Tobacco Control: ತಂಬಾಕು ಸಂಬಂಧಿ ಕಾನೂನುಗಳ ಜಾರಿಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ ದಾನಮ್ಮನವರ ಸೂಚನೆ

ವಿಜಯಪುರ: ವಿಜಯಪುರ ಜಿಲ್ಲಾಡಳಿತ(Vijayapura District Administration) ಮತ್ತು ತಂಬಾಕು ನಿಯಂತ್ರಣ ಕೋಶದ(Tobacco Control Cell) ಎರಡನೇ(Second) ತ್ರೈಮಾಸಿಕ(Quarterly) ಪ್ರಗತಿ ಪರಿಶೀಲನಾ ಸಭೆ(Review Meeting) ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ಬಿ. ದಾನಮ್ಮನವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆಯಿತು.
ಈ ಸಭೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಬಗ್ಗೆ ಸಮಗ್ರವಾಗಿ  ಚರ್ಚಿಸಲಾಯಿತು.  ತಂಬಾಕು ಪರಿಸರಕ್ಕೆ ಮಾರಕ ಧ್ಯೇಯ ವಾಕ್ಯದಡಿ ಈ ವರ್ಷವೂ ಸಹ ಎಲ್ಲ ಇಲಾಖೆಗಳಲ್ಲಿ ಮೇ 31ರಂದು ವಿಶ್ವ ತಂಬಾಕು ರಹಿತ ದಿನ ಆಚರಿಸಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮ 2007-08ರಲ್ಲಿ 11ನೇ ಪಂಚವಾರ್ಷಿಕ ಯೋಜನೆಯಡಿಯಲ್ಲಿ ಪ್ರಾರಂಭವಾಗಿದೆ.  ತಂಬಾಕ ಸೇವನೆ ದುಷ್ಪರಿಣಾಮಗಳ ಬಗ್ಗೆ ಹಾಗೂ ತಂಬಾಕು ಸಂಬಂಧಿತ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು, ತಂಬಾಕು ಉತ್ಪನ್ನಗಳ ಉತ್ಪಾದನೆ, ಶೇಖರಣೆ, ವಿತರಣೆ ಹಾಗೂ ಮಾರಾಟವನ್ನು ನಿಯಂತ್ರಿಸುವುದು ಬಹುಮುಖ್ಯ ಉದ್ದೇಶವಾಗಿದೆ.  ತಂಬಾಕು ಸಂಬಂಧಿತ ಕಾನೂನುಗಳನ್ನು ಜಾರಿ ಮಾಡಲು, ತಂಬಾಕು ವ್ಯಸನಿಗಳಿಗೆ ವ್ಯಸನ ಮುಕ್ತವಾಗುವಂತೆ ಸರಕಾರಿ ಕಚೇರಿಗಳು, ಶಿಕ್ಷಣ ಸಂಸ್ಥೆಗಳು, ಹಾಸ್ಟೇಲ್ ಗಳು, ಪ್ರವಾಸ ತಾಣಗಳು ಎಲ್ಲವೂ ತಂಬಾಕು ಮುಕ್ತ ಎಂದು ಘೋಷಿಸಿ ಕ್ರಮ ವಹಿಸದ ಬಗ್ಗೆ ಮೇ 25ರೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಗಡುವು ನೀಡಿದರು.

