕೂಡಲೇ ಪ್ರಸ್ತಾವನೆಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಚುನಾವಣೆ ಮಾಸ್ಟರ್ ಟ್ರೇನರ್‌ಗಳಾದ ಅಶೋಕ ಎಂ.ಲೀಮಕರ ಮತ್ತು ಎಂ.ಎನ್. ಚೋರಗಸ್ತಿ ಮಾತನಾಡಿ, ಚುನಾವಣೆಗೆ ನಿಯೋಜನೆಯಾಗಿರುವ ವಿವಿಟಿ, ವಿಎಸ್‌ಟಿ, ಎಂಸಿಎಂಸಿ, ಎಂಎಂಸಿ, ಎಂಸಿಸಿ ಸೇರಿದಂತೆ ಆಯಾ ತಂಡಗಳ ಕರ್ತವ್ಯಗಳೇನು ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಿದರು.

Leave a Reply

ಹೊಸ ಪೋಸ್ಟ್‌