ವಿಜಯಪುರದಲ್ಲಿ ಡಿಸಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಸಭೆ

ಅಧಿಕಾರಿಗಳಿಗೆ ಸೂಚನೆ

ಜಿಲ್ಲಾ ತಂಬಾಕು ನಿಯಂತ್ರಣ ಘಟಕದಿಂದ 150 ತಂಬಾಕು ಮುಕ್ತ ಕಚೇರಿ ನಾಮಫಲಕ ಬೋರ್ಡಗಳನ್ನು ಮುದ್ರಿಸಿದ್ದು, ಇದುವರೆಗೆ ಜಿಲ್ಲೆಯಲ್ಲಿ ಒಟ್ಟು 65 ಇಲಾಖೆಗಳಿಗೆ ನಾಮಫಲಕ ಅಳವಡಿಸಿ ತಂಬಾಕು ಮುಕ್ತ ಕಚೇರಿ ಎಂದು ಘೋಷಿಸಲಾಗಿದೆ.  ಇನ್ನು ಕೆಲವು ಇಲಾಖೆಗಳಲ್ಲಿ ತಂಬಾಕು ಮುಕ್ತ ಕಚೇರಿ ಎನ್ನುವ ನಾಮಫಲಕ ಅಳವಡಿಸಿದ ಮಾಹಿತಿ ಬಂದಿರುವುದಿಲ್ಲ ಎಂದು ಜಿಲ್ಲಾ ಸರ್ವೇಕ್ಷಣಾ ಘಟಕದ ಅಧಿಕಾರಿ ಡಾ. ಕವಿತಾ ಅವರು ಸಭೆಗೆ ತಿಳಿಸಿದರು.  ಸರಕಾರದ ಎಲ್ಲ ಕಚೇರಿ ಕಟ್ಟಡಗಳಲ್ಲಿ ಕಡ್ಡಾಯ ತಂಬಾಕು ಮುಕ್ತ ಕಚೇರಿ ಎನ್ನುವ ನಾಮಫಲಕ ಅಳವಿಡಿಸಲು ಕ್ರಮ ಕೈಗೊಂಡು ಅದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಡಿಡಿಪಿಐಗೆ ಸೂಚನೆ

ಜಿಲ್ಲೆಯಲ್ಲಿ ನಾನಾ ತಾಲೂಕುಗಳಲ್ಲಿ 221 ಶೈಕ್ಷಣಿಕ ಸಂಸ್ಥೆಗಳ ಪೈಕಿ ಇದುವರೆಗೆ 52 ಶೈಕ್ಷಣಿಕ ಸಂಸ್ಥೆಗಳು ತಂಬಾಕು ಮುಕ್ತ ಸಂಸ್ಥೆಗಳು ಎಂದು ಘೋಷಿಸಿದ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ವರದಿ ನೀಡಿದ್ದಾರೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.  ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಸರಕಾರದ ಮಾರ್ಗಸೂಚಿಯಂತೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ಘೋಷಿಸುವ ಪ್ರಕ್ರಿಯೆಯನ್ನು ಮೇ 25 ರೊಳಗೆ ನಡೆಸಿ ಅದರ ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸಲು ಕ್ರಮ ಕೈಗೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದರು.

ಇದನ್ನೂ ಓದಿ:

Election Training: ವಾಯವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳಿಗೆ ತರಬೇತಿ

ತನಿಖಾ ದಳಕ್ಕೆ ಸೂಚನೆ

ಜಿಲ್ಲೆಯಲ್ಲಿ ಕೋಟ್ಪಾ-2003 ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಾಲೂಕು ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರತಿ 3 ತಿಂಗಳಿಗೊಮ್ಮೆ ಸಮನ್ವಯ ಸಮಿತಿ ಸಭೆಯನ್ನು ಏರ್ಪಡಿಸಿ ತಾಲೂಕು ಮಟ್ಟದ ತನಿಖಾ ದಳದ ಸದಸ್ಯರಿಗೆ ಕಡ್ಡಯವಾಗಿ ಪ್ರತಿ ಮಾಹೆ ಎರಡು ದಾಳಿಗಳನ್ನು ನಿಗದಿಪಡಿಸಿ ಕ್ರಮ ಕೈಗೊಳ್ಳಲು ಇದೆ ವೇಳೆ ಜಿಲ್ಲಾಧಿಕಾರಿಗಳು ಎಲ್ಲ ತಹಸೀಲ್ದಾರರು ಮತ್ತು ತಾ. ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ತಹಸೀಲ್ದಾರರಿಗೆ ಸೂಚನೆ

ಶೈಕ್ಷಣಿಕ ಸಂಸ್ಥೆಗಳು 100 ಅಡಿ ಅಂತರದಲ್ಲಿ ಮಾರಾಟ ಮಾಡುತ್ತಿರುವ ತಂಬಾಕು ಉತ್ಪನ್ನಗಳ ಅಂಗಡಿಗಳ ವಿವರಗಳನ್ನು ಶಿಕ್ಷಣ ಇಲಾಖೆಯಿಂದ ಪಡೆದು ತನಿಖಾ ದಳದ ಸದಸ್ಯರುಗಳೊಂದಿಗೆ ತೆರವುಗೊಳಿಸುವಂತೆ ಕ್ರಮ ಕೈಗೊಂಡು ಸರಕಾರದ ಮಾರ್ಗಸೂಚಿಯಂತೆ ಪ್ರತಿ ಶೈಕಣಿಕ ಸಂಸ್ಥೆಯನ್ನು ತಂಬಾಕು ಮುಕ್ತ ಸಂಸ್ಥೆಯನ್ನಾಗಿಸಲು, ತಾಲೂಕು ಮಟ್ಟದ ದಾಳಿಗೆ ದಿನಾಂಕ ನಿಗದಿ ಪಡಿಸಿ ಪ್ರತಿ ಮಾಹೆ ದಾಳಿಯಾಗುವಂತೆ ಮೇಲ್ವಿಚಾರಣೆ ಮಾಡಲು ಇದೆ ವೇಳೆ ಜಿಲ್ಲಾಧಿಕಾರಿಗಳು ಎಲ್ಲ ತಾಲೂಕಿನ ತಹಸೀಲ್ದಾರರಿಗೆ ಸೂಚನೆ ನೀಡಿದರು.

ಅಬಕಾರಿ ಇಲಾಖೆಗೆ ಸೂಚನೆ

ಅಬಕಾರಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ಮದ್ಯೆದ ಅಂಗಡಿ ಬಾರಗಳಲ್ಲಿ ಸೆಕ್ಷನ್ 4ರ ನಾಮಫಲಕ ಅಳವಡಿಸಿ ಎಲ್ಲ ಮದ್ಯದ ಅಂಗಡಿ ಬಾರಗಳಲ್ಲಿ ಕೊಟ್ಪಾ ನಿಯಮಗಳು ಅನುಷ್ಠಾನವಾಗುವಂತೆ ಗಮನ ಹರಿಸಿ ತನಿಖಾದಳದ ಜೊತೆಗೆ ದಾಳಿಯಲ್ಲಿ ಪಾಲ್ಗೊಂಡು ಬಾರಗಳಲ್ಲಿ ಧೂಮಪಾನವಾಗದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಧಿಕಾರಿಗಳಿಗೆ ನಿರ್ದೇಶನ

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಬರುವಂತಹ ಎಲ್ಲ ವಸತಿ ನಿಲಯಗಳು ಮತ್ತು ಸಂಸ್ಥೆಗಳನ್ನು ಸರಕಾರದ ಮಾರ್ಗಸೂಚಿಯಂತೆ ತಂಬಾಕು ಮುಕ್ತ ಸಂಸ್ಥೆಗಳನ್ನಾಗಿ ಘೋಷಣೆ ಮಾಡಲು ಕ್ರಮ ವಹಿಸಬೇಕು.  ಪ್ರವಾಸೋದ್ಯಮ ಇಲಾಖೆಯಡಿ ನಾನಾ ಪ್ರಮುಖ ಪ್ರವಾಸಿ ಸ್ಥಳಗಳನ್ನು ತಂಬಾಕು ಮುಕ್ತವನ್ನಾಗಿ ಘೋಷಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಈ ಸಭೆಯಲ್ಲಿ ಉಪವಿಭಾಗಾಧಿಕಾರಿ ಬಲರಾಮ ಲಮಾಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಕುಮಾರ ಯರಗಲ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜೈಬುನ್ನಿಸಾ ಬೀಳಗಿ, ಕುಟುಂಬ ಕಲ್ಯಾಣಧಿಕಾರಿ ಡಾ. ರಾಜೇಶ್ವರಿ ಗೋಲಗೇರಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಗುಣಾರಿ, ಜಿಲ್ಲಾ ತಂಬಾಕು ಸಲಹೆಗಾರ ಡಾ. ಪ್ರಕಾಶ ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